ಹುಬ್ಬಳ್ಳಿ: ಇಡೀ ದೇಶಾದ್ಯಂತ 77 ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದಾರೆ. ಅದೇ ರೀತಿ ಕೂಡ ಹುಬ್ಬಳ್ಳಿ ಕೇಶ್ವಾಪುರ ನವೀನ ಪಾರ್ಕ್ದಲ್ಲಿ ಸ್ವರ್ಣ ಗ್ರೂಪ್ ಆಫ್ ಕಂಪನಿ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ವಿಎಸ್ವಿ ಪ್ರಸಾದ್ ಅವರ ನೇತೃತ್ವದಲ್ಲಿ, ಇಡೀ ನವೀನ ಪಾರ್ಕ್ ನಿವಾಸಿಗಳ ಸಮ್ಮುಖದಲ್ಲಿ ಡಾ. ವಿಎಸ್ವಿ ಪ್ರಸಾದ್ ಅವರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಪ್ರದೀಪ್ ಶೆಟ್ಟರ್ ಅವರು ಧ್ವಜಾರೋಹಣ ಮಾಡಿದರು.
ಈ ಶುಭ ಸಂದರ್ಭದಲ್ಲಿ ಡಾ. ಬಿ.ಆರ್ ಅಂಬೇಡ್ಕರ್, ಮಹಾತ್ಮ ಗಾಂಧಿಜಿ, ಜವಾಹರಲಾಲ್ ನೆಹರು ಅವರ ಭಾವಚಿತ್ರಕ್ಕೆ ನವೀನ ಪಾರ್ಕ್ ಮಹಿಳೆಯರು ವಿಶೇಷ ಪೂಜೆ ಮಾಡಿ ನಮನ ಸಲ್ಲಿಸಿದರು. ಧ್ವಜಾರೋಹಣ ಮಾಡಿದ ಗಣ್ಯರು ರಾಷ್ಟ್ರಗೀತೆ ಹೇಳುವುದರ ಮೂಲಕ ರಾಷ್ಟ್ರ ಭಕ್ತಿ ಮೆರೆದರು. ನಮ್ಮ ಭಾರತ ದೇಶ ವಿಶ್ವಗುರು ಆಗುತ್ತಿದೆ. ಡಾ. ಬಿ.ಆರ್ ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ನಾವೆಲ್ಲರೂ ಪಾಲಿಸುತ್ತಿದ್ದೇವೆ. ಪ್ರತಿ ವರ್ಷ ನಮ್ಮ ಭಾರತ ದೇಶ ಬೆಳವಣಿಗೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ನಮ್ಮ ಭಾರತ ದೇಶ ವಿಶ್ವಗುರು ಆಗುವುದಕ್ಕೆ ನಾವು ಶ್ರಮಿಸಬೇಕೆಂದು ಧ್ವಜಾರೋಹಣ ಮಾಡಿದ ಡಾ. ವಿ.ಎಸ್.ವಿ ಪ್ರಸಾದ್ ಅವರು ಶುಭ ನುಡಿದರು.
ಈ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನವೀನ ಪಾರ್ಕ್ ನಿವಾಸಿಗಳು, ಸ್ಥಳೀಯ ಹಿರಿಯರು, ಮಕ್ಕಳು ಭಾಗವಹಿಸಿದ್ದರು.
ಹುಬ್ಬಳ್ಳಿ ಭಾರತ ಇಂದು ಯಶಸ್ಸಿನತ್ತ ದಾಪುಗಾಲು ಹಾಕಲು ನಮ್ಮಲ್ಲಿರುವ ಐಕ್ಯತೆಯ ಭಾವನೆ, ದೇಶಭಕ್ತಿ ಕಾರಣ ಎಂದು ಸ್ವರ್ಣ ಸಮೂಹದ ಚೇರಮನ್ ಡಾ.ಚಿಗರುಪಾಟಿ ವಿ.ಎಸ್.ವಿ. ಪ್ರಸಾದ ಹೇಳಿದರು. ಕೇಶ್ವಾಪುರದ ಬಾಲಭವನ ಉದ್ಯಾನದಲ್ಲಿ ಎಪ್ಪತ್ತೇಳನೆ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಸಂವಿಧಾನದ ವಿಚಾರ ಮತ್ತು ಆದರ್ಶಗಳಾದ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತ್ವತ್ವವನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮದಾಗಿದ್ದು ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ವಿಶ್ವಗುರುವಾಗಿ ಪ್ರಪಂಚದ ಭೂಪಟದಲ್ಲಿ ಮಿಂಚುವ ದಿನ ದೂರವಿಲ್ಲ ಎಂದರು. ಕೇಶ್ವಾಪುರದ ಬಾಲಭವನ ಉದ್ಯಾನ ಇಡಿ ಉತ್ತರಕರ್ನಾಟಕಕ್ಕೆ ಮಾದರಿಯಾದ ಉದ್ಯಾನ ಎಂದು ಬಣ್ಣಿಸಿದರಲ್ಲದೇ ಇದಕ್ಕಾಗಿ ಬಡಾವಣೆಯ ಎಲ್ಲರನ್ನೂ ಅಭಿನಂದಿಸಿದರು.
ಮಾಜಿ ಉಪ ಮೇಯರ್ ಉಮಾ ಮುಕುಂದ, ಗುತ್ತಿಗೆದಾರ ಪ್ರಸಾದ ಕರಿನಂದಿ, ಉದ್ಯಾನವನದ ಕಾರ್ಯಕಾರಿ ಮಂಡಳಿಯ ಮನೋಜ ಜೈನ್, ಎಚ್.ಆರ್. ನರಗುಂದ, ಗುರಪ್ಪ ಮಡ್ಡಿ, ಮಠದ, ಚಿದಾನಂದ ಬಡಿಗೇರ ಉಪಸ್ಥಿತರಿದ್ದರು. ಗಂಗಾಧರ ಗಂಜಿ ನಿರೂಪಿಸಿದರು. ಮೋಹನ ವಾಲಿ ವಂದಿಸಿದರು. ವಿಶ್ವನಾಥ ಕಮತಗಿ ಪ್ರಸಾದ ಸೇವೆ ಸಮರ್ಪಿಸಿದರು.





