Bigg Boss Kannada 12 ಈ ವಾರ ಫ್ಯಾಮಿಲಿ ವೀಕ್ ರೌಂಡ್‌ನೊಂದಿಗೆ ವೀಕ್ಷಕರಿಗೆ ಭಾವನಾತ್ಮಕ ಕ್ಷಣಗಳ ಜೊತೆಗೆ ಮನರಂಜನೆ ನೀಡುತ್ತಿದೆ. ಮನೆ ಸದಸ್ಯರ ಕುಟುಂಬಸ್ಥರು ಒಂದೊಂದಾಗಿ ಎಂಟ್ರಿ ಕೊಡುತ್ತಿರುವುದು ಮನೆಯ ವಾತಾವರಣವನ್ನೇ ಬದಲಿಸಿದೆ. ಈ ಫ್ಯಾಮಿಲಿ ವೀಕ್‌ನಲ್ಲಿ ಹೆಚ್ಚು ಗಮನ ಸೆಳೆದಿರುವ ಸ್ಪರ್ಧಿ ಅಂದ್ರೆ ಅದು ಗಿಲ್ಲಿ ನಟ. ಈ ಸೀಸನ್‌ನಲ್ಲಿ ಗಿಲ್ಲಿ ತನ್ನ ಕಾಮಿಡಿ ಟೈಮಿಂಗ್, ಸರಳತನ ಮತ್ತು ಆಟದಿಂದಲೇ ವೀಕ್ಷಕರ ಹೃದಯ ಗೆದ್ದಿದ್ದಾನೆ.
ಗಿಲ್ಲಿ ಕಾಮಿಡಿ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಪ್ರತಿದಿನವೂ ಅವನ ಡೈಲಾಗ್‌ಗಳು ಮತ್ತು ತಮಾಷೆಗಳು ಟ್ರೆಂಡಿಂಗ್ ಆಗುತ್ತಿವೆ. ಅದಕ್ಕೆ ಸಾಕ್ಷಿ ಎನ್ನುವಂತೆ, ಈ ವಾರ ಗಿಲ್ಲಿ ಬಗ್ಗೆ ಮನೆಮಂದಿಯ ಕುಟುಂಬಸ್ಥರೇ ಮುಕ್ತವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಧನುಷ್, ಸೂರಜ್, ರಾಶಿಕಾ ಸೇರಿದಂತೆ ಹಲವರ ಮನೆಯವರು ಗಿಲ್ಲಿಯ ಆಟವನ್ನು ಹೊಗಳಿದ್ದಾರೆ.
ಮೊದಲಿಗೆ ಫ್ಯಾಮಿಲಿ ವೀಕ್‌ನಲ್ಲಿ ಎಂಟ್ರಿ ಕೊಟ್ಟ ಸೂರಜ್ ಅವರ ತಾಯಿ, ಗಿಲ್ಲಿಯನ್ನು ನೋಡಿ ಖುಷಿಯಾಗಿದ್ದಾರೆ. “ಗಿಲ್ಲಿ ಏನೇ ಮಾಡಿದ್ರೂ ಇಷ್ಟ. ಅವನು ಎಲ್ಲರನ್ನೂ ನಗಿಸ್ತಾನೆ. ಅವನು ಇಲ್ಲ ಅಂದ್ರೆ ಮನೆಲೇ ಬೇಜಾರು” ಎಂದು ಹೇಳಿದ್ದಾರೆ.
ಇದಾದ ಬಳಿಕ ಮನೆಗೆ ಧನುಷ್ ಅವರ ತಾಯಿ ಎಂಟ್ರಿ ಕೊಟ್ಟರು. ಈ ವೇಳೆ ಕಾವ್ಯ ಅವರು, “ಧನು ಬಿಟ್ಟರೆ ಮನೆಯಲ್ಲಿ ಯಾರ ಆಟ ಇಷ್ಟ?” ಎಂದು ಪ್ರಶ್ನಿಸಿದಾಗ, ಧನುಷ್ ಅವರ ತಾಯಿ ಯಾವುದೇ ಹಿಂಜರಿಕೆಯಿಲ್ಲದೇ ಗಿಲ್ಲಿಯ ಹೆಸರನ್ನು ಹೇಳಿದರು. “ಧನುಷ್ ಇಲ್ಲ ಅಂದಿದ್ರೆ, ನನ್ನ ಎಲ್ಲಾ ವೋಟ್ ಗಿಲ್ಲಿಗೆ ಹಾಕ್ತಾ ಇದ್ದೆ. ಅವನ ಕಾಮಿಡಿ ನನಗೆ ತುಂಬಾ ಇಷ್ಟ” ಎಂದು ಹೇಳಿದ್ದು, ಗಿಲ್ಲಿ ಫ್ಯಾನ್ಸ್‌ಗಳಿಗೆ ದೊಡ್ಡ ಸಂತೋಷ ನೀಡಿದೆ.
ಫ್ಯಾಮಿಲಿ ವೀಕ್‌ನಲ್ಲಿಯೂ ಗಿಲ್ಲಿ ತನ್ನ ಸ್ಟೈಲ್ ಬಿಡದೇ ಮನೆಮಂದಿಯನ್ನೂ, ಅತಿಥಿಗಳನ್ನೂ ನಗಿಸಿದ್ದಾರೆ.. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಫ್ಯಾನ್ಸ್‌ಗಳು, “ಈ ಸೀಸನ್ ಜನರಿಗೆ ಇಷ್ಟವಾಗೋಕೆ ಮೊದಲನೇ ಕಾರಣ ಗಿಲ್ಲಿ. ಪ್ರತಿದಿನ ನಮ್ಮ ಮುಖದಲ್ಲಿ ನಗು ಮೂಡಿಸ್ತಾನೆ. ಈ ಸೀಸನ್‌ಗೆ ಎಂಟರ್ಟೈನರ್ ಅವಾರ್ಡ್ ಇದ್ದರೆ ಅದು ಗಿಲ್ಲಿಗೇ ಸೇರಬೇಕು” ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಇನ್ನೊಂದೆಡೆ ಫ್ಯಾಮಿಲಿ ವೀಕ್‌ನಲ್ಲಿ ರಕ್ಷಿತಾ ಶೆಟ್ಟಿ ಅವರ ಅಮ್ಮ ಎಂಟ್ರಿ ಕೂಡ ವಿಶೇಷ ಗಮನ ಸೆಳೆದಿದೆ. ಮನೆಗೆ ಬಂದ ತಕ್ಷಣವೇ “ಯಾರೊಂದಿಗೂ ಜಗಳ ಮಾಡಬೇಡ” ಎಂದು ರಕ್ಷಿತಾಗೆ ಸಲಹೆ ನೀಡಿದರು. ಧ್ರುವಂತ್ ಬಗ್ಗೆ ಪ್ರಶ್ನೆ ಕೇಳಿದಾಗ ಗಿಲ್ಲಿ ತಕ್ಷಣವೇ ತಮಾಷೆ ಮಾಡಿ, “ಬೆತ್ತ ತಂದಿದ್ದರೆ ನಿನಗೆ ಹೊಡಿತಾ ಇದ್ದರು” ಎಂದು ಹೇಳಿ ಎಲ್ಲರನ್ನೂ ನಗಿಸಿದ್ದಾರೆ.
ಇದರ ಜೊತೆಗೆ ಬಿಗ್ ಬಾಸ್ ರಕ್ಷಿತಾಗೆ ವಿಶೇಷ ಸರ್‌ಪ್ರೈಸ್ ನೀಡಿದರು. ಮನೆಯಲ್ಲಿ ಲೈವ್ ಬ್ಲಾಗಿಂಗ್ ಮಾಡಲು ಅವಕಾಶ ನೀಡಿ, ಕ್ಯಾಮೆರಾ, ಮೀನು ಎಲ್ಲವನ್ನೂ ಒದಗಿಸಿದರು. ರಕ್ಷಿತಾ ಲೈವ್ ಬ್ಲಾಗಿಂಗ್ ಮಾಡುತ್ತಲೇ ಮೀನು ಫ್ರೈ ಮಾಡಿದ ದೃಶ್ಯಗಳು ವೀಕ್ಷಕರಿಗೆ ಹೊಸ ಅನುಭವ ನೀಡಿವೆ.





