ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಬ್ಬರ ಮದುವೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹೊಸ ದಾಖಲೆ ಸೃಷ್ಟಿಸಿವೆ. ಎರಡು ದಿನಗಳಲ್ಲಿ ವಿರೋಶ್ ಅರತಕ್ಷಕತೆ ನಡೆಯಲಿದ್ದು, ದೇಶಾದ್ಯಂತ ಅನ್ನದಾನ, ಸ್ವಿಟ್ಸ್ ಕೂಡ ಹಂಚಿಕೆ ಆಗ್ತಿದೆ. ಅರೇ ದೇಶಕ್ಕೆಲ್ಲಾ ಸಿಹಿ ಹಂಚೋಕೆ ಹೇಗೆ ಸಾಧ್ಯ ಅಂತೀರಾ..? ಈ ಸ್ಟೋರಿ ನೋಡಿ.
- ಅಭಿಮಾನಿಗಳಿಗೆ ವಿರೋಶ್ ದಂಪತಿಯಿಂದ ಮದ್ವೆ ಟ್ರೀಟ್..!
- ದೇಶಾದ್ಯಂತ ಅನ್ನದಾನ, ಸ್ವೀಟ್ಸ್ ಹಂಚಿದ ರಶ್ಮಿಕಾ-ವಿಜಯ್
- 14 ರಾಜ್ಯ.. 20ಕ್ಕೂ ಅಧಿಕ ಸಿಟಿಗಳಲ್ಲಿ ಫ್ಯಾನ್ಸ್‌ಗೆ ಭರ್ಜರಿ ಗಿಫ್ಟ್
- ಬೆಂಗಳೂರಿನ ಶಿವೋಹಂ, ಚಾಮುಂಡಿ ಹಿಲ್ಸ್‌ನಲ್ಲಿ ಅನ್ನದಾನ..!
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಬ್ಬರ ಮದುವೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹೊಸ ದಾಖಲೆ ಸೃಷ್ಟಿಸಿದೆ.. ಅದ್ರಂತೆ ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ವಿಜಯ್-ರಶ್ಮಿಕಾ ದಂಪತಿ ರಿಸೆಪ್ಷನ್ ಪಾರ್ಟಿ ಆಯೋಜಿಸಲಾಗಿದೆ. ಪ್ರಧಾನಿ ಮೋದಿ ಸೇರಿದಂತೆ ಸಾಕಷ್ಟು ಗಣ್ಯರನ್ನು ಜೋಡಿ ಆಹ್ವಾನಿಸಿದೆ. ಚಿತ್ರರಂಗದ ಆಪ್ತರಿಗೂ ಆಮಂತ್ರಣ ನೀಡಿದೆ. ಇದೆಲ್ಲದರ ಜೊತೆ ಅಭಿಮಾನಿಗಳ ಜೊತೆ ಮದುವೆ ಸಂಭ್ರಮ ಹಂಚಿಕೊಳ್ಳಲು ಜೋಡಿ ಮುಂದಾಗಿದೆ. ದೇಶಾದ್ಯಂತ ಅನ್ನದಾನ, ಸಿಹಿ ಹಂಚಿಕೆ ಮಾಡಲು ಮುಂದಾಗಿದ್ದಾರೆ.
ಈ ಕುರಿತು ವಿಜಯ್ ಹಾಗೂ ರಶ್ಮಿಕಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಪ್ರೀತಿಯ ಅಭಿಮಾನಿಗಳೇ ನೀವು ಯಾವಾಗಲೂ ನಮ್ಮ ಪ್ರಯಾಣ ಮತ್ತು ನಮ್ಮ ಪ್ರೀತಿಯ ಭಾಗವಾಗಿದ್ದೀರಿ. ನಿಮ್ಮೆಲ್ಲರೊಂದಿಗೆ ನಮ್ಮ ಮದುವೆಯನ್ನು ಆಚರಿಸುವುದು ನಮಗೆ ನಿಜವಾಗಿಯೂ ಸಂತೋಷವನ್ನು ನೀಡುತ್ತದೆ. ಸಿಹಿ ಹಾಗೂ ಊಟದ ಮೂಲಕ ಭಾರತೀಯರು ಎಲ್ಲಾ ಸಂಭ್ರಮವನ್ನು ಆಚರಿಸುತ್ತಾರೆ. ಆದ್ದರಿಂದ ಮಾರ್ಚ್ 1 ರಂದು ನಮ್ಮ ಜೀವನದ ಈ ದೊಡ್ಡ ಕ್ಷಣವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನಾವು ದೇಶಾದ್ಯಂತ ಪ್ರೀತಿ ಮತ್ತು ಸಿಹಿತಿಂಡಿಗಳಿಂದ ತುಂಬಿದ ಟ್ರಕ್‌ಗಳನ್ನು ಕಳುಹಿಸುತ್ತಿದ್ದೇವೆ. ನಾವು ದೇಶಾದ್ಯಂತ ಅನೇಕ ದೇವಾಲಯಗಳಲ್ಲಿ ಅನ್ನದಾನಕ್ಕಾಗಿ ದೇಣಿಗೆ ನೀಡುತ್ತೇವೆ. ನಿಮ್ಮೆಲ್ಲರ ಆಶೀರ್ವಾದವನ್ನು ಬಯಸುತ್ತೇವೆ” ಎಂದು ರಶ್ಮಿಕಾ- ವಿಜಯ್ ಟ್ವೀಟ್ ಮಾಡಿದ್ದಾರೆ.
ಇನ್ನು ಎಲ್ಲೆಲ್ಲಿ ಯಾವಾಗ ಸಿಹಿ ಹಂಚಿಕೆ, ಅನ್ನದಾನ ಎನ್ನುವ ಬಗ್ಗೆ ಕೂಡ ಬರೆದುಕೊಂಡಿದ್ದಾರೆ. ಬೆಂಗಳೂರಿನ ಶಿವೋಹಂ ದೇವಸ್ಥಾನ, ಹಾಗೂ ಇಸ್ಕಾನ್ ದೇವಸ್ಥಾನ ಗುವಾಹಟಿಯ ಶ್ರೀ ರುಕ್ಮಿಣಿ ದೇವಸ್ಥಾನ ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಅರುಲ್ಮಿಗು ಕೋನಿಯಮ್ಮನ್ ತಿರುಕೋಯಿಲ್ ಕೊಯಮತ್ತೂರು, ಚಿಂತಪಲ್ಲಿ ಸಾಯಿಬಾಬಾ ದೇವಸ್ಥಾನ, ಚಿಂತಪಲ್ಲಿ ಮಾನ್ಯಮಕೊಂಡ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ, ಮಹೆಬೂಬನಗರ, ಶ್ರೀ ಕನಕ ಮಹಾಲಕ್ಷ್ಮಿ ದೇವಸ್ಥಾನ ವೈಜಾಗ್ನ ದ್ವಾರಕಾ ತಿರುಮಲ ದೇವಸ್ಥಾನ – ಚಿಕ್ಕ ತಿರುಪತಿ ಏಲೂರು, ಶ್ರೀ ಕನಕದುರ್ಗಾ ದೇವಸ್ಥಾನ ಹೀಗೆ ಹಲವು ದೇವಸ್ಥಾನಗಳಲ್ಲಿ ಅನ್ನದಾನಕ್ಕೆ ದೇಣಿಗೆ ನೀಡುತ್ತಿದ್ದಾರೆ.
ಮೈಸೂರು, ಕೊಡಗು, ಬೆಂಗಳೂರಿನಲ್ಲಿ ಸಿಹಿ ಹಂಚಿಕೆ ಮಾಡಲು ಮುಂದಾಗಿದ್ದಾರೆ. ಅದೇ ರೀತಿ ತೆಲಂಗಾಣದಲ್ಲಿ ಹೈದರಾಬಾದ್, ಕರೀಂ ನಗರ್, ಮೆಹಬೂಬ್ ನಗರ್, ಗುಜರಾತಿನ ಅಹಮದಾಬಾದ್, ರಾಜಸ್ಥಾನದ ಜೈಪುರ್, ಕೇರಳದ ಕೊಚ್ಚಿ ಸೇರಿದಂತೆ ದೇಶಾದ್ಯಂತ ನಾನಾ ನಗರಗಳಲ್ಲಿ ಸಿಹಿ ಹಂಚಿಕೆ ಮಾಡಲು ವಿರೋಷ್ ಜೋಡಿ ಮನಸ್ಸು ಮಾಡಿದೆ. ವಿಜಯ್- ರಶ್ಮಿಕಾ ದಂಪತಿ ಪ್ರಯತ್ನಕ್ಕೆ ಅಭಿಮಾನಿಗಳು ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್.
| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್





