ಯೂನಿಯನ್ ಬಜೆಟ್ 2026-27ರಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶಿಕ್ಷಣ, ಆರೋಗ್ಯ, ತೆರಿಗೆ ಸುಧಾರಣೆಗಳು ಮತ್ತು ಆಮದು ಸುಂಕದ ಬದಲಾವಣೆಗಳ ಮೂಲಕ ಹಲವು ರಿಲೀಫ್‌ಗಳನ್ನು ಘೋಷಿಸಿದ್ದಾರೆ. ಈ ಬಜೆಟ್ ಗ್ರಾಹಕರಿಗೆ ಕೆಲವು ವಸ್ತುಗಳ ಬೆಲೆ ಕಡಿಮೆ ಮಾಡುವುದರ ಜೊತೆಗೆ ದೇಶೀಯ ಉತ್ಪಾದನೆ, EV ಮತ್ತು ನವೀಕರಣೀಯ ಶಕ್ತಿ ವಲಯಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.
ಇಳಿಕೆಯಾಗುತ್ತಿರುವ ಉತ್ಪನ್ನಗಳು :
ಬಜೆಟ್‌ನಲ್ಲಿ ಆಮದು ಸುಂಕ ಇಳಿಕೆ/ವಿನಾಯ್ತಿ ನೀಡಲಾದ ಕಾರಣದಿಂದ ಈ ವಸ್ತುಗಳ ಬೆಲೆ ಕಡಿಮೆಯಾಗುವ ನಿರೀಕ್ಷೆಯಿದೆ:
- 17 ಕ್ಯಾನ್ಸರ್ ಔಷಧಗಳು ಮತ್ತು ಇತರ ಜೀವರಕ್ಷಕ ಔಷಧಗಳು ಆಮದು ಸುಂಕದ ಬೆಲೆ ಗಣನೀಯವಾಗಿ ಇಳಿಕೆ.
- ಇವಿ ಬ್ಯಾಟರಿಗಳು (ಲೀಥಿಯಂ ಅಯಾನ್ ಬ್ಯಾಟರಿ ಮತ್ತು ಸಂಬಂಧಿತ ಭಾಗಗಳು) ಸುಂಕ ಇಳಿಕೆಯಿಂದ ಎಲೆಕ್ಟ್ರಿಕ್ ವಾಹನಗಳ ಬೆಲೆ ಇಳಿಕೆ.
- ಸೌರ ಫಲಕಗಳು ಮತ್ತು ಸೋಲಾರ್ ಗ್ಲಾಸ್/ಉಪಕರಣಗಳು ನವೀಕರಣೀಯ ಶಕ್ತಿ ಉತ್ಪಾದನೆಗೆ ಬೆಂಬಲ.
- ಸ್ಮಾರ್ಟ್‌ಫೋನ್‌ಗಳು ಮತ್ತು ಮೊಬೈಲ್ ಭಾಗಗಳು ಕೆಲವು ಭಾಗಗಳ ಸುಂಕ ಕಡಿತ.
- ಚರ್ಮದ ಉತ್ಪನ್ನಗಳು ಮತ್ತು ಸಂಬಂಧಿತ ವಸ್ತುಗಳು–ರಫ್ತು ಮತ್ತು ದೇಶೀಯ ಬಳಕೆಗೆ ಪ್ರೋತ್ಸಾಹ.
- ಮೈಕ್ರೋವೇವ್ ಓವನ್‌ಗಳು ಭಾಗಗಳ ಸುಂಕ ಇಳಿಕೆಯಿಂದ ಬೆಲೆ ಕಡಿಮೆ.
- ಕ್ರೀಡಾ ಉಪಕರಣಗಳು –ಖೇಲೋ ಇಂಡಿಯಾ ಮಿಷನ್ ಅಡಿಯಲ್ಲಿ ಬೆಂಬಲ.
- ಸಮುದ್ರಾಹಾರ (ಸೀಫುಡ್) – ಸಂಸ್ಕರಣೆ ಮತ್ತು ರಫ್ತುಗೆ ಸಹಾಯ.
ಈ ಬದಲಾವಣೆಗಳು ಸಾಮಾನ್ಯ ಗ್ರಾಹಕರಿಗೆ, ವಿಶೇಷವಾಗಿ ಆರೋಗ್ಯ ಮತ್ತು ಹಸಿರು ಶಕ್ತಿ ಬಳಕೆದಾರರಿಗೆ ಉಪಯುಕ್ತವಾಗಲಿವೆ.
ದುಬಾರಿಯಾಗುತ್ತಿರುವ ಉತ್ಪನ್ನಗಳು (ಬೆಲೆ ಏರಿಕೆ ) :
ತೆರಿಗೆ/ಸುಂಕ ಏರಿಕೆ ಅಥವಾ ಇತರ ಕಾರಣಗಳಿಂದ ಈ ವಸ್ತುಗಳ ಬೆಲೆ ಹೆಚ್ಚಾಗುವ ನಿರೀಕ್ಷೆ:
- ಸಿಗರೇಟ್, ಪಾನ್ ಮಸಾಲಾ ಮತ್ತು ಇತರ ತಂಬಾಕು ಉತ್ಪನ್ನಗಳು – ಎಕ್ಸೈಸ್ ಡ್ಯೂಟಿ ಏರಿಕೆಯಿಂದ ಬೆಲೆ ಗಣನೀಯವಾಗಿ ಏರುತ್ತದೆ.
- ಆಲ್ಕೋಹಾಲ್ ಮತ್ತು ವಿದೇಶಿ ಮದ್ಯ : ಸುಂಕ/ತೆರಿಗೆ ಏರಿಕೆಯಿಂದ ದುಬಾರಿ.
- ವಾಣಿಜ್ಯ ಎಲ್‌ಪಿಜಿ : ಕೆಲವು ಬದಲಾವಣೆಗಳಿಂದ ಬೆಲೆ ಪ್ರಭಾವ.
- ಆಮದು ಮಾಡಿಕೊಂಡ ಐಷಾರಾಮಿ ವಸ್ತುಗಳು (ಲಕ್ಷರಿ ಐಟಂಗಳು) – ಸುಂಕ ಸಂಬಂಧಿತ ಬದಲಾವಣೆಗಳಿಂದ ಏರಿಕೆ.
ಈ ಬದಲಾವಣೆಗಳು ಆರೋಗ್ಯ, ಪರಿಸರ ಮತ್ತು ದೇಶೀಯ ಉತ್ಪಾದನೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿವೆ. ಆದರೆ ತಂಬಾಕು ಮತ್ತು ಆಲ್ಕೋಹಾಲ್‌ನಂತಹ ‘ಸಿನ್ ಗೂಡ್ಸ್’ ಮೇಲಿನ ತೆರಿಗೆ ಏರಿಕೆಯು ಸರ್ಕಾರದ ಆದಾಯ ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ.
ಬಜೆಟ್‌ನ ಈ ನಿರ್ಧಾರಗಳು ದೀರ್ಘಕಾಲೀನವಾಗಿ ಆರ್ಥಿಕತೆಗೆ ಒಳ್ಳೆಯದು ಆಗಬಹುದು, ಆದರೆ ತಕ್ಷಣದಲ್ಲಿ ನಿಮ್ಮ ಜೇಬಿನ ಮೇಲೆ ಮಿಶ್ರ ಪರಿಣಾಮ ಬೀರುತ್ತದೆ.





