ತಮಿಳು ಚಿತ್ರರಂಗದ ಯುವ ನಟಿ ಅಂಜು ಕೃಷ್ಣ ಸೇರಿದಂತೆ ಒಟ್ಟು 8 ಮಂದಿಯನ್ನು ಡ್ರಗ್ಸ್ ಸಮೇತ ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ತಮಿಳು ಸಿನಿಮಾ ಸಹಾಯಕ ನಿರ್ದೇಶಕಿ ವಿನ್ಸಿ ನಿವೇದಾ ಹಾಗೂ ಆರು ಯುವಕರು ಸೇರಿದ್ದಾರೆ.
ಪೊಲೀಸ್ ಮಾಹಿತಿಯ ಪ್ರಕಾರ, ರಾತ್ರಿ ಸಮಯದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ಗುಂಪು ಡ್ರಗ್ಸ್ ಸಮೇತ ಸಿಕ್ಕಿಬಿದ್ದರು. ವಾಹನದಲ್ಲಿ ವಶಪಡಿಸಿಕೊಂಡಿರುವ ಮಾದಕ ವಸ್ತುಗಳು ತನಿಖೆಗೆ ಒಳಪಟ್ಟಿವೆ. ಈ ಎಂಟು ಜನರ ವಿರುದ್ಧ NDPS ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಯಾರು ಈ ಅಂಜು ಕೃಷ್ಣ?
ಯುವ ನಟಿ ಅಂಜು ಕೃಷ್ಣ ಮಲಯಾಳಂ ಚಿತ್ರರಂಗದಲ್ಲಿ ಸಣ್ಣ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದರು. ವಿಶೇಷವಾಗಿ ನಟ ಜೋಜು ಜಾರ್ಜ್ ನಾಯಕನಾಗಿದ್ದ ‘ಆರೋ’ ಚಿತ್ರದಲ್ಲಿ ನಟಿಸಿ ಗಮನ ಸೆಳೆದಿದ್ದರು. ಇತ್ತೀಚಿಗೆ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಕೂಡ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು.
ಏನಾಯಿತು ಘಟನೆಯಲ್ಲಿ?
ಪೊಲೀಸರು ರಾತ್ರಿ ಸಮಯದಲ್ಲಿ ರೂಟೀನ್ ಚೆಕಿಂಗ್ ನಡೆಸುತ್ತಿದ್ದಾಗ ಈ ಗುಂಪಿನ ವಾಹನವನ್ನು ನಿಲ್ಲಿಸಿ ತಪಾಸಣೆ ನಡೆಸಿದರು. ವಾಹನದೊಳಗೆ ಡ್ರಗ್ಸ್ ಇರುವುದು ಪತ್ತೆಯಾದ ತಕ್ಷಣ ಎಲ್ಲರನ್ನೂ ವಶಕ್ಕೆ ಪಡೆಯಲಾಯಿತು. ಈ ಪ್ರಕರಣದಲ್ಲಿ ಯಾವ ಮಾದಕ ವಸ್ತುಗಳು, ಎಷ್ಟು ಪ್ರಮಾಣದಲ್ಲಿ ಸಿಕ್ಕಿವೆ ಎಂಬುದರ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.
ಪ್ರಸ್ತುತ ಎಲ್ಲರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಇದರ ಹಿಂದಿನ ಜಾಲ, ಪೂರೈಕೆದಾರರು ಯಾರು ಎಂಬುದನ್ನು ಪತ್ತೆ ಮಾಡಲು ತನಿಖೆ ತೀವ್ರಗೊಂಡಿದೆ.





