ಬಿಗ್ ಬಾಸ್ ಕನ್ನಡ ಸೀಸನ್ 12 ಈಗ ಮತ್ತೊಂದು ಹಂತಕ್ಕೆ ಕಾಲಿಟ್ಟಿದೆ. ಮನೆಯಲ್ಲಿ 73 ದಿನಗಳನ್ನು ಮುಗಿಸಿರುವ ಸ್ಪರ್ಧಿಗಳು ಈಗ ವಿಲನ್ ಹಂಗಾಮಿಯಲ್ಲಿ ಮುಳುಗಿದ್ದಾರೆ. ಬಿಗ್ ಬಾಸ್ ನೀಡಿರುವ ಹೊಸ ಥೀಮ್‌ನಡಿ ವಿಲನ್ ಮನೆಯಲ್ಲಿ ಕಠಿಣ ಟಾಸ್ಕ್‌ಗಳನ್ನು ನೀಡುತ್ತಿದ್ದು, ಪ್ರತಿಯೊಂದು ಟಾಸ್ಕ್ ಸ್ಪರ್ಧಿಗಳ ಸಹನೆಯನ್ನೇ ಪರೀಕ್ಷಿಸುತ್ತಿದೆ.
ಇದರ ನಡುವೆ ಮನೆ ಎರಡು ಗುಂಪುಗಳಾಗಿ ವಿಭಜನೆಯಾಗಿರುವುದು ಪ್ರೇಕ್ಷಕರ ಗಮನ ಸೆಳೆದಿದೆ. ಒಂದು ಗುಂಪನ್ನು ರಜತ್ ಮುಂದಾಳತ್ವ ವಹಿಸಿಕೊಂಡಿದ್ದು, ಧನುಷ್, ಗಿಲ್ಲಿ ನಟ, ಕಾವ್ಯ ಶೈವಾ, ರಘು ಮತ್ತು ರಾಶಿಕಾ ಜೊತೆಯಲ್ಲಿದ್ದಾರೆ. ಮತ್ತೊಂದು ಪಾಳೆಯಲ್ಲಿ ಅಶ್ವಿನಿ ಗೌಡ ಅವರ ನೇತೃತ್ವದಲ್ಲಿ ಉಳಿದ ಸ್ಪರ್ಧಿಗಳು ಜತೆಯಾಗಿದ್ದಾರೆ. ಈ ಎರಡು ಗುಂಪಿನ ನಡುವೆ ನಡೆಯುತ್ತಿರುವ ಸಣ್ಣಸಣ್ಣ ಘರ್ಷಣೆಗಳು ಹಾಗೂ ಟಾಸ್ಕ್‌ಗಳ ನಡುವೆ ನಡೆಯುವ ಮಾತಿನ ಚಕಮಕಿ ಶೋಗೆ ಮತ್ತಷ್ಟು ಮನರಂಜನೆ ನೀಡುತ್ತಿದೆ.
ವಿಲನ್ ಚಾಲೆಂಜ್-ಒಂದೇ ಹಾಟ್ ಟಾಪಿಕ್!
ಬಿಗ್ ಬಾಸ್ ಮನೆಯಲ್ಲಿ ಈಗ ವಿಲನ್‌ದೇ ರೂಲ್ಸ್. ಪ್ರತಿಯೊಬ್ಬ ಸ್ಪರ್ಧಿಗೂ ಹೊಸ ಹೊಸ ಚಾಲೆಂಜ್‌ಗಳು ಎದುರಾಗುತ್ತಿವೆ. ನಿನ್ನೆ ಕಾವ್ಯ ಅವರಿಗೆ ವಿಲನ್ ಕೂದಲಿಗೆ ಬಣ್ಣ ಹಾಕಿಸುವ ಟಾಸ್ಕ್ ನೀಡಿದರೆ, ರಜತ್ ಅವರಿಗೆ ಟ್ಯಾಟೂ ಟಾಸ್ಕ್ ಸಿಕ್ಕಿತ್ತು. ಈ ಟಾಸ್ಕ್‌ಗಳನ್ನು ಇಬ್ಬರೂ ಧೈರ್ಯದಿಂದ ಪೂರೈಸಿದರು.
ಕಾವ್ಯ ಹೊಸ ಕೂದಲು ಬಣ್ಣದಲ್ಲೇ ಕಂಗೊಳಿಸಿದರೆ, ರಜತ್ ಹೊಸ ಟ್ಯಾಟೂ ಮೂಲಕ ಎಲ್ಲರ ಗಮನ ಸೆಳೆದರು. ತಮ್ಮ ಭುಜದ ಮೇಲೆ ಬಿಗ್ ಬಾಸ್ ಲೋಗೋ ಟ್ಯಾಟೂ ಹಾಕಿಸಿಕೊಂಡ ರಜತ್, “ನಾನು ವೃತ್ತಿಪರ ಟ್ಯಾಟೂ ಕಲಾವಿದರಿಂದ ಟ್ಯಾಟೂ ಹಾಕಿಸಿಕೊಂಡಿದ್ದು, ಇದಕ್ಕೆ ನಾನು ಸಂಪೂರ್ಣ ಒಪ್ಪಿಗೆಯೊಂದಿಗೆ ಸೈನ್ ಮಾಡಿದ್ದೇನೆ” ಎಂದು ತಿಳಿಸಿದರು.
ಮಾಳು ಸರದಿ-ಹೊಸ ಲುಕ್ ವೈರಲ್!
ಹೊಸ ಪ್ರೋಮೋದಲ್ಲಿ ಮಾಳು ಅವರಿಗೆ ವಿಲನ್ ನೀಡಿರುವ ಹೊಸ ಟಾಸ್ಕ್ ಔಟ್ ಆಗಿದೆ. ಚಿತ್ರದಲ್ಲಿ ತೋರಿಸಿದಂತೆ ಹೇರ್‌ಸ್ಟೈಲ್ ಮಾಡಿಕೊಳ್ಳಬೇಕಾದ ಹೊಸ ಚಾಲೆಂಜ್ ಮಾಳು ಅವರಿಗೆ ಸಿಕ್ಕಿದೆ.
ಈ ವೇಳೆ ಗಿಲ್ಲಿ ನಟ, “ಮಾಳು ನೋಡ್ತಾ ಇದ್ರೆ ಹೊಟ್ಟೆ ಉರಿಯುತ್ತಿದೆ” ಎಂದು ನಗುತ್ತಾ ಹೇಳಿದ್ದಾರೆ. ಅಲ್ಲದೆ, ಮಾಳು ಫೋಟೋ ಮುಂಚೇ ನೋಡಿದ್ದರೆ ಈ ಟಾಸ್ಕ್ ಒಪ್ಪುತ್ತಿರಲಿಲ್ಲ ಎಂದು ಹೇಳಿ, ಧ್ರುವಂತ್‌ಗೆ ಪರೋಕ್ಷ ಟಾಂಗ್ ನೀಡಿದರು. ಮಾಳು ಹೊಸ ಲುಕ್‌ಗಾಗಿ ಫ್ಯಾನ್ಸ್ ಈಗಲೇ ಕಾಯುತ್ತಿದ್ದಾರೆ.
ಸೀಸನ್ 12ನಲ್ಲೇ ಗಿಲ್ಲಿ ನಟ ಈಗಾಗಲೇ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ. ಈ ಬಾರಿ ಗಿಲ್ಲಿಯೇ ಟ್ರೋಫಿ ಗೆಲ್ಲುತ್ತಾರೆಂದು ಫ್ಯಾನ್ಸ್ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಈ ವಾರ ಎಲಿಮಿನೇಷನ್- 7 ಹೆಸರುಗಳ ಲಿಸ್ಟ್
ಈ ವಾರ ಬಿಗ್ ಬಾಸ್ ಮನೆ ತೀವ್ರ ಸ್ಪರ್ಧೆಯಲ್ಲಿದೆ. ಏಕೆಂದರೆ ಎಲಿಮಿನೇಷನ್‌ಗೆ ಏಕಕಾಲಕ್ಕೆ ಏಳು ಮಂದಿ ನಾಮಿನೇಟ್ ಆಗಿದ್ದಾರೆ. ರಜತ್, ಗಿಲ್ಲಿ, ಧ್ರುವಂತ್, ರಕ್ಷಿತಾ, ಸ್ಪಂದನಾ, ಅಶ್ವಿನಿ, ರಾಶಿಕಾ ಈ ಪೈಕಿ ಯಾರು ಔಟ್ ಆಗಲಿ, ಶೋನ ಗೇಮ್‌ಪ್ಲೇ ಸಂಪೂರ್ಣ ಬದಲಾಗೋದು ಖಚಿತ.





