ದಿ ವೆಯ್ಟ್ ಈಸ್ ಓವರ್.. ಕೊಂಚ ಲೇಟ್ ಆದ್ರೂ ಲೇಟೆಸ್ಟ್ ಆಗಿ ಬಿಗ್‌ಸ್ಕ್ರೀನ್‌ಗೆ ಎಂಟ್ರಿ ಕೊಟ್ಟಿದೆ ಹಯಗ್ರೀವ. ಔಟ್ ಅಫ್ ದಿ ಬಾಕ್ಸ್ ಸಿನಿಮಾ ಮಾಡಿರೋ ಧನ್ವೀರ್, ತನ್ನ ಫ್ಯಾನ್ಸ್, ಚಿತ್ರಪ್ರೇಮಿಗಳ ಜೊತೆ ಡಿಬಾಸ್ ದರ್ಶನ್ ಸೆಲೆಬ್ರಿಟೀಸ್‌ಗೂ ಧನ್ಯವಾದ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ, ನನ್ನನ್ನ ಯಾವನೂ ತುಳಿಯೋಕೆ ಆಗಲ್ಲ ಅಂತ ಕಿಡಿ ಕಾರಿದ್ದಾರೆ. ಇನ್ನೂ ಪ್ರೊಡ್ಯೂಸರ್ ಸಮೃದ್ಧಿ ಮಂಜುನಾಥ್ ಪೈರಸಿ ಮಾಡೋರ ವಿರುದ್ಧ ಸಮರ ಸಾರಿದ್ದಾರೆ.
- ಡಿ ಬಾಸ್ ದರ್ಶನ್ ಸೆಲೆಬ್ರಿಟೀಸ್‌ಗೆ ‘ಹಯಗ್ರೀವ’ ಧನ್ಯವಾದ
- ಎಲ್ಲೆಡೆ ಹೌಸ್‌ಫುಲ್.. ನ್ಯೂ ಎಕ್ಸ್‌ಪೆರಿಮೆಂಟ್‌ಗೆ ಶಿಳ್ಳೆ, ಚಪ್ಪಾಳೆ
- ಧನ್ವೀರ್ ಗರಂ.. ಯಾವನೂ ತುಳಿಯೋಕಾಗಲ್ಲ ಅಂದಿದ್ದೇಕೆ..?
- ಬೆಳೆಸೋಕೆ ತುಳಿಯೋಕೆ ದೇವರಿಂದ ಮಾತ್ರ ಸಾಧ್ಯ- ಧನ್ವೀರ್
ಹಯಗ್ರೀವ.. ನಿನ್ನೆಯಷ್ಟೇ ತೆರೆಕಂಡ ಸಿನಿಮಾ. ಸಾಮಾನ್ಯವಾಗಿ ಸಿನಿಮಾಗಳು ಬೆಳಗ್ಗೆ 10 ಗಂಟೆ ಅಥ್ವಾ ಅದಕ್ಕಿಂತ ಮುಂಚೆ ರಿಲೀಸ್ ಆಗೋದು ವಾಡಿಕೆ. ಆದ್ರೆ ಹಯಗ್ರೀವ ಮೂವಿ ಮಾತ್ರ ಕೊಂಚ ಲೇಟ್ ಆಗಿ ಎರಡು ಶೋಗಳು ಮುಗಿದ ಬಳಿಕ ರಿಲೀಸ್ ಆಯ್ತು. ಬೆಳಗ್ಗೆ ಹಾಗೂ ಮಧ್ಯಾಹ್ನ ಬಿಟ್ಟು ಸಂಜೆ 4.30ರ ಶೋ ವೇಳೆಗೆ ಬೆಳ್ಳಿತೆರೆ ಬೆಳಗಿತು. ಅಂದಹಾಗೆ ಅದಕ್ಕೆಲ್ಲಾ ಸೆನ್ಸಾರ್ ನಿಂದ ಆದ ಸಮಸ್ಯೆ ಅನ್ನೋದು ಎಲ್ಲರಿಗೂ ಗೊತ್ತೇಯಿದೆ.
ಲೇಟ್ ಆದ್ರೂ ಲೇಟೆಸ್ಟ್ ಆಗಿ ಮಾತ್ರ ಬಂದಿದೆ ಮೂವಿ. ಅದಕ್ಕೆ ಕಾರಣ ರಘುಕುಮಾರ್ ನಿರ್ದೇಶನ, ಸಮೃದ್ಧಿ ಮಂಜುನಾಥ್ ನಿರ್ಮಾಣ ಹಾಗೂ ಪಾತ್ರಗಳಿಗೆ ಜೀವ ತುಂಬಿರೋ ನಾಯಕನಟ ಧನ್ವೀರ್ ಗೌಡ, ಸಂಜನಾ ಆನಂದ್, ಶೋಭರಾಜ್ ಮುಂತಾದವರು. ಸಾಮಾನ್ಯ ಕಥೆಯನ್ನ ಬಿಟ್ಟು ಅಸಾಮಾನ್ಯ ಕಥೆಯನ್ನ ಕೈಗೆತ್ತಿಕೊಂಡಿರೋ ಈ ತಂಡಕ್ಕೆ ಚಿತ್ರಪ್ರೇಮಿಗಳೇ ಜೈಕಾರ ಹಾಕಿ, ಭೇಷ್ ಅಂತ ಬೆನ್ನು ತಟ್ಟುತ್ತಿದ್ದಾರೆ.
ಮಲಯಾಳಂ ಸಿನಿಮಾಗಳನ್ನ ಮೀರಿದಂತಹ ಕಂಟೆಂಟ್ ಬೇಸ್ಡ್ ಮೂವಿ ಮಾಡಿರೋ ಧನ್ವೀರ್ ಗೌಡ, ಸಿನಿಮಾ ರಿಲೀಸ್‌ಗೆ ತಡೆ ಆಗಿರೋದ್ರ ಕುರಿತು ಮಾತನಾಡಿದ್ರು. ನಮ್ಮ ಮೇಲೆ ತುಂಬಾ ಜನಕ್ಕೆ ಲವ್ ಜಾಸ್ತಿ. ವಾಪಸ್ ಕೊಟ್ಟೇ ಕೊಡ್ತೀವಿ ಎಂದರು. ಅಲ್ಲದೆ ಧನ್ವೀರ್‌ನ ತುಳಿಯೋಕೆ ಕೆಲವರು ಪ್ರಯತ್ನ ಪಡ್ತಿದ್ದಾರೆ ಎಂದಿದ್ದ ನಿರ್ಮಾಪಕರ ಹೇಳಿಕೆಗೆ ಸ್ಪಷ್ಟನೆ ನೀಡಿದ ಧನ್ವೀರ್, ಯಾರನ್ನ ಯಾರೂ ತುಳಿಯೋಕೆ ಆಗಲ್ಲ. ಆ ದೇವರು ಮಾತ್ರ ತುಳಿಯೋಕೆ ಅಥ್ವಾ ಬೆಳೆಸೋಕೆ ಸಾಧ್ಯ. ಹಾಗೇನಾದ್ರೂ ಯಾರಾದ್ರೂ ಅಂದುಕೊಂಡಿದ್ರೆ ಅದೇ ಭ್ರಮೆಯಲ್ಲಿರಲಿ. ದೇವರಿದ್ದಾರೆ ಎಂದರು.
ಸಿನಿಮಾ ರಿಲೀಸ್ ಮಾಡೋಕೆ ಯುದ್ಧವೇ ಮಾಡಬೇಕಾಯ್ತು. 24 ಗಂಟೆಗಳ ಕಾಲ ನಿದ್ದೆ ಇಲ್ಲದೆ ಒದ್ದಾಡಿದ್ದೀವಿ. ಸದ್ಯದಲ್ಲೇ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಎಲ್ಲವನ್ನೂ ಎಳೆ ಎಳೆಯಾಗಿ ಬಿಚ್ಚಿಡ್ತೀವಿ ಎಂದರು. ಅಲ್ಲದೆ, ಡಿಬಾಸ್ ದರ್ಶನ್ ಫ್ಯಾನ್ಸ್ ಕೂಡ ದೊಡ್ಡ ಮಟ್ಟದಲ್ಲಿ ಬಂದು ಹಯಗ್ರೀವಗೆ ಸಪೋರ್ಟ್ ಮಾಡ್ತಿರೋದಕ್ಕೆ ದಚ್ಚು ಸೆಲೆಬ್ರಿಟೀಸ್‌ಗೆ ವಿಶೇಷವಾಗಿ ಧನ್ಯವಾದ ತಿಳಿಸಿದ್ರು ಧನ್ವೀರ್.
- ಪೈರಸಿ ಮಾಡೋರ ವಿರುದ್ಧ ಸಮೃದ್ಧಿ ಸಮರ.. ಬೀ ಕೇರ್‌ಫುಲ್
- HDK ಎಂಟ್ರಿ.. ಸೆನ್ಸಾರ್ ಅಧಿಕಾರಿಗಳ ಮುಖವಾಡ ಬಯಲು..!
- ಹಿತಶತ್ರುಗಳ ಕಾಟ.. ಮಳೆ, ಗೋಧೂಳಿ ಮುಹೂರ್ತ ಶುಭ ಶಕುನ
- ಕುತಂತ್ರಿಗಳ ನಡುವೆ ಕನ್ನಡ ಚಿತ್ರರಂಗ ನಲುಗಿ ಹೋಗ್ತಿದೆಯಾ..?!
ಇನ್ನೂ ತುಂಬಾ ಜನರ ದೃಷ್ಠಿ ತಾಕಿತ್ತು. ಅದೆಲ್ಲಾ ಈಗ ಹೋಗಿದೆ ಎಂದ ನಿರ್ಮಾಪಕ ಸಮೃದ್ಧಿ ಮಂಜುನಾಥ್, ಗೋವುಗಳು ಮನೆಗೆ ಸೇರುವ ಗೋಧೂಳಿ ಮುಹೂರ್ತದಲ್ಲಿ ರಿಲೀಸ್ ಆಗಿದೆ. ತುಂಬಾ ಹಿತಶತ್ರುಗಳಿಂದಲೇ ಇದೆಲ್ಲಾ ಆಗಿದೆ. ಅವರ ಆಶೀರ್ವಾದದಿಂದಲೇ ಗೋಧೂಳಿ ಮುಹೂರ್ತದಲ್ಲಿ ತೆರೆಕಂಡಿದೆ. ಇದೊಂಥರಾ ಶುಭಸುದ್ದಿ. ಅಂದು ಮಂಡ್ಯದಲ್ಲಿ ಮಳೆ ಬಂತು.. ಇಂದು ಗೋಧೂಳಿ ಮುಹೂರ್ತ.. ಆ ದೇವರು ನಮ್ಮ ಜೊತೆ ಇದ್ದಾರೆ ಅನ್ನೋದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ ಎಂದರು.
ಪೈರಸಿ ಮಾಡೋರ ವಿರುದ್ಧ ಕಿಡಿಕಾರಿದ ನಿರ್ಮಾಪಕರು, ಮುಂಜಾಗ್ರತಾ ಕ್ರಮವಾಗಿ ಕೋರ್ಟ್‌ನಿಂದ ಕೆವಿಟ್ ಕೂಡ ತಂದಿದ್ದಾರಂತೆ. ಯಾರಾದ್ರೂ ಪೈರಸಿ ಮಾಡಿದ್ರೆ ಅವರಿಗೆ ಕಾನೂನು, ಕೋರ್ಟ್ ತಕ್ಕ ಉತ್ತರ ನೀಡಲಿದೆ ಎಂದರು.
ಇದೇ ಸಂದರ್ಭದಲ್ಲಿ ಚಿತ್ರರಂಗ ಚಿಕ್ಕದು, ನಮ್ಮಂತವರು ಸಿನಿಮಾ ಮಾಡೋಕೆ ಬರ್ತಾರೆ. ಆದ್ರೆ ಸೆನ್ಸಾರ್ ಮಂಡಳಿ ಮಾಡಿದ ಎಡವಟ್ ಎಂಥದ್ದು ಅನ್ನೋದನ್ನ ವಿವರಿಸಿದ್ರು. ಮೊದಲು ಎ ಸರ್ಟಿಫಿಕೆಟ್ ಅಂದ್ರು. ನಾನು ಓಕೆ ಅಂದ್ರೆ. ಆದ್ರೆ ಹತ್ತೇ ನಿಮಿಷದಲ್ಲಿ ಅದನ್ನ ರಿವೈಸಿಂಗ್ ಕಮಿಟಿಗೆ ಕಳುಹಿಸ್ತಾರೆ. ನನಗೆ ನೋಟಿಸ್ ಕೊಟ್ಟಿಲ್ಲ, ಮೇಲ್ ಕಳಿಸಿಲ್ಲ, ಸಿಗ್ನೇಚರ್ ತಗೊಂಡಿಲ್ಲ. ಅದೆಲ್ಲಾ ಆದ ಬಳಿಕ ರಿವೈಸಿಂಗ್ ಕಮಿಟಿಗೆ ಹೋಗಬೇಕು ಅಂತ ಸೆನ್ಸಾರ್ ಮಂಡಳಿಯ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ರು ನಿರ್ಮಾಪಕರು.
ರಿವೈಸಿಂಗ್ ಕಮಿಟಿಗೆ ಪಾಸ್ ಮಾಡಿ, ಹತ್ತು ದಿನ ರಜೆ ಹಾಕಿ ನಾಪತ್ತೆಯಾಗಿದ್ದ ಸೆನ್ಸಾರ್ ಅಧಿಕಾರಿಗಳ ಮುಖವಾಡ ಬಿಚ್ಚಿಟ್ಟ ಸಮೃದ್ಧಿ ಮಂಜುನಾಥ್, ಈ ಸಿನಿಮಾ ರಿಲೀಸ್ ಮಾಡೋಕೆ ಹೆಚ್.ಡಿ. ಕುಮಾರಸ್ವಾಮಿ ಅವರು ಎಂಟ್ರಿ ಕೊಟ್ಟ ವಿಷಯವನ್ನ ಕೂಡ ಸ್ಮರಿಸಿಕೊಂಡರು.
ಕುತಂತ್ರಿಗಳ ನಡುವೆ ಕನ್ನಡ ಚಿತ್ರರಂಗ ನಲುಗಿ ಹೋಗ್ತಿದೆ ಅಂತ ದುಃಖ ಮಡಬೇಕೋ ಅಥ್ವಾ ಒಳ್ಳೆಯ ಪ್ರಶಂಸೆ ಪ್ರತಿಕ್ರಿಯೆಗಳು ಸಿನಿಮಾಗೆ ಸಿಗ್ತಿರೋದ್ರ ಬಗ್ಗೆ ಖುಷಿ ಪಡಬೇಕೋ ಗೊತ್ತಿಲ್ಲ ಎಂದರು ನಿರ್ಮಾಪಕರು.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





