ಫೆಬ್ರವರಿ ತಿಂಗಳು ಆರಂಭವಾಯಿತೆಂದರೆ ಪ್ರೇಮಿಗಳ ಮನಸ್ಸಿನಲ್ಲಿ ಹೊಸ ಹಿತವಾದ ಸಂಚಲನ ಶುರುವಾಗುತ್ತದೆ. ಪ್ರೀತಿಪಾತ್ರರಿಗೆ ಏನು ಉಡುಗೊರೆ ನೀಡಬೇಕು, ಅವರನ್ನು ಹೇಗೆ ಸಂತೋಷಪಡಿಸಬೇಕು ಎಂಬ ಯೋಜನೆಗಳು ಸಿದ್ಧವಾಗುತ್ತವೆ. ಆದರೆ, ನೀವು ನೀಡುವ ಒಂದು ಚಿಕ್ಕ ಉಡುಗೊರೆ ನಿಮ್ಮ ಸುಂದರ ಸಂಬಂಧಕ್ಕೆ ಕುತ್ತು ತರಬಹುದು ಎಂಬುದು ನಿಮಗೆ ತಿಳಿದಿದೆಯೇ ? ವಾಸ್ತು ಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ವಸ್ತುಗಳನ್ನು ಉಡುಗೊರೆಯಾಗಿ ನೀಡುವುದು ಅಶುಭ ಹಾಗೂ ಸಂಬಂಧದಲ್ಲಿ ಬಿರುಕು ತರಬಲ್ಲದು ಎಂದು ಹೇಳಲಾಗುತ್ತದೆ.
ಭಾವನೆಗಳ ಪ್ರತಿಬಿಂಬವೇ ಉಡುಗೊರೆ
ಉಡುಗೊರೆ ಎಂಬುದು ಕೇವಲ ಒಂದು ವಸ್ತುವಲ್ಲ, ಅದು ನಿಮ್ಮ ಭಾವನೆಗಳು ಮತ್ತು ಪ್ರೀತಿಯ ಸಂಕೇತ. ಆದರೆ ಪ್ರೇಮಿಗಳ ದಿನದಂದು (Valentine’s Day) ತಪ್ಪು ಉಡುಗೊರೆಗಳನ್ನು ಆರಿಸುವುದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸಬಹುದು. ಕೆಲವು ವಸ್ತುಗಳು ಪ್ರತ್ಯೇಕತೆಯ ಸಂಕೇತವಾಗಿರುವುದರಿಂದ, ಅವುಗಳನ್ನು ನೀಡುವ ಮುನ್ನ ಯೋಚಿಸುವುದು ಅಗತ್ಯ.
ಯಾವ ಉಡುಗೊರೆಗಳನ್ನು ನೀಡಬಾರದು ?
-
ಚೂಪಾದ ವಸ್ತುಗಳು: ಚಾಕು, ಕತ್ತರಿ ಅಥವಾ ಯಾವುದೇ ಚೂಪಾದ ವಸ್ತುಗಳನ್ನು ಎಂದಿಗೂ ಉಡುಗೊರೆಯಾಗಿ ನೀಡಬೇಡಿ. ಇವು ಪ್ರೀತಿಯ ಬಂಧವನ್ನು ಕತ್ತರಿಸುತ್ತವೆ ಅಥವಾ ಸಂಬಂಧದಲ್ಲಿ ಘರ್ಷಣೆಯನ್ನು ಉಂಟುಮಾಡುತ್ತವೆ ಎಂಬ ನಂಬಿಕೆ ಇದೆ.
-
ಗಡಿಯಾರ: ವಾಸ್ತು ಶಾಸ್ತ್ರದ ಪ್ರಕಾರ, ಗಡಿಯಾರ ನೀಡುವುದು ಎಂದರೆ ನಿಮ್ಮ ಸಮಯ ಮುಗಿದಿದೆ ಎಂದು ಸೂಚಿಸಿದಂತೆ. ಇದು ಸಂಬಂಧದದಲ್ಲಿ ಬಿರುಕು ಮೂಡಿಸಿ, ಆ ಸಂಬಂಧ ಮುರಿಯಲೂ ಬಹುದು ಎನ್ನಲಾಗುತ್ತದೆ.
-
ಕಪ್ಪು ಬಣ್ಣದ ವಸ್ತುಗಳು: ಕೆಂಪು ಪ್ರೀತಿಯ ಸಂಕೇತವಾದರೆ, ಕಪ್ಪು ಬಣ್ಣವು ದುಃಖ ಮತ್ತು ವಿಯೋಗದ ಸಂಕೇತ. ಕಪ್ಪು ಗುಲಾಬಿ ಅಥವಾ ಅತಿಯಾದ ಕಪ್ಪು ಬಣ್ಣದ ಉಡುಗೊರೆಗಳು ಪ್ರೇಮಿಗಳ ನಡುವೆ ಅಂತರವನ್ನು ಹೆಚ್ಚಿಸಬಹುದು.
-
ಕನ್ನಡಿ: ಕನ್ನಡಿಯನ್ನು ಉಡುಗೊರೆಯಾಗಿ ನೀಡುವುದರಿಂದ ಅದರಲ್ಲಿ ಪ್ರತಿಫಲಿಸುವ ನಕಾರಾತ್ಮಕ ಶಕ್ತಿಯು ದ್ವಿಗುಣಗೊಳ್ಳುತ್ತದೆ. ಇದು ದಂಪತಿಗಳ ನಡುವೆ ಅನಗತ್ಯ ಜಗಳಗಳಿಗೆ ಕಾರಣವಾಗಬಹುದು.
-
ಮುಳ್ಳಿನ ಗಿಡಗಳು: ಸಸ್ಯಗಳನ್ನು ನೀಡುವುದು ಪರಿಸರ ಪ್ರೇಮಿಯ ಲಕ್ಷಣವಾದರೂ, ಕಳ್ಳಿ ಗಿಡ ಅಥವಾ ಮುಳ್ಳುಗಳನ್ನು ಹೊಂದಿರುವ ಸಸ್ಯಗಳನ್ನು ನೀಡಬೇಡಿ. ಇವು ಸಂಬಂಧದಲ್ಲಿ ಕಹಿ ಮತ್ತು ಸಂಘರ್ಷವನ್ನು ತರುತ್ತವೆ.
-
ಕನ್ನಡಕ: ಕನ್ನಡಕ ಅಥವಾ ಗ್ಲಾಸ್‌ಗಳನ್ನು ಉಡುಗೊರೆಯಾಗಿ ನೀಡುವುದರಿಂದ ಪ್ರೇಮಿಗಳ ನಡುವೆ ತಪ್ಪು ತಿಳುವಳಿಕೆ ಉಂಟಾಗುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತದೆ.
ಚರ್ಮದ ವಸ್ತುಗಳ ಬಗ್ಗೆ ಎಚ್ಚರ
ಪರ್ಸ್, ಬ್ಯಾಗ್‌ಗಳು ಅಥವಾ ಚರ್ಮದ ವಸ್ತುಗಳನ್ನು ನೀಡುವುದರಿಂದ ಹಣಕಾಸಿನ ಸಮಸ್ಯೆಗಳು ಉಂಟಾಗಬಹುದು ಮತ್ತು ಸಂಬಂಧದಲ್ಲಿ ಗೌರವ ಕಡಿಮೆಯಾಗಬಹುದು ಎಂಬ ನಂಬಿಕೆ ಕೆಲವು ಕಡೆ ಇದೆ.
ಉಡುಗೊರೆಗಳ ವಿಚಾರ ಹಾಗಿರಲಿ, ಪ್ರೀತಿಯ ಸಂಕೇತವಾಗಿ ಹೂವುಗಳ ಹೆಸರನ್ನು ಇಟ್ಟುಕೊಳ್ಳುವುದು ಅಥವಾ ಮಕ್ಕಳಿಗೆ ಇಡುವುದು ಸಕಾರಾತ್ಮಕತೆಯನ್ನು ನೀಡುತ್ತದೆ. ರೋಜಾ, ಮಲ್ಲೆ, ಲಿಲ್ಲಿಯಂತಹ ಹೆಸರುಗಳು ಶುದ್ಧತೆಯನ್ನು ಸೂಚಿಸುತ್ತವೆ. ಉಡುಗೊರೆಗಿಂತ ಹೃದಯದಿಂದ ಪ್ರೀತಿಸುವುದು ಮುಖ್ಯವಾದರೂ, ಇಂತಹ ಸಣ್ಣ ಪುಟ್ಟ ನಂಬಿಕೆಗಳನ್ನು ಪಾಲಿಸುವುದು ಮನಸ್ಸಿನ ಶಾಂತಿಗೆ ಸಹಕಾರಿ.
ಗಮನಿಸಿ: ಈ ಮೇಲಿನ ಮಾಹಿತಿಯು ಕೇವಲ ನಂಬಿಕೆ ಮತ್ತು ಸಂಪ್ರದಾಯಗಳನ್ನು ಆಧರಿಸಿದೆ. ಉಡುಗೊರೆಯ ಆಯ್ಕೆಯು ನಿಮ್ಮ ವೈಯಕ್ತಿಕ ನಂಬಿಕೆಗೆ ಬಿಟ್ಟದ್ದು.





