ಬೆಂಗಳೂರು: ಬಿಗ್ ಬಾಸ್ ಕನ್ನಡ ಮನೆಯಲ್ಲಿ ಈ ವಾರದ ಉತ್ತಮ ಮತ್ತು ಕಳಪೆ ಸ್ಪರ್ಧಿಗಳ ಆಯ್ಕೆ ಪೂರ್ಣಗೊಂಡಿದೆ. ಕಳೆದ ವಾರ ಉತ್ತಮ ಸ್ಪರ್ಧಿಯಾಗಿ ಆಯ್ಕೆಯಾಗಿದ್ದ ಧ್ರುವಂತ್, ಈ ವಾರ ಬಹುತೇಕ ಸ್ಪರ್ಧಿಗಳ ಮತದಿಂದ ಕಳಪೆ ಸ್ಪರ್ಧಿಯಾಗಿ ಆಯ್ಕೆಯಾಗಿ ಜೈಲು ಸೇರಿದ್ದಾರೆ.
ಕ್ಯಾಪ್ಟನ್ ರಘು ಅವರು ಬಿಗ್ ಬಾಸ್ ಕಡೆಯಿಂದ ನೀಡಿದ ಮೆಡಲ್ ಅನ್ನು ಧ್ರುವಂತ್ ತಿರಸ್ಕರಿಸಿದ್ದು. ಕಳೆದ ವಾರ ಉತ್ತಮ ಸ್ಪರ್ಧಿಯಾಗಿ ಆಯ್ಕೆಯಾದ ನಂತರ ಅವರಿಗೆ ನೀಡಲಾಗಿದ್ದ ಮೆಡಲ್ ಅನ್ನು ಕೆಲವು ಬೆಳವಣಿಗೆಗಳಿಗೆ ಬೇಸರಗೊಂಡ ಧ್ರುವಂತ್ ವಾಪಸ್ ತಿರುಗಿಸಿದ್ದರು.
ಸ್ಪರ್ಧಿಗಳು ಧ್ರುವಂತ್ ಅವರ ವಿರುದ್ಧ, ನಾವು ನೀಡಿದ ಗೌರವಕ್ಕೆ ನೀವು ಅಗೌರವ ಸೂಚಿಸಿದ್ದೀರಿ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ, ಅನಗತ್ಯವಾಗಿ ಹೆಚ್ಚು ಮಾತನಾಡುವುದು ಮತ್ತು ಇತರ ಸ್ಪರ್ಧಿಗಳಿಗೆ ಹಸ್ತಕ್ಷೇಪ ಮಾಡುವುದು ಸೇರಿದಂತೆ ಹಲವಾರು ಆರೋಪಗಳನ್ನು ಇತರ ಸ್ಪರ್ಧಿಗಳು ಮುಂದಿಟ್ಟಿದ್ದಾರೆ.
ಈಗಾಗಲೇ ಪ್ರಸಾರವಾಗಿರುವ ಪ್ರೊಮೋದಲ್ಲಿ ಧ್ರುವತ್ ಜೈಲು ಸೇರಿರುವುದನ್ನು ತೋರಿಸಲಾಗಿದ್ದು, ಜೈಲಿನ ಬೀಗದ ಕೈ ಧನುಷ್ ಅವರ ಬಳಿ ಇರುವುದನ್ನು ಕಾಣಬಹುದು, ಇದರಿಂದಾಗಿ ಅವರು ಮುಂದಿನ ವಾರದ ಕ್ಯಾಪ್ಟನ್ ಆಗಬಹುದೆಂದು ವೀಕ್ಷಕರು ಊಹಿಸುತ್ತಿದ್ದಾರೆ.





