ಬೆಳ್ಳಿ ಇದೀಗ ಬಂಗಾರಕ್ಕಿಂತಲೂ ದುಬಾರಿಯಾಗುತ್ತಿದೆ. ಜನವರಿ 29, 2026ರಂದು ಚೆನ್ನೈ ಮತ್ತು ಹೈದರಾಬಾದ್ನಲ್ಲಿ 1 ಕೆ.ಜಿ ಬೆಳ್ಳಿ ಬೆಲೆ ₹4 ಲಕ್ಷ ದಾಟಿದ್ದು, ಬೆಂಗಳೂರಿನಲ್ಲಿ ₹3.80 ಲಕ್ಷಕ್ಕೆ ತಲುಪಿದೆ. ಕೇವಲ 8 ತಿಂಗಳಲ್ಲಿ ₹3 ಲಕ್ಷದಷ್ಟು ಏರಿಕೆಯಾಗಿದ್ದು, ಹೂಡಿಕೆದಾರರು ಮತ್ತು ಖರೀದಿದಾರರಿಗೆ ದೊಡ್ಡ ಆಘಾತವಾಗಿದೆ. ಬೆಳ್ಳಿ ಏಕೆ ಈ ಭಾರೀ ಏರಿಕೆ ಕಂಡಿದೆ? ಜಾಗತಿಕ ಮತ್ತು ಸ್ಥಳೀಯ ಕಾರಣಗಳನ್ನು ನೋಡೋಣ.
ಜಾಗತಿಕ ಮಾರುಕಟ್ಟೆಯ ಎಫೆಕ್ಟ್..!
ಅಮೆರಿಕ ಡಾಲರ್ ದುರ್ಬಲವಾದಾಗ ಬೆಳ್ಳಿ ಬೆಲೆ ಮೇಲೆ ಪರಿಣಾಮ ಬೀರುತ್ತದೆ. ಬೆಳ್ಳಿಗೆ ಬೇಡಿಕೆ ಹೆಚ್ಚಳವಾದಂತೆ ಬೆಲೆ ಏರಿಕೆಯಾಗುತ್ತದೆ. ಮಧ್ಯಪ್ರಾಚ್ಯ ಸಂಘರ್ಷದಿಂದ ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ. ರಷ್ಯಾ-ಉಕ್ರೇನ್ ಯುದ್ಧ, ತೈವಾನ್-ಚೀನಾ ಸಂಘರ್ಷದಲ್ಲಿ ಇವೆಲ್ಲಾ ಜಾಗತಿಕ ಅಸ್ಥಿರತೆ ಸೃಷ್ಟಿಸಿ ಯುದ್ಧಗಳ ವೇಳೆ ಹೂಡಿಕೆದಾರರಿಗೆ ಬೆಳ್ಳಿ ಮೇಲೆ ಆಸಕ್ತಿ ಹೆಚ್ಚಿಸಿವೆ. ಅಮೆರಿಕದ ಕೇಂದ್ರೀಯ ಬ್ಯಾಂಕ್ ಬಡ್ಡಿ ದರ ಇಳಿಕೆ ಸಾಧ್ಯತೆ ಇದೆ. ಲೋಹಗಳ ಹೂಡಿಕೆ ಹೆಚ್ಚಾದಂತೆ ಬೆಳ್ಳಿ ಬೆಲೆ ಏರಿಕೆಯಾಗುತ್ತದೆ.
ಕೈಗಾರಿಕೆಗಳಿಗೆ ಬೆಳ್ಳಿ ಬೇಡಿಕೆ ಹೆಚ್ಚಳ..!
- ಎಲೆಕ್ಟ್ರಿಕ್ ವಾಹನಗಳ ದುನಿಯಾದಲ್ಲಿ ಬೆಳ್ಳಿಗೆ ಇನ್ನಿಲ್ಲದ ಬೇಡಿಕೆ ಹೆಚ್ಚಳ.
- ಸೋಲಾರ್ ಪ್ಯಾನಲ್ಗಳ ತಯಾರಿಕೆಗೆ ಬೆಳ್ಳಿ ಬೇಕೇ ಬೇಕು.
- ಭಾರತ, ಚೀನಾ & ಯುರೋಪ್ಗಳಲ್ಲಿ ಬೆಳ್ಳಿಗೆ ಕೈಗಾರಿಕಾ ಬೇಡಿಕೆ ದಿನೇದಿನೇ ಹೆಚ್ಚಾಗುತ್ತಿದೆ.
- ಇವಿ ವಾಹನ, ಬ್ಯಾಟರಿ, ಚಿಪ್ & ಸೆನ್ಸರ್ ತಯಾರಿಕೆಗೆ ಬೆಳ್ಳಿ ಅತ್ಯಗತ್ಯ.
- ಆಟೋಮೊಬೈಲ್ & ಟೆಕ್ ಎರಡೂ ವಲಯಗಳಿಗೆ ಬೆಳ್ಳಿ ಬೇಕೇ ಬೇಕು.
- 5ಜಿ & ಎಐ ತಂತ್ರಜ್ಞಾನಕ್ಕೂ ಬೆಳ್ಳಿ ಲೋಹ ಬೇಕು .
ಬೆಳ್ಳಿ ಬೇಡಿಕೆ ಹೆಚ್ಚಳ..ಉತ್ಪಾದನೆ ಕುಸಿತ..!
ಮೆಕ್ಸಿಕೋ, ಪೆರು & ಚಿಲಿ ದೇಶಗಳು ಬೆಳ್ಳಿಯ ಅತಿ ಹೆಚ್ಚು ಉತ್ಪಾದಕ ರಾಷ್ಟ್ರಗಳು. ಕಾರ್ಮಿಕ ಸಮಸ್ಯೆ & ಪರಿಸರ ನಿಯಮಗಳಿಗೆ ಉತ್ಪಾದನೆ ಕುಸಿಯುತ್ತಿದೆ. ಬೆಳ್ಳಿ ಹೆಚ್ಚಾಗಿ ತಾಮ್ರ ಮತ್ತು ಜಿಂಕ್ ಜೊತೆಯಲ್ಲೇ ಉಪ ಉತ್ಪನ್ನವಾಗಿ ಬರುತ್ತದೆ.ಆ ಗಣಿಗಳ ಉತ್ಪಾದನೆ ಕಡಿಮೆಯಾದರೆ ಬೆಳ್ಳಿಗೆ ನೇರ ಹೊಡೆತ.
ಭಾರತಕ್ಕೆ ಏಕೆ ಬೆಳ್ಳಿ ಬೆಲೆ ಏರಿಕೆ ತಲೆನೋವು..?
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವಾದಂತೆ ಬೆಳ್ಳಿ ಬೆಲೆ ದುಬಾರಿಯಾಗುತ್ತದೆ. ಹಬ್ಬ-ಮದುವೆ ಸೀಸನ್ನಲ್ಲಿ ಬೆಳ್ಳಿ ಆಭರಣಗಳ ಖರೀದಿ ಹಿಂದೆಂದಿಗಿಂತ ಹೆಚ್ಚು. ಚಿನ್ನ ದುಬಾರಿಯಾದಾಗ ಜನರು ಬೆಳ್ಳಿ ಕಡೆ ಮುಖ ಮಾಡುತ್ತಾರೆ. ಬೆಳ್ಳಿ ಮೇಲಿನ ಆಮದು ತೆರಿಗೆ & 3% ಜಿಎಸ್ ಟಿ ಇನ್ನಷ್ಟು ಏರಿಸುತ್ತವೆ. ಷೇರು ಮಾರುಕಟ್ಟೆ ಏರಿಳಿತವಾದಾಗ ಬೆಳ್ಳಿ ಮೇಲೆ ಒಲವು ಹೆಚ್ಚಿಸುತ್ತದೆ.





