ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಮತ್ತೊಂದು ಗೂಂಡಾಗಿರಿ ಘಟನೆ ನಡೆದಿದೆ. ಗ್ಯಾಲಕ್ಸಿ ಕಾಂಡಿಮೆಂಟ್ಸ್ ಅಂಗಡಿ ಬಳಿ ತಡರಾತ್ರಿ ಸಮಯದಲ್ಲಿ ಪುಂಡ ಮಂಜೇಶ್ ಪುಡಾರಿ ಮತ್ತು ಅವನ ಸ್ನೇಹಿತರು ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದಾರೆ. ಸಿಗರೇಟ್‌ಗೆ ಹಣ ಕೇಳಿದ್ದಕ್ಕೆ ರೇಗಿ ಬಂದು ಗೂಂಡಾಗಿರಿ ಮಾಡಿದ್ದಾರೆ ಎಂದು ಆರೋಪವಿದೆ.
ಕುಡಿದ ಮತ್ತಿನಲ್ಲಿ ಡ್ಯಾಗರ್ (ಚಾಕು) ತೋರಿಸಿ ಬೆದರಿಸಿದ ಆರೋಪಿಗಳು ಅಂಗಡಿ ಮುಂಭಾಗದಲ್ಲಿ ಇದ್ದ ಗ್ರಾಹಕರ ಮೇಲೂ ಹಲ್ಲೆಗೆ ಯತ್ನಿಸಿದ್ದಾರೆ. ಅಂಗಡಿಯ ವಸ್ತುಗಳನ್ನು ಒಡೆದುಹಾಕಿ, ಗಲಾಟೆ ಮಾಡಿ ಪರಾರಿಯಾಗಿದ್ದರು. ಆದರೆ ಬ್ಯಾಟರಾಯನಪುರ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಪುಂಡ ಮಂಜೇಶ್‌ನನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸ್ ಕ್ರಮ ಅಂಗಡಿ ಮಾಲೀಕರು ತಕ್ಷಣ ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳ ಸಹಚರರ ಪತ್ತೆಗೆ ತನಿಖೆ ಮುಂದುವರೆಸಿದ್ದಾರೆ. ಈ ರೀತಿಯ ಗೂಂಡಾಗಿರಿ ಘಟನೆಗಳು ಸ್ಥಳೀಯರಲ್ಲಿ ಭಯ ಮತ್ತು ಆತಂಕ ಮೂಡಿಸಿವೆ. ಪೊಲೀಸರು ಸಾರ್ವಜನಿಕರ ಸುರಕ್ಷತೆಗಾಗಿ ಹೆಚ್ಚಿನ ಪೇಟ್ರೋಲಿಂಗ್ ಮಾಡುವುದಾಗಿ ತಿಳಿಸಿದ್ದಾರೆ.
ಈ ಘಟನೆಯು ನಗರದಲ್ಲಿ ರಾತ್ರಿ ಸಮಯದಲ್ಲಿ ಅಂಗಡಿಗಳು ಮತ್ತು ವ್ಯಾಪಾರಸ್ಥರ ಸುರಕ್ಷತೆಯ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದೆ.




