ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಈ ವಾರ ಸಂಭವಿಸಿದ ಘಟನೆಗಳು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿವೆ. ಮನೆಯಲ್ಲಿ ಮೊದಲ ಗ್ರ್ಯಾಂಡ್ ಫಿನಾಲ್ ಚರ್ಚೆಗಳು ಮುಗಿಯುವವೇಳೆಗೆ, ದೆವ್ವದ ಕಥೆ ಎಲ್ಲಾ ಕಡೆ ಹಬ್ಬಿದೆ. ರಕ್ಷಿತಾ, ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರನ್ನು ಒಳಗೊಂಡ ಈ ರಹಸ್ಯಮಯ ಘಟನೆಗಳು ಮನೆಯ ವಾತಾವರಣವನ್ನು ಪೂರ್ತಿ ಬದಲಾಯಿಸಿವೆ.
ಮಧ್ಯರಾತ್ರಿಯಲ್ಲಿ ರಕ್ಷಿತಾ ಅಕಸ್ಮಾತ್ ಎದ್ದು ರಾರಾ ಹಾಡಿಗೆ ನೃತ್ಯ ಮಾಡಲು ಆರಂಭಿಸಿದಾಗ, ಇದು ದೆವ್ವ ಎಂದು ಸ್ಪರ್ಧಿಗಳು ಶಂಕೆ ವ್ಯಕ್ತಪಡಿಸಿದರು.ನಂತರ, ಅಶ್ವಿನಿ ಮತ್ತು ಜಾಹ್ನವಿ ರಾತ್ರಿಯ ವೇಳೆ ಗೆಜ್ಜೆಗಳ ಸದ್ದು ಮಾಡಿದ್ದಾರೆ ಹೀಗಾಗಿ ಇತರೆ ಸ್ಪರ್ಧಿಗಳ ಹೆದರಿದ್ದರು.
ಈ ಘಟನೆಗಳ ನಡುವೆ, ಬಾದ್ಶಾ ಈ ದೆವ್ವದ ಸತ್ಯವನ್ನು ಬಹಿರಂಗಪಡಿಸಲು ಸಿದ್ಧರಾಗದ್ದಾರೆ.ಈ ಸಂಪೂರ್ಘ ಘಟನೆಯ ಹಿಂದಿನ ನಿಜವಾದ ಸತ್ಯವನ್ನು ಹೊರಗಿಡಲು ಇಂದು ಅ.18 ಸಂಜೆ ಕಿಚ್ಚ ಬರಲಿದ್ದಾರೆ.ಕೆಲವು ಸ್ಪರ್ಧಿಗಳು ಈ ಘಟನೆಗಳನ್ನು ಗಂಭೀರವಾಗಿ ತೆಗೆದುಕೊಂಡರೆ, ಇತರರು ಇದನ್ನು ಕೇವಲ ಕೌಶಲ್ಯದ ಆಟವೆಂದು ಪರಿಗಣಿಸುತ್ತಿದ್ದಾರೆ.