ಬಾದ್‌ಷಾ ಕಿಚ್ಚ ಸುದೀಪ್, ಬಿಗ್‌ಬಾಸ್ ನಿರೂಪಣೆಗೆ ಫುಲ್‌ಸ್ಟಾಪ್ ಇಟ್ಟಿದ್ರು. ಆದ್ರೆ ಅವ್ರ ಮನವೊಲಿಸಿ, ಇಲ್ಲಸಲ್ಲದ ಭರವಸೆಗಳನ್ನ ನೀಡಿ ವಾಪಸ್ ಕರೆತಂದಿದ್ದು ಮಾತ್ರ ಕಲರ್ಸ್ ಕನ್ನಡ ಟೀಂ. ಹಾಗಾದ್ರೆ ಅಂದು ರನ್ನನಿಗೆ ಕೊಟ್ಟ ಆ ಮಾತನ್ನ ಮತ್ತೆ ತಪ್ಪಿದ್ರಾ ಬಿಗ್ ಬಾಸ್ ಆಯೋಜಕರು..? ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ಮೌನಕ್ಕೆ ಜಾರಿರೋದೇಕೆ ಕಿಚ್ಚ..? ಈ ಬಗ್ಗೆ ಕಂಪ್ಲೀಟ್ ಕಹಾನಿ ಇಲ್ಲಿದೆ ನೋಡಿ.
ಬಿಗ್‌ಬಾಸ್ ಸೀಸನ್ 12 ಕೇವಲ ಹತ್ತೇ ದಿನಕ್ಕೆ ನಿಂತು ಹೋದ ಹಿನ್ನೆಲೆ ಬಿಗ್‌ಬಾಸ್‌ನ ವೀಕ್ಷಕರು ಎಷ್ಟು ಬೇಜಾರಾಗಿದ್ದಾರೋ, ಅದಕ್ಕಿಂತ ಹೆಚ್ಚಾಗಿ ಕಿಚ್ಚ ಸುದೀಪ್ ಹಾಗೂ ಅವ್ರ ಡೈಹಾರ್ಡ್ ಫ್ಯಾನ್ಸ್ ಬೇಸರಗೊಂಡಿದ್ದಾರೆ. ಹೌದು.. ನನಗೆ ಬಿಗ್‌ಬಾಸ್ ಸಹವಾಸ ಬೇಡ. ನಿರೂಪಣೆ ಸಾಕು ಅಂತ ಫುಲ್‌ಸ್ಟಾಪ್ ಇಟ್ಟಿದ್ದ ಬಾದ್‌ಷಾ ಕಿಚ್ಚ ಸುದೀಪ್‌ರನ್ನ ಮನವೊಲಿಸಿ, ಮತ್ತೆ ಕರೆದುಕೊಂಡು ಬಂದು ನಿರೂಪಣೆ ಮಾಡಿಸ್ತಿದೆ ಕಲರ್ಸ್ ಕನ್ನಡ.
ಕಿಚ್ಚ ಮೌನಂ ಶರಣಂ ಗಚ್ಚಾಮಿ.. ಬಿಗ್‌ಬಾಸ್ ಫ್ಯಾನ್ಸ್ ಭ್ರಮನಿರಸ
ರನ್ನನಿಗೆ ಕೊಟ್ಟ ಆ ಮಾತು.. ಮತ್ತೆ ತಪ್ಪಿದ ಬಿಗ್ ಆಯೋಜಕರು..?
ಬರೀ ಈ ಒಂದು ಸೀಸನ್‌ಗೆ ಮಾತ್ರವಷ್ಟೇ ಅಲ್ಲ, ಕನ್ನಡದ ಬಿಗ್‌ಬಾಸ್ ಸೀಸನ್-15ರವರೆಗೂ ಸುದೀಪ್ ಅವರೇ ಹೋಸ್ಟ್. ಇದು ಈ ಬಾರಿಯ ಬಿಗ್‌ಬಾಸ್ ಮೊದಲ ಸುದ್ದಿಗೋಷ್ಠಿಯಲ್ಲಿ ರಿವೀಲ್ ಆದ ವಿಷಯಗಳಲ್ಲೊಂದು. ಆದ್ರೆ ಕರೆಸಿ ಮತ್ತೆ ಮತ್ತೆ ಅಪಮಾನ ಮಾಡುವಂಥದ್ದೇನಿತ್ತು ಬಿಗ್ ಬಾಸ್ ಆಯೋಜಕರಿಗೆ ಅನ್ನೋದೇ ಯಕ್ಷ ಪ್ರಶ್ನೆ. ಈ ಹಿಂದೆ ಕೂಡ ವಿವಾದಗಳ ಸುಳಿಯಲ್ಲಿ ಸಿಲುಕಿದ್ದ ಬಿಗ್ ಬಾಸ್ ಕಂಟೆಸ್ಟೆಂಟ್ಸ್ ಕುರಿತು ಸುದೀಪ್ ಬಿಗ್ ಬಾಸ್ ಆಯೋಜಕರ ಜೊತೆ ಮಾತುಕತೆ ನಡೆಸಿದ್ರು. ಇನ್ಮೇಲೆ ವಿವಾದಗಳು ಇರಲ್ಲ ಅನ್ನೋ ಭರವಸೆ ಆಯೋಜಕರು ನೀಡಿದ್ರಂತೆ.
ಆದ್ರೀಗ ಆಗ್ತಿರೋದೇ ಬೇರೆ. ಅಂದುಕೊಂಡಿದ್ದು ಒಂದಾದ್ರೆ ಆಗ್ತಿರೋದು ಮತ್ತೊಂದು. ಸೀಸನ್ ಆರಂಭದಲ್ಲೇ ಕಂಟಕ ಎದುರಾಗಿದೆ. ಕಿಚ್ಚನ ಕಂಡಿಷನ್ಸ್‌ಗೆ ಓಕೆ ಅಂದಿದ್ದ ಕಲರ್ಸ್ ಕನ್ನಡದ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್, ಶೋ ಡೈರೆಕ್ಟರ್ ಹಾಗೂ ಎಂಡಮಾಲ್ ಸಂಸ್ಥೆ ಈ ಕಾನೂನು ತೊಡಕುಗಳು ಬಾರದಂತೆ ನೋಡಿಕೊಳ್ಳುವ ವಿವೇಕತೆ ಇಲ್ಲದಾಗಿದೆ. ಅದೇ ಕಾರಣಕ್ಕೆ ಇಂತಹ ಪ್ರಮಾದ ಎದುರಾಗಿದೆ.
ಇದ್ರಿಂದ ಕಿಚ್ಚ ಸುದೀಪ್ ಅಕ್ಷರಶಃ ಮೌನಕ್ಕೆ ಜಾರಿದ್ದಾರೆ. ಯಾರಿಗೂ ಯಾವ ವಿಷಯಕ್ಕೂ ರಿಯಾಕ್ಟ್ ಮಾಡ್ತಿಲ್ಲ. ಕಿಚ್ಚ ಸೈಲೆನ್ಸ್ ಬಿಗ್‌ಬಾಸ್ ವೀಕ್ಷಕರಿಗೂ ಆತಂಕ ತಂದಿದೆ. ಅಂದು ಕೊಟ್ಟ ಮಾತನ್ನ ತಪ್ಪಿದ ಬಿಗ್‌ಬಾಸ್ ಆಯೋಜಕರ ವಿರುದ್ಧ ಕಿಚ್ಚ ಅಸಮಾಧಾನಗೊಂಡಿದ್ದಾರೆ ಅನ್ನೋದು ಸ್ಪಷ್ಟವಾಗ್ತಿದೆ. ಪ್ರಕರಣ ಕೋರ್ಟ್‌ನಲ್ಲಿ ಇರೋದ್ರಿಂದ ಅದಕ್ಕೆ ರಿಯಾಕ್ಟ್ ಮಾಡೋದು ಸರಿಯಲ್ಲ ಅನ್ನೋ ಕಾರಣಕ್ಕೆ ಮೌನಕ್ಕೆ ಜಾರಿದ್ರಾ ಅನ್ನೋದು ಕೂಡ ಗೊತ್ತಾಗ್ತಿಲ್ಲ.
ಬಿಗ್‌ಬಾಸ್ ಬಂದ್ ನಡುವೆ ಮಾರ್ಕ್ ಸಾಂಗ್‌ಗೆ ಟ್ವೀಟ್
ಮಾರ್ಕ್ ಸೈಕ್ ಸೈತಾನ್ ಸಾಂಗ್ ಎಲ್ಲೆಡೆ ಸಖತ್ ವೈರಲ್
ಯೆಸ್.. ಇದು ಬಿಗ್‌ಬಾಸ್ ಜಂಜಾಟದ ನಡುವೆ ಸುದೀಪ್ ಮಾಡಿರೋ ಲೇಟೆಸ್ಟ್ ಟ್ವೀಟ್. ಮಾರ್ಕ್ ಚಿತ್ರದ ಮೊದಲ ಸಾಂಗ್ ಲಾಂಚ್ ಆಗಿದ್ದು, ನನ್ನ ಪ್ರೀತಿಸೋ ಎಲ್ಲರಿಗೂ ಇದನ್ನ ಡೆಡಿಕೇಟ್ ಮಾಡುತ್ತೇನೆ ಎಂದಿದ್ದಾರೆ ಕಿಚ್ಚ. ಅಷ್ಟೇ ಅಲ್ಲ, ನಿಮ್ಮ ಪ್ರೀತಿ ಮತ್ತು ನಿಮ್ಮ ಸಪೋರ್ಟ್.. ಅದುವೇ ನನ್ನ ಶಕ್ತಿ ಎಂದಿದ್ದಾರೆ. ನೀವು ಬರೀ ನನ್ನ ಅಭಿಮಾನಿಗಳಲ್ಲ. ನಿಜವಾದ ನನ್ನ ಬಾದ್‌ಷಾಗಳು ನೀವು. ಕನ್ನಡ ತೆಲುಗು ಹಾಗೂ ತಮಿಳಲ್ಲಿ ಲಿರಿಕಲ್ ಸಾಂಗ್ ಇದೆ ವೀಕ್ಷಿಸಿ ಅಂತ ಲಿಂಕ್ ಸಮೇತ ಟ್ವೀಟ್ ಮಾಡಿದ್ದಾರೆ ಸುದೀಪ್.
ಈಗಾಗ್ಲೇ ಮಾರ್ಕ್ ಚಿತ್ರದ ಸೈಕ್ ಸೈತಾನ್ ಅನ್ನೋ ಡ್ಯಾನ್ಸಿಂಗ್ ನಂಬರ್ ಟಾಕ್ ಆಫ್ ದಿ ಟೌನ್ ಆಗಿದೆ. ಕಿಚ್ಚ ಡ್ಯಾನ್ಸ್ ಸಖತ್ ಇಂಪ್ರೆಸ್ಸೀವ್ ಆಗಿದ್ದು, ವಿಂಟೇಜ್ ಕಿಚ್ಚನನ್ನ ನೆನಪಿಸ್ತಿದೆ ಸೈಕ್ ಸಾಂಗ್. ಅಂದಹಾಗೆ ಕಳೆದ ವರ್ಷ ಕೂಡ ಬಿಗ್‌ಬಾಸ್ ಸೀಸನ್ ವೇಳೆ ಮ್ಯಾಕ್ಸ್ ಸಿನಿಮಾ ಮಾಡಿದ್ರು. ಈ ವರ್ಷ ಸಹ ಮಾರ್ಕ್ ಸಿನಿಮಾದ ಜೊತೆ ಜೊತೆಗೆ ಬಿಗ್‌ಬಾಸ್ ಆರಂಭಿಸಿದ್ರು ಕಿಚ್ಚ. ಆದ್ರೀಗ ಇಂತಹ ಸಂದಿಗ್ಧ ಪರಿಸ್ಥಿತಿ ಎದುರಾಗಿರೋದು ಎಲ್ಲರಿಗೂ ಶಾಕ್ ತಂದಿದೆ.

ಏನಂತಾರೆ ಬಿಗ್‌ಬಾಸ್ ಫ್ಯಾನ್ಸ್..? ಕಿಚ್ಚನ ಫ್ಯಾನ್ಸ್‌ಗೆ ಆಘಾತ..!
ಮತ್ತೆ ಯಾವಾಗ ಶುರುವಾಗುತ್ತೆ ಬಿಗ್ ಆಟ ? ಪ್ಲಾನ್ ಬಿ ಏನು?
ಸದ್ಯ ಜಾಲಿವುಡ್ ಸ್ಟುಡಿಯೋಸ್ ಮಾಡಿರೋ ಎಡವಟ್‌ನಿಂದ ಪ್ರಕರಣ ಹೈ ಕೋರ್ಟ್ ನಲ್ಲಿದೆ. ಒಂದ್ಕಡೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹಾಗೂ ಹಾಲಿ ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ಮಾಲೀಕರು ಫೈನ್ ಕಟ್ಟುವವರೆಗೆ ಅನುಮತಿ ನೀಡುವ ಪ್ರಮೇಯವೇ ಇಲ್ಲ ಅಂತಿದ್ದಾರೆ. ಮತ್ತೊಂದ್ಕಡೆ 40 ಕೋಟಿ ರೂಪಾಯಿಗಳ ಬಹುದೊಡ್ಡ ದಂಡವಿದೆ ಎನ್ನಲಾಗ್ತಿದೆ. ಇದರ ನಡುವೆ ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ಬಗ್ಗೆ ಸಾಕಷ್ಟು ಗೊಂದಲಗಳು ಕೂಡ ಇದೆ. ಹಾಗಾಗಿ ಸದ್ಯ ಬಿಗ್‌ಬಾಸ್ ಶುರು ಆಗುವ ವಿಚಾರ ಗೊಂದಲದ ಗೂಡಾಗಿದೆ.

ಈ ಎಲ್ಲಾ ತಿಕ್ಕಾಟಗಳ ನಡುವೆ ಬಿಗ್‌ಬಾಸ್ ಆಯೋಜಕರು ಏನು ಮಾಡ್ತಾರೆ ಅನ್ನೋದೇ ದೊಡ್ಡ ಪ್ರಶ್ನೆ. ಹತ್ತೇ ದಿನದಲ್ಲಿ ಹೊಸ ಲೊಕೇಷನ್‌ನಲ್ಲಿ ಹೊಸ ಬಿಗ್ ಮನೆ ನಿರ್ಮಾಣ ಮಾಡುವಷ್ಟು ಆರ್ಥಿಕವಾಗಿ ಬಲಿಷ್ಟವಾಗಿದೆ ಎಂಡಮಾಲ್ ಕಂಪನಿ. ಹೀಗಿರುವಾಗ ಕೋರ್ಟ್ ಮೂಲಕ ಪರಸ್ಪರ ಸಂಧಾನಗೊಂಡು ಸಮಸ್ಯೆ ಬಗೆಹರಿಸಿಕೊಳ್ತಾರಾ ಅಥ್ವಾ ಪ್ರತಿಷ್ಠಿಗೆ ಬಿದ್ದು ಮತ್ತಷ್ಟು ಎಡವಟ್ ಮಾಡಿಕೊಳ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.ಒಟ್ಟಾರೆ ಆದಷ್ಟು ಬೇಗ ಸಮಸ್ಯೆ ಬಗೆಹರಿಯಲಿ. ಸುದೀಪ್ ನಡೆಸಿಕೊಡ್ತಿರೋ ಜನಪ್ರಿಯ ಬಿಗ್‌ಬಾಸ್ ಶೋ ಬೇಗ ಕಿಕ್‌ಸ್ಟಾರ್ಟ್ ಆಗಲಿ ಅನ್ನೋದು ನಮ್ಮ ಆಶಯ.





