ಶಾಲಿವಾಹನ ಶಕವರ್ಷ 1948, ಉತ್ತರಾಯಣ, ಶಿಶಿರ ಋತುವಿನ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ದ್ವಾದಶೀ ತಿಥಿಯ ಮಂಗಳವಾರ. ಇಂದಿನ ದಿನ ಸಹೋದ್ಯೋಗಿಗಳಿಂದ ಸಹಕಾರ, ಪ್ರಶಂಸೆಯಿಂದ ಉತ್ಸಾಹ, ಆಸ್ತಿ ವೃದ್ಧಿ, ಆದರೆ ಅಪಕ್ವ ಆಹಾರ ಸೇವನೆ ಹಾಗೂ ಅಜಾಗರೂಕತೆಯಿಂದ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಕೆಲವರಿಗೆ ಸಾಹಸಗಳಲ್ಲಿ ಅಡಚಣೆ, ಇನ್ನೂ ಕೆಲವರಿಗೆ ನಿರ್ಮಾಣ ಕಾರ್ಯಗಳಲ್ಲಿ ಪ್ರಗತಿ ಕಾಣಿಸಲಿದೆ.
ಮೇಷ ರಾಶಿ: ಇಂದು ನಿಮ್ಮ ಸಂಗಾತಿಯ ಜೊತೆ ತುಂಬಾ ಆಪ್ತವಾಗಿ ವ್ಯವಹರಿಸುವಿರಿ. ವೈವಾಹಿಕ ಜೀವನದ ಹಳೆಯ ನೆನಪುಗಳು ಖುಷಿ ನೀಡಲಿವೆ. ಆದರೆ ಹೊರಗಿನ ಆಹಾರವನ್ನು ತ್ಯಜಿಸುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ಮಕ್ಕಳ ಮೇಲೆ ಒಂದು ಕಣ್ಣಿಡಿ. ನಿಮ್ಮನ್ನು ಅರ್ಥಮಾಡಿಕೊಳ್ಳುವವರ ಬಗ್ಗೆ ಪ್ರೀತಿ ಹೆಚ್ಚಾಗುವುದು. ಅನಾಗರಿಕರಂತೆ ವರ್ತಿಸುವುದನ್ನು ತಪ್ಪಿಸಿ.
ವೃಷಭ ರಾಶಿ: ಒಡಹುಟ್ಟಿದವರೊಂದಿಗೆ ಮಧುರ ಸಂಬಂಧ ಕಾಪಾಡಿಕೊಳ್ಳಿ. ನಿಮ್ಮ ಮೂಗಿನ ನೇರಕ್ಕೆ ಎಲ್ಲವನ್ನೂ ಕಾಣುವುದು ಸಮಂಜಸವಲ್ಲ. ವ್ಯಾಪಾರದಲ್ಲಿ ನಮ್ರತೆಯಿಂದ ವರ್ತಿಸಿದರೆ ಆದಾಯ ಹೆಚ್ಚಿಸಿಕೊಳ್ಳಬಹುದು. ಬೆಲೆಬಾಳುವ ವಸ್ತುಗಳನ್ನು ಖರೀದಿಸುವಿರಿ. ದೂರದ ಪ್ರಯಾಣದ ಯೋಜನೆಯಿರಬಹುದು. ಅಶಿಸ್ತಿನ ವ್ಯವಸ್ಥೆಯಿಂದ ಸಿಟ್ಟಾಗುವ ಸಾಧ್ಯತೆ ಇದೆ.
ಮಿಥುನ ರಾಶಿ: ವಿದ್ಯಾರ್ಥಿಗಳು ನಿರೀಕ್ಷಿತ ಫಲಿತಾಂಶ ಪಡೆದು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವರು. ಭಾವೋದ್ವೇಗದಲ್ಲಿ ತೆಗೆದುಕೊಂಡ ನಿರ್ಧಾರ ತಪ್ಪಾಗಿ ಪರಿಣಮಿಸಬಹುದು. ಮನಸ್ಸು ನಿರಾಶೆಗೊಳ್ಳಬಹುದು. ಆರೋಪದಲ್ಲಿ ಸಿಲುಕುವ ಸನ್ನಿವೇಶ ಬರಬಹುದು. ನಿಮ್ಮವರ ಮೇಲೆ ನಂಬಿಕೆ ಇಟ್ಟುಕೊಳ್ಳಿ. ದೇಹದ ಅಸಮತೋಲನದಿಂದ ತೊಂದರೆಯಾಗಬಹುದು.
ಕರ್ಕಾಟಕ ರಾಶಿ: ಆದಾಯಕ್ಕೆ ತಕ್ಕ ವೆಚ್ಚ ಮಾಡಿ. ವ್ಯವಹಾರದ ದೃಷ್ಟಿಯಿಂದ ಈ ದಿನ ಲಾಭದಾಯಕ. ಕೌಟುಂಬಿಕ ಜೀವನ ಸುಖಕರ. ಮಾನಸಿಕ ಒತ್ತಡ ಮತ್ತು ರಕ್ತದೊತ್ತಡದ ಸಮಸ್ಯೆಗಳಿರಬಹುದು. ಹೆಚ್ಚು ಪ್ರಯತ್ನಕ್ಕೆ ತಕ್ಕ ಫಲ ಸಿಗದೇ ಹತಾಶೆಯಾಗಬಹುದು. ಅಂತರಂಗದ ಶುದ್ಧೀಕರಣಕ್ಕೆ ಒತ್ತು ನೀಡಿ.
ಸಿಂಹ ರಾಶಿ: ವ್ಯವಹಾರದಲ್ಲಿ ಸಮಸ್ಯೆಗಳು ಎದುರಾಗಬಹುದು. ಸಂಗಾತಿಗೆ ಸಿಟ್ಟು ಬರುವಂತೆ ಉದ್ದೇಶಪೂರ್ವಕವಾಗಿ ನಡೆದುಕೊಳ್ಳುವಿರಿ. ಅನಾದರದಿಂದ ಬೇಸರಗೊಳ್ಳುವಿರಿ. ಪ್ರಭಾವಿ ಮುಖಂಡರ ಜೊತೆ ಸಾಮಾಜಿಕ ಕಾರ್ಯಗಳ ಬಗ್ಗೆ ಚರ್ಚಿಸುವಿರಿ. ಕೆಲವು ಮಾನಸಿಕ ಸ್ಥಿತಿಗಳನ್ನು ಬದಲಿಸಿಕೊಳ್ಳಬೇಕಾದೀತು.
ಕನ್ಯಾ ರಾಶಿ: ಹಿತಶತ್ರುಗಳ ಸಹಾಯದಿಂದ ಆಸೆಗಳು ಈಡೇರಬಹುದು. ತರಾತುರಿಯ ನಿರ್ಧಾರ ತಪ್ಪಾಗಬಹುದು. ಸಹೋದ್ಯೋಗಿಗಳು ನಿಮ್ಮ ಬಗ್ಗೆ ದೂರಬಹುದು. ಹಿಂದೆ ಮಾಡಿದ ಸಾಮಾಜಿಕ ಕೆಲಸಗಳಿಗೆ ಗೌರವ ಸಿಗಲಿದೆ. ಹಠ ಬಿಟ್ಟರೆ ಸಂತೋಷ ನಿಮ್ಮನ್ನು ಹುಡುಕಿಕೊಂಡು ಬರಬಹುದು.
ತುಲಾ ರಾಶಿ: ವೈಯಕ್ತಿಕ ವಿಚಾರದಲ್ಲಿ ಹೊರಗಿನವರಿಗೆ ಅವಕಾಶ ನೀಡಬೇಡಿ. ಯೋಜನೆ ರೂಪಿಸುವ ಮೊದಲು ಚಿಂತನೆ ಅವಶ್ಯಕ. ಆಸ್ತಿ ವಿಚಾರದಲ್ಲಿ ಕಾನೂನು ಹೋರಾಟ ಮಾಡುವುದು ಒಳ್ಳೆಯದು. ಬೆನ್ನು ನೋವು ಪುನಃ ಕಾಡಿಸಬಹುದು. ಕಾರ್ಯ ಪೂರ್ಣವಾಗುವ ತನಕ ಮಾನಸಿಕ ವಿಶ್ರಾಂತಿ ಸಿಗದು. ನಿಮ್ಮ ಮಾತು ವಿವಾದಕ್ಕೆ ಕಾರಣವಾಗಬಹುದು.
ವೃಶ್ಚಿಕ ರಾಶಿ: ಕೆಲವು ಲಾಭದಾಯಕ ಅವಕಾಶಗಳನ್ನು ಕಳೆದುಕೊಳ್ಳಬಹುದು. ಆರ್ಥಿಕ ಸ್ಥಿತಿ ಸಾಮಾನ್ಯವಾಗಿದ್ದು ಹತಾಶ ಭಾವನೆ ಇರುವುದು. ಉಳಿತಾಯದತ್ತ ಹೆಚ್ಚು ಗಮನ ಕೊಡಿ. ಭೂಮಿಯ ದಾಖಲೆಗಳನ್ನು ಸರಿಯಾಗಿ ಪಡೆದುಕೊಳ್ಳಿ. ಭವಿಷ್ಯದ ಕುರಿತು ಚಿಂತೆ ಇರಬಹುದು. ಸಾಧು-ಸಜ್ಜನರ ಭೇಟಿಯಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.
ಧನು ರಾಶಿ: ನಿಮಗೆ ನಿಮ್ಮದೇ ಹಣ ಬರುವ ಸಾಧ್ಯತೆ. ಉದ್ಯೋಗಸ್ಥ ಮಹಿಳೆಯರು ಜವಾಬ್ದಾರಿಗಳನ್ನು ಸರಿಯಾಗಿ ಪೂರೈಸುವರು. ನಕಾರಾತ್ಮಕ ಜನರು ನಿಮ್ಮನ್ನು ಟೀಕಿಸಬಹುದು. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಹೆಚ್ಚಾಗಬಹುದು. ಆಕಸ್ಮಿಕವಾಗಿ ಉದ್ಯೋಗಾವಕಾಶ ಒದಗಿಬರಬಹುದು. ನಿಮ್ಮ ಯೋಜನೆಯಲ್ಲಿನ ತಪ್ಪುಗಳು ಕಾಣಲಿದ್ದು, ಬದಲಾಯಿಸಲು ಸಾಧ್ಯವಾಗದ ಸ್ಥಿತಿ ಉಂಟಾಗಬಹುದು.
ಮಕರ ರಾಶಿ: ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಆಹ್ಲಾದಕರ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ತಾಳ್ಮೆ ಕಾಪಾಡಿಕೊಳ್ಳಿ. ಆಸ್ತಿಯಿಂದ ಹಣ ಪಡೆಯಬಹುದು. ಸ್ನೇಹಿತರ ಬೆಂಬಲ ಸಿಗಲಿದೆ. ಬೌದ್ಧಿಕ ಕೆಲಸದಿಂದ ಆದಾಯ ಹೆಚ್ಚಾಗುವ ಸಾಧ್ಯತೆ. ನೇರ ಮಾತು ಎಲ್ಲರಿಗೂ ಹಿಡಿಸದು. ಮಕ್ಕಳ ವಿಚಾರದಲ್ಲಿ ಕಾಳಜಿ ಅಗತ್ಯ.
ಕುಂಭ ರಾಶಿ: ಹಣಕಾಸಿನ ಪರಿಸ್ಥಿತಿ ಉತ್ತಮವಾಗಿದ್ದರೂ ಖರ್ಚೂ ಇರಲಿದೆ. ಕೆಲಸದಲ್ಲಿ ಅಧಿಕಾರಿಗಳೊಂದಿಗೆ ಸಾಮರಸ್ಯ ಕಾಪಾಡಿಕೊಳ್ಳಿ. ಪ್ರಗತಿಯ ಸಾಧ್ಯತೆಗಳಿವೆ. ಸ್ಥಳ ಬದಲಾವಣೆಯೂ ಆಗಬಹುದು. ವ್ಯವಹಾರದಲ್ಲಿ ಯಶಸ್ಸು ಸಿಗುವ ಸಾಧ್ಯತೆ. ಧಾರ್ಮಿಕ ಕಾರ್ಯದಲ್ಲಿ ಅಲ್ಪ ಆಸಕ್ತಿ. ಯಾವುದೋ ಘಟನೆ ನಿಮ್ಮ ಆಸಕ್ತಿಯನ್ನು ಕುಗ್ಗಿಸಬಹುದು. ಕೆಲಸವನ್ನು ಹಂಚಿಕೊಂಡು ಮಾಡಿ.
ಮೀನ ರಾಶಿ: ಉದ್ಯೋಗ ಕ್ಷೇತ್ರದಲ್ಲಿ ವಿಸ್ತರಣೆ. ಆರ್ಥಿಕ ಏರಿಳಿತಗಳನ್ನು ಎದುರಿಸಬಹುದು. ವೈವಾಹಿಕ ಜೀವನದಲ್ಲಿ ಖುಷಿ. ಆರೋಗ್ಯದ ದೃಷ್ಟಿಯಿಂದ ಅನುಕೂಲಕರ ದಿನ. ಬಂದ ಕೆಲಸವನ್ನು ಶ್ರದ್ಧೆಯಿಂದ ಮಾಡಿ. ಬಂಧುಗಳ ಜೊತೆ ವಿನಾಕಾರಣ ವಿವಾದ ಮಾಡಿಕೊಂಡು ಬೇಸರಿಸಬೇಕಾಗಬಹುದು.





