ಮರ್ಸಿಡಿಸ್-ಬೆನ್ಜ್ (Mercedes-Benz) ಕಂಪನಿಯು ಐಷಾರಾಮಿ ಮತ್ತು ಸ್ಪೋರ್ಟ್ಸ್ ಕಾರುಗಳ ಕ್ಷೇತ್ರದಲ್ಲಿ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿರುವುದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಈ ಜರ್ಮನ್ ಬ್ರಾಂಡ್ ತನ್ನ ಅತಿದೊಡ್ಡ ಐಷಾರಾಮಿ ಕಾರುಗಳಲ್ಲಿ ಒಂದಾದ “ಮೇಬ್ಯಾಕ್ SL 680” ಮಾನೋಗ್ರಾಮ್ ಸರಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಕಾರು ತನ್ನ ವಿಶೇಷ ವಿನ್ಯಾಸ, ತಂತ್ರಜ್ಞಾನ ಮತ್ತು ಶಕ್ತಿಯ ಕಾರಣದಿಂದ ಭಾರತದಲ್ಲಿಯೂ ಹೆಚ್ಚಿನ ಗಮನಸೆಳೆಯುತ್ತಿದೆ.
ಈ ಕಾರಿನ ಬೆಲೆ ಮತ್ತು ಲಭ್ಯತೆ
ಮೇಬ್ಯಾಕ್ SL 680 ಕಾರಿನ ಎಕ್ಸ್ ಶೋ ರೂಂ ಬೆಲೆ ಸುಮಾರು ₹4.2 ಕೋಟಿ. ಈ ದುಬಾರಿ ಕಾರು ಭಾರತದಲ್ಲಿ ಕೇವಲ 3 ಯುನಿಟ್‌ಗಳಷ್ಟೇ ಮಾರಾಟಕ್ಕಿರುವುದರಿಂದ, ಇದರ ಅಪರೂಪತೆ ಹೆಚ್ಚಾಗಿದೆ. ಈ ಕಾರುಗಳನ್ನು ಖರೀದಿಸಲು ಇಚ್ಛಿಸುವ ಗ್ರಾಹಕರು 2026ರ ಮೊದಲ ವರ್ಷದವರೆಗೆ ಕಾಯಬೇಕಾಗಿದೆ, ಏಕೆಂದರೆ ಮುಂದಿನ ವರ್ಷದಿಂದ ವಿತರಣೆಯನ್ನು ಪ್ರಾರಂಭಿಸಲಿದೆ.
ಬಣ್ಣ ಮತ್ತು ವಿನ್ಯಾಸ
ಮೇಬ್ಯಾಕ್ SL 680 ಕಾರು ಎರಡು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. ರೆಡ್ ಆಂಬಿಯನ್ಸ್ ಮತ್ತು ವೈಟ್ ಆಂಬಿಯನ್ಸ್. ಈ ಕಾರಿನ ಬಾಹ್ಯ ಭಾಗವು ಮೇಬ್ಯಾಕ್ ಮಾದರಿಯ ಬಾನೆಟ್, ಸಿಗ್ನೇಚರ್ ಕ್ರೋಮ್ ಗ್ರಿಲ್ ಮತ್ತು ಮರ್ಸಿಡಿಸ್ ಸ್ಟಾರ್ ಅನ್ನು ಒಳಗೊಂಡಿದೆ. ಹಿಂಭಾಗದಲ್ಲಿ ಟೈಲ್‌ಪೈಪ್ ಟ್ರಿಮ್‌ಗಳು ಮತ್ತು ಮೇಬ್ಯಾಕ್ ಸಿಗ್ನೇಚರ್ ಲೈಟ್‌ಗಳು ಕಾರಿನ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತವೆ. ಸೀಟುಗಳ ಹಿಂದೆ ಇರುವ ಡಬಲ್ ಸ್ಕೂಪ್‌ಗಳು ಈ ಕಾರಿಗೆ ಸ್ಪೋರ್ಟಿ ಲುಕ್ ನೀಡುತ್ತವೆ. 21-ಇಂಚಿನ ಅಲಾಯ್ ಚಕ್ರಗಳು ಕಾರಿನ ಅಂದವನ್ನು ಇನ್ನಷ್ಟು ಹೆಚ್ಚಿಸುತ್ತವೆ.
ಈ ಕಾರಿನ ಒಳಭಾಗವು ಐಷಾರಾಮಿ ಕಾರಿನಂತೆ ಕೂಡಿದೆ. ನಾಪಾ ಲೆದರ್ ಸೀಟುಗಳು, ಸ್ಟೇನ್‌ಲೆಸ್ ಸ್ಟೀಲ್ ಪೆಡಲ್‌ಗಳು, ಡೋರ್ ಸಿಲ್ ಟ್ರಿಮ್‌ಗಳು ಮತ್ತು ಸ್ಟೀರಿಂಗ್ ವೀಲ್‌ಗಳು ಕಾರಿನ ಆಕರ್ಷಣೆಯನ್ನು ಹೆಚ್ಚಿಸುತ್ತವೆ. ಧ್ವನಿ-ಆಪ್ಟಿಮೈಸ್ಡ್ ಎಕ್ಸಾಸ್ಟ್ ಸಿಸ್ಟಮ್, ಮೃದುವಾದ ಎಂಜಿನ್ ಮೌಂಟ್‌ಗಳು ಮತ್ತು ಹಿಂಭಾಗದ ಆಕ್ಸಲ್ ಸ್ಟೀರಿಂಗ್ ಇವುಗಳಿಂದ ಡ್ರೈವಿಂಗ್ ಅನುಭವವನ್ನು ಮತ್ತಷ್ಟು ಸುಲಭವಾಗಿಸುತ್ತದೆ.
ಶಕ್ತಿ ಮತ್ತು ಪ್ರದರ್ಶನ
ಮೇಬ್ಯಾಕ್ SL 680 ಕಾರು 4.0 ಲೀಟರ್ ಬಿಟರ್ಬೊ V8 ಎಂಜಿನ್‌ನಿಂದ ಕಾರ್ಯನಿರ್ವಹಿಸುತ್ತದೆ. ಇದು 585 ಅಶ್ವಶಕ್ತಿ ಮತ್ತು 800 Nm ಟಾರ್ಕ್ ಉತ್ಪಾದಿಸುತ್ತದೆ. 9G ಸ್ವಯಂಚಾಲಿತ ಪ್ರಸರಣ ಹೊಂದಿರುವ ಈ ಕಾರು ಕೇವಲ 4.1 ಸೆಕೆಂಡುಗಳಲ್ಲಿ 0-100 ಕಿಮೀ ವೇಗವನ್ನು ತಲುಪುತ್ತದೆ. ಗಂಟೆಗೆ 260 ಕಿಮೀ ಗರಿಷ್ಠ ವೇಗವನ್ನು ಹೊಂದಿದೆ. 4MATIC ಮತ್ತು ಸಂಪೂರ್ಣವಾಗಿ ವೇರಿಯಬಲ್ ಆಲ್-ವೀಲ್ ಡ್ರೈವ್‌ನೊಂದಿಗೆ ಇದು ಉತ್ತಮ ನಿರ್ವಹಣೆಯನ್ನು ನೀಡುತ್ತದೆ.
ಮರ್ಸಿಡಿಸ್-ಮೇಬ್ಯಾಕ್ ಬ್ರ್ಯಾಂಡ್‌ಗಾಗಿ ಭಾರತ:
ಮರ್ಸಿಡಿಸ್-ಮೇಬ್ಯಾಕ್ ಬ್ರ್ಯಾಂಡ್‌ಗೆ ಭಾರತವು ಪ್ರಮುಖ ಮಾರುಕಟ್ಟೆಯಾಗಿದೆ ಎಂದು ಕಂಪನಿಯ ಒಡೆಯರು ಹೇಳಿದ್ದಾರೆ. ಭಾರತದಲ್ಲಿ ಐಷಾರಾಮಿ ಜೀವನಶೈಲಿ ಬೆಳೆಯುತ್ತಿರುವುದರಿಂದ ಮೇಬ್ಯಾಕ್ ಕಾರುಗಳ ಬೇಡಿಕೆ ಹೆಚ್ಚುತ್ತಿದೆ. ಜಾಗತಿಕವಾಗಿ ಭಾರತವು ಮೇಬ್ಯಾಕ್‌ಗಾಗಿ ಟಾಪ್-10 ಮಾರುಕಟ್ಟೆಗಳಲ್ಲಿ ಒಂದಾಗಿದೆ.