ಇರಾನ್-ಅಮೆರಿಕ ಯುದ್ಧ ಮತ್ತು ಹಾರ್ಮುಜ್ ಜಲಸಂಧಿ ಮುಚ್ಚುವಿಕೆಯ ನಡುವೆಯೂ ಕೆಲವು ಗಲ್ಫ್ ರಾಷ್ಟ್ರಗಳು ತೈಲ ರಫ್ತು ಆದಾಯದಲ್ಲಿ ಗಣನೀಯ ಲಾಭ ಕಂಡಿವೆ. 2025ರ ಮಾರ್ಚ್‌ಗೆ ಹೋಲಿಸಿದರೆ 2026ರ ಮಾರ್ಚ್‌ನಲ್ಲಿ ಸೌದಿ ಅರೇಬಿಯಾ, ಇರಾನ್ ಮತ್ತು ಒಮನ್ ದೇಶಗಳ ಆದಾಯ ಹೆಚ್ಚಾಗಿದೆ. ಆದರೆ ಕುವೈತ್, ಕತಾರ್ ಮತ್ತು ಇರಾಕ್ ದೇಶಗಳು ಭಾರೀ ನಷ್ಟ ಅನುಭವಿಸಿವೆ.
ಲಾಭ ಪಡೆದ ದೇಶಗಳು (ಮಾರ್ಚ್ ತೈಲ ರಫ್ತು ಆದಾಯ–ಬಿಲಿಯನ್ ಡಾಲರ್‌ನಲ್ಲಿ):
| ಸೌದಿ ಅರೇಬಿಯಾ |
2025ರ ಮಾರ್ಚ್–13 ಬಿಲಿಯನ್ |
2026ರ ಮಾರ್ಚ್–13.5 ಬಿಲಿಯನ್ (+0.5 ಬಿಲಿಯನ್ ಲಾಭ)
|
|
ಇರಾನ್ |
2025ರ ಮಾರ್ಚ್–4.2 ಬಿಲಿಯನ್ |
2026ರ ಮಾರ್ಚ್–5.7 ಬಿಲಿಯನ್ (+1.5 ಬಿಲಿಯನ್ ಲಾಭ) |
|
ಒಮನ್ |
2025ರ ಮಾರ್ಚ್ – 2.3 ಬಿಲಿಯನ್ |
2026ರ ಮಾರ್ಚ್ – 2.9 ಬಿಲಿಯನ್ (+0.6 ಬಿಲಿಯನ್ ಲಾಭ) |
ನಷ್ಟ ಅನುಭವಿಸಿದ ದೇಶಗಳು:
|
ಕುವೈತ್ |
2025ರ ಮಾರ್ಚ್ – 3.3 ಬಿಲಿಯನ್ |
2026ರ ಮಾರ್ಚ್ – 0.9 ಬಿಲಿಯನ್ (ಸುಮಾರು 73% ನಷ್ಟ) |
|
ಕತಾರ್ |
2025ರ ಮಾರ್ಚ್ – 1.7 ಬಿಲಿಯನ್ |
2026ರ ಮಾರ್ಚ್ – 0.6 ಬಿಲಿಯನ್ (ಸುಮಾರು 65% ನಷ್ಟ) |
|
ಇರಾಕ್ |
2025ರ ಮಾರ್ಚ್ – 7.3 ಬಿಲಿಯನ್ |
2026ರ ಮಾರ್ಚ್ – 1.7 ಬಿಲಿಯನ್ (ಸುಮಾರು 77% ನಷ್ಟ) |
ಕಾರಣಗಳು :
ಕಚ್ಛಾ ತೈಲ ಬೆಲೆ ಏರಿಕೆಯಿಂದ ಸೌದಿ, ಇರಾನ್ ಮತ್ತು ಒಮನ್ ಲಾಭ ಪಡೆದವು. ಉತ್ಪಾದನೆ ಕಡಿಮೆಯಾದರೂ ಬೆಲೆ ಹೆಚ್ಚಳದಿಂದ ಆದಾಯ ಹೆಚ್ಚಾಗಿದೆ. ಆದರೆ ಕುವೈತ್, ಕತಾರ್ ಮತ್ತು ಇರಾಕ್‌ನಲ್ಲಿ ಉತ್ಪಾದನೆ ಮತ್ತು ರಫ್ತು ತೀವ್ರವಾಗಿ ಕುಸಿದಿದ್ದರಿಂದ ಭಾರೀ ನಷ್ಟವಾಗಿದೆ.
ಈ ಯುದ್ಧವು ಗಲ್ಫ್ ದೇಶಗಳ ನಡುವೆ ಆರ್ಥಿಕ ಅಸಮತೋಲನವನ್ನು ಸೃಷ್ಟಿಸಿದೆ. ಕಚ್ಛಾ ತೈಲ ಬೆಲೆಗಳು ಸ್ಥಿರಗೊಂಡರೆ ಮಾತ್ರ ಎಲ್ಲಾ ದೇಶಗಳಿಗೆ ಸಮತೋಲನ ಸಾಧ್ಯವಾಗುತ್ತದೆ. ಹಾರ್ಮುಜ್ ಜಲಸಂಧಿ ಮುಚ್ಚುವಿಕೆಯಿಂದಾಗಿ ಉತ್ಪಾದನೆ ಕಡಿಮೆಯಾದರೂ, ಬೆಲೆ ಏರಿಕೆಯ ಲಾಭ ಸೌದಿ, ಇರಾನ್ ಮತ್ತು ಒಮನ್‌ಗೆ ದೊರೆತಿದೆ.





