ಜನ್ಮಸಂಖ್ಯೆ 1, 10, 19, 28
ಇಂದು ನಿಮಗೆ ಹಳೆಯ ಪರಿಚಯಸ್ಥರಿಂದ ಅಥವಾ ಈ ಹಿಂದೆ ಜೊತೆಯಲ್ಲಿ ಕೆಲಸ ಮಾಡಿದವರಿಂದ ಹೊಸ ಉದ್ಯಮದ ಪ್ರಸ್ತಾಪಗಳು ಬರಲಿವೆ. ಇದನ್ನು ತಕ್ಷಣ ತಿರಸ್ಕರಿಸದೆ ಗಂಭೀರವಾಗಿ ಯೋಚಿಸಿ. ಅನಿವಾರ್ಯವೆನಿಸಿದರೆ ನಿರ್ಧಾರ ತೆಗೆದುಕೊಳ್ಳಲು ಒಂದೆರಡು ದಿನ ಸಮಯ ಪಡೆಯಿರಿ. ಸಂಗಾತಿಯ ಉದ್ಯೋಗದಲ್ಲಿನ ಅನಿಶ್ಚಿತತೆ ನಿಮ್ಮಲ್ಲಿ ಆತಂಕ ಮೂಡಿಸಬಹುದು, ಆದರೆ ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಿ.
ಜನ್ಮಸಂಖ್ಯೆ 2, 11, 20, 29
ಸಾವಯವ ಕೃಷಿ ಉತ್ಪನ್ನಗಳ ವ್ಯಾಪಾರಿಗಳಿಗೆ ಇಂದು ವಿಸ್ತರಣೆಯ ಯೋಗವಿದೆ. ನಿಮ್ಮ ಹಳೆಯ ಉಳಿತಾಯವನ್ನು ಬಂಡವಾಳವಾಗಿ ಬಳಸಲು ಇದು ಸಕಾಲ. ಮಾರ್ಕೆಟಿಂಗ್ ಕ್ಷೇತ್ರದಲ್ಲಿರುವವರು ಮೇಲಧಿಕಾರಿಗಳ ಸಲಹೆಯನ್ನು ಅಲಕ್ಷಿಸಬೇಡಿ.
ಜನ್ಮಸಂಖ್ಯೆ 3, 12, 21, 30
ಇಂದು ಪ್ರಯಾಣದ ಯೋಗ ಬಲವಾಗಿದೆ. ದೂರ ಪ್ರಯಾಣದಿಂದ ನಿಮಗೆ ವೃತ್ತಿಪರ ಲಾಭಗಳು ಸಿಗಲಿವೆ. ಧಾರ್ಮಿಕ ಕಾರ್ಯಕ್ರಮಗಳಿಗೆ ಆಹ್ವಾನ ಬಂದರೆ ತಪ್ಪದೇ ಭಾಗವಹಿಸಿ, ಇದರಿಂದ ಮನಸ್ಸಿಗೆ ಶಾಂತಿ ಸಿಗಲಿದೆ. ಬ್ಯಾಂಕ್ ಉದ್ಯೋಗಿಗಳಿಗೆ ಕೆಲಸದ ಹೊರೆ ಹೆಚ್ಚಾಗಲಿದ್ದು, ಮಾನಸಿಕ ಒತ್ತಡ ಎದುರಾಗಬಹುದು.
ಜನ್ಮಸಂಖ್ಯೆ 4, 13, 22, 31
ಸರ್ಕಾರಿ ಕೆಲಸಗಳಲ್ಲಿ ದೀರ್ಘಕಾಲದಿಂದ ಇದ್ದ ಅಡೆತಡೆಗಳು ಇಂದು ನಿವಾರಣೆಯಾಗಲಿವೆ. ಮಿತ್ರರ ಸಲಹೆಗಳು ಇಂದು ನಿಮಗೆ ದಾರಿದೀಪವಾಗಲಿವೆ. ಆರ್ಥಿಕವಾಗಿ ಸಣ್ಣಮಟ್ಟಿನ ಮುಗ್ಗಟ್ಟು ಎದುರಾಗಬಹುದು, ಆದರೆ ಸಂಗಾತಿಯ ಬೆಂಬಲದಿಂದ ಈ ಸಮಸ್ಯೆಯನ್ನು ಸುಲಭವಾಗಿ ಮೆಟ್ಟಿ ನಿಲ್ಲುವಿರಿ.
ಜನ್ಮಸಂಖ್ಯೆ 5, 14, 23
ನಿಮ್ಮ ಗುಪ್ತ ವ್ಯವಹಾರಗಳು ಅಥವಾ ಹೊಸ ಪ್ರಯತ್ನಗಳು ಇಂದು ಯಶಸ್ಸಿನ ಹಾದಿ ಹಿಡಿಯಲಿವೆ. ಬರಬೇಕಿದ್ದ ಬಾಕಿ ಹಣಕ್ಕಾಗಿ ನೀವು ಧ್ವನಿ ಎತ್ತಬೇಕಾದ ಸಮಯವಿದು. ಗಟ್ಟಿಯಾಗಿ ಕೇಳಿದರೆ ಮಾತ್ರ ನಿಮ್ಮ ಶ್ರಮದ ಹಣ ನಿಮ್ಮ ಕೈ ಸೇರಲಿದೆ.
ಜನ್ಮಸಂಖ್ಯೆ 6, 15, 24
ಅವಸರವೇ ಅಪಘಾತಕ್ಕೆ ಕಾರಣ ಎಂಬಂತೆ ಇಂದು ಯಾವುದೇ ಕೆಲಸವನ್ನು ತರಾತುರಿಯಲ್ಲಿ ಮಾಡಬೇಡಿ. ಗುಣಮಟ್ಟದ ಮೇಲೆ ಗಮನವಿರಲಿ, ಇಲ್ಲದಿದ್ದರೆ ಭವಿಷ್ಯದಲ್ಲಿ ಪಶ್ಚಾತ್ತಾಪ ಪಡಬೇಕಾದೀತು. ಕುಟುಂಬದಲ್ಲಿ, ವಿಶೇಷವಾಗಿ ಒಡಹುಟ್ಟಿದವರ ಜೊತೆಗೆ ಭಿನ್ನಾಭಿಪ್ರಾಯ ಮೂಡದಂತೆ ಎಚ್ಚರಿಕೆ ವಹಿಸಿ.
ಜನ್ಮಸಂಖ್ಯೆ 7, 16, 25
ದೊಡ್ಡ ಯೋಜನೆಗಳಿಗೆ ಕೈ ಹಾಕುವ ಮುನ್ನ ನಿಮ್ಮ ಸಾಮರ್ಥ್ಯ ಮತ್ತು ಮಾರುಕಟ್ಟೆಯ ಸ್ಥಿತಿಗತಿಯನ್ನು ಅರಿಯಿರಿ. ಇಂದು ನಿಮಗೆ ಸಿಗುವ ಆಫರ್ಗಳು ಮೇಲ್ನೋಟಕ್ಕೆ ಲಾಭದಾಯಕವಾಗಿ ಕಂಡರೂ, ಸರ್ಕಾರದ ನಿಯಮಗಳ ಬದಲಾವಣೆಯಿಂದ ಅಂದುಕೊಂಡಷ್ಟು ಲಾಭ ತರದಿರಬಹುದು. ಎಚ್ಚರಿಕೆಯ ಹೆಜ್ಜೆ ಇಡಿ.
ಜನ್ಮಸಂಖ್ಯೆ 8, 17, 26
ಕೃಷಿ ಮತ್ತು ತೋಟಗಾರಿಕೆ ನಂಬಿದವರಿಗೆ ಇಂದು ಲಾಭದಾಯಕ ದಿನ. ಹೊಸ ವ್ಯಕ್ತಿಗಳ ಸಂಪರ್ಕದಿಂದ ವ್ಯಾಪಾರ ವೃದ್ಧಿಯಾಗಲಿದೆ. ಚಿತ್ರಮಂದಿರಗಳ ಮಾಲೀಕರು ತಮ್ಮ ಉದ್ಯಮದಲ್ಲಿ ಹೊಸ ಬದಲಾವಣೆಗಳನ್ನು ತರಲು ಕುಟುಂಬದ ಬೆಂಬಲ ಪಡೆಯಲಿದ್ದಾರೆ. ಹಳೆಯ ಸವಾಲುಗಳಿಗೆ ಇಂದು ಉತ್ತರ ಸಿಗಲಿದೆ.
ಜನ್ಮಸಂಖ್ಯೆ 9, 18, 27
ಇಂದು ಭಾವನಾತ್ಮಕವಾಗಿ ಸ್ವಲ್ಪ ಕಠಿಣ ದಿನ. ಯಾರೋ ಆಡಿದ ಮಾತುಗಳು ನಿಮ್ಮ ಮನಸ್ಸಿಗೆ ಆಳವಾಗಿ ತಗುಲಿ ಉತ್ಸಾಹ ಕುಂದಿಸಬಹುದು. ಜವಾಬ್ದಾರಿಗಳಿಂದ ನುಣುಚಿಕೊಳ್ಳಬೇಕು ಎಂಬ ಭಾವನೆ ಮೂಡಬಹುದು. ಆದರೆ ನಿಮ್ಮ ಸಂಕಲ್ಪ ಶಕ್ತಿಯಿಂದ ಇದನ್ನು ಮೀರಿ ನಿಲ್ಲುವುದು ಅವಶ್ಯಕ.





