• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, October 18, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಭಾರತದಲ್ಲಿ ಹೂಡಿಕೆಗೆ ವಿವಿಧ ರಾಷ್ಟ್ರ ನಾಯಕರ ಜತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಹತ್ವದ ಸಭೆ

admin by admin
January 20, 2026 - 11:46 pm
in Flash News, ದೇಶ, ವಿದೇಶ
0 0
0
Untitled design 2026 01 20T232401.365

ದಾವೋಸ್: ಭಾರತ ಜಾಗತಿಕ ಹೂಡಿಕೆಗೆ ವಿಶ್ವಾಸಾರ್ಹ ಮತ್ತು ಭವಿಷ್ಯದ ಸುಭದ್ರ ತಾಣವಾಗಿ ಹೊರ ಹೊಮ್ಮುತ್ತಿದ್ದು, ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆ (WEF) ಎರಡನೇ ದಿನದ ಶೃಂಗ ಸಭೆ ಇದಕ್ಕೆ ಸಾಕ್ಷಿಯಾಗಿದೆ.

2026ರ ಶುರುವಿನಲ್ಲೇ ಈ ವಿಶ್ವ ಆರ್ಥಿಕ ವೇದಿಕೆ ಮಹತ್ವದ ಸಭೆಯಲ್ಲಿ ಮಂಗಳವಾರ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಅವರು ವಿವಿಧ ರಾಷ್ಟ್ರಗಳ ಪ್ರತಿನಿಧಿಗಳ ಜತೆ ಭಾರತದೊಂದಿಗೆ ಹೂಡಿಕೆ ಒಪ್ಪಂದಕ್ಕೆ ಮಾತುಕತೆ ನಡೆಸಿ ಈ ಬಗ್ಗೆ ಚರ್ಚೆ ನಡೆಸಿದರು.

RelatedPosts

ಕ್ಯಾನ್ಸರ್ ರೋಗಿಗಳಿಗೆ ಕೇಂದ್ರದಿಂದ ಬಿಗ್ ರಿಲೀಫ್; 137 ಔಷಧಿಗಳ ಬೆಲೆ ಶೇ. 70 ರಷ್ಟು ಇಳಿಕೆ

ಫ್ರಾನ್ಸ್‌ನಲ್ಲಿ ಬೆಲೆ ಏರಿಕೆ: ಆರ್ಥಿಕ ಬಿಕ್ಕಟ್ಟಿಗೆ ಜನಾಕ್ರೋಶ, ಐತಿಹಾಸಿಕ ಕಟ್ಟಡಗಳ ಧ್ವಂಸ

ದಾಂಡಿಯಾ ಕಾರ್ಯಕ್ರಮದ ವೇಳೆ ದುರಂತ: ಲೈಟಿಂಗ್ ಕಂಬ ಬಿದ್ದು ವಿದ್ಯಾರ್ಥಿನಿ ಸಾ*ವು

ಕೋಲ್ಕತ್ತಾ ಕಾಲ್ತುಳಿತ ಪ್ರಕರಣ; ದುರ್ಗಾ ಪೂಜಾ ಪೆಂಡಾಲ್ ಆಯೋಜಕರು ಸೇರಿ 7 ಮಂದಿ ಅರೆಸ್ಟ್‌

ADVERTISEMENT
ADVERTISEMENT

ಭಾರತದ ತ್ವರಿತ, ಶುದ್ಧ ಇಂಧನ ವಿಸ್ತರಣೆಯಲ್ಲಿ ಪಾಲುದಾರರಾಗಲು ಜಾಗತಿಕ ಹೂಡಿಕೆದಾರರನ್ನು ಸೆಳೆದರು. ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನವೀಕರಿಸಬಹುದಾದ ಇಂಧನ ಮಾರುಕಟ್ಟೆಗಳಲ್ಲಿ ಭಾರತ ಪ್ರಮುಖ ಪಾತ್ರದಾರಿಯಾಗಿದೆ. ಸುಸ್ಥಿರತೆ ಮತ್ತು ಜಾಗತಿಕ ಪರಿವರ್ತನೆಗೆ ಮಾರ್ಗಗಳು ಕುರಿತ ದುಂಡುಮೇಜಿನ ಸಭೆಯಲ್ಲಿ ಮುಖ್ಯ ಭಾಷಣಕಾರರಾಗಿದ್ದ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಸುಸ್ಥಿರತೆ ಬಾಹ್ಯ ಕಾಳಜಿ ಮಾತ್ರವಲ್ಲ, ಸ್ಪರ್ಧಾತ್ಮಕತೆ, ಸ್ಥಿತಿಸ್ಥಾಪಕತ್ವ ಮತ್ತು ದೀರ್ಘಕಾಲೀನ ಆರ್ಥಿಕ ಬೆಳವಣಿಗೆಯ ಕೇಂದ್ರ ಚಾಲಕವಾಗಿದೆ ಎಂದು ಒತ್ತಿ ಹೇಳಿದರು.

ಜಗತ್ತು ಪರಿವರ್ತನೆಗೊಳ್ಳಬೇಕೆ ಬೇಡವೇ ? ಎಂಬುದು ಈ ದಶಕದ ನಿರ್ಣಾಯಕ ಸವಾಲು ಅಲ್ಲ, ಆದರೆ ಸುಸ್ಥಿರತೆಯನ್ನು ಅಗತ್ಯ ಪ್ರಮಾಣದಲ್ಲಿ, ವೇಗದಲ್ಲಿ ಮತ್ತು ಆರ್ಥಿಕವಾಗಿ ಬಲಪಡಿಸುವ ರೀತಿಯಲ್ಲಿ ಹೇಗೆ ತಲುಪಿಸಬಹುದು ? ಎಂಬುದೇ ನಮ್ಮ ಮುಂದಿರುವ ನಿಜವಾದ ಸವಾಲು ಎಂದು ಹೇಳಿದರು.

ಭಾರತ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಡಿಸೆಂಬರ್ 2025ರ ವೇಳೆಗೆ 267 GW ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯ ಸಾಧಿಸಿದೆ ಮತ್ತು 2030ರ ಗುರಿಗಳನ್ನು ಪೂರೈಸುವ ಹಾದಿಯಲ್ಲಿದೆ ಎಂದು ಇದೇ ವೇಳೆ ಜಾಗತಿಕವಾಗಿ ಗಮನ ಸೆಳೆದರು. ಶುದ್ಧ ಇಂಧನ ಮತ್ತು ಸುಸ್ಥಿರತೆಯಲ್ಲಿ ನಮ್ಮ ಬಲವಾದ ದೇಶೀಯ ಉತ್ಪಾದನೆ, ಗ್ರಿಡ್ ಆಧುನೀಕರಣ, ಇಂಧನ ಸಂಗ್ರಹ ಪರಿಹಾರಗಳು ಮತ್ತು ಪರಮಾಣು ಶಕ್ತಿಗಾಗಿ ಉದಯೋನ್ಮುಖ ಚೌಕಟ್ಟುಗಳಿಂದ ಬೆಂಬಲಿತವಾಗಿದೆ. ಸುಸ್ಥಿರ ಮತ್ತು ಅಂತರ್ಗತ ಜಾಗತಿಕ ಇಂಧನ ಪರಿವರ್ತನೆಯನ್ನು ಸಕ್ರಿಯಗೊಳಿಸಲು ಬಂಡವಾಳ ಹಾಗೂ ಸರ್ಕಾರಗಳು, ಖಾಸಗಿ ವಲಯ ಮತ್ತು ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್‌ಗಳ ಸಹಯೋಗದ ಅಗತ್ಯವಿದೆ ಎಂದು ಜೋಶಿ ಅಭಿಪ್ರಾಯ ಪಟ್ಟಿದ್ದಾರೆ.

2070ರ ವೇಳೆಗೆ ನಿವ್ವಳ-ಶೂನ್ಯ ಇಂಗಾಲ ಹೊರಸೂಸುವಿಕೆ ಸಾಧಿಸುವ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದ ಸಚಿವ ಜೋಶಿ, ಭಾರತದ ವಿಧಾನವು ವಸುಧೈವ ಕುಟುಂಬಕಂ-ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎಂಬ ತತ್ವದಿಂದ ಮಾರ್ಗದರ್ಶಿಸಲ್ಪಟ್ಟಿದೆ ಎಂದು ಹೇಳಿದರು.

ಸುಸ್ಥಿರತೆ ಭಾರತದ ಒಂದು ಕಾರ್ಯತಂತ್ರ:

ಭಾರತ ಸುಸ್ಥಿರತೆಯನ್ನು ಕೇವಲ ತಾಂತ್ರಿಕ ಬದಲಾವಣೆಯಾಗಿ ನೋಡದೆ ಆರ್ಥಿಕತೆ ಮತ್ತು ಸಮಾಜದ ಕಾರ್ಯತಂತ್ರದ ರೂಪಾಂತರವಾಗಿ ನೋಡುತ್ತದೆ ಮತ್ತು ಬೆಳವಣಿಗೆಗೆ ಅತ್ಯಂತ ವಿಶ್ವಾಸಾರ್ಹ ಹಾಗೂ ಕೈಗೆಟುಕುವ ಮತ್ತು ಭವಿಷ್ಯಕ್ಕೆ ಸಿದ್ಧವಾದ ಮಾರ್ಗವಾಗಿ ದೃಢನಿಶ್ಚಯದಿಂದ ನವೀಕರಿಸಬಹುದಾದ ಇಂಧನ ಮೂಲಗಳನ್ನು ಅನುಸರಿಸುತ್ತಿದೆ.

ಇದೇ ವೇಳೆ ಸಚಿವ ಪ್ರಲ್ಹಾದ ವಿವಿಧ ರಾಷ್ಟ್ರಗಳ ಕೈಗಾರಿಕಾ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ಮತ್ತು ಸಭೆ ಸಹ ನಡೆಸಿದರು. ಓಮನ್‌ ಪ್ರಧಾನಿ ಕಚೇರಿ ಆರ್ಥಿಕ ಸಲಹೆಗಾರ ಡಾ. ಸೈದ್ ಮೊಹಮ್ಮದ್ ಅಹ್ಮದ್ ಅಲ್ ಸಕ್ರಿ ಅವರೊಂದಿಗೆ ಸಭೆ ನಡೆಸಿ ಚರ್ಚಿಸಿದರು. ಸೌರ, ಪವನ, ಹಸಿರು ಹೈಡ್ರೋಜನ್ ಮತ್ತು ಇಂಧನ ಸಂಗ್ರಹದಲ್ಲಿ ಭಾರತದ ಮಹತ್ತರ ಸಾಧನೆ ಬಗ್ಗೆ ತಿಳಿಸಿದರು. ಭಾರತ-ಓಮನ್ ಸಿಇಪಿಎ ಮತ್ತು ಅಂತರರಾಷ್ಟ್ರೀಯ ಸೌರ ಒಕ್ಕೂಟ ಮತ್ತು ಒನ್ ಸನ್ ಒನ್ ವರ್ಲ್ಡ್ ಒನ್ ಗ್ರಿಡ್ ಬಗ್ಗೆ ಚರ್ಚೆ ನಡೆಸಿದರು.

ಬೆಲ್ಜಿಯಂ ಉಪ ಪ್ರಧಾನಿ ಮತ್ತು ವಿದೇಶಾಂಗ ವ್ಯವಹಾರಗಳು, ಯುರೋಪಿಯನ್ ವ್ಯವಹಾರಗಳು ಮತ್ತು ಅಭಿವೃದ್ಧಿ ಸಹಕಾರ ಸಚಿವ ಮ್ಯಾಕ್ಸಿಮ್ ಪ್ರೆವೋಟ್ ಅವರೊಂದಿಗೆ ಸಹ ಮಹತ್ವದ ಸಭೆ ನಡೆಸಿ, ಭಾರತ-ಬೆಲ್ಜಿಯಂ ಪಾಲುದಾರಿಕೆ ಬಗ್ಗೆ ಪುನರುಚ್ಚರಿಸಿದರು. ಕುವೈತ್‌ನ ವಿದ್ಯುತ್, ನೀರು ಮತ್ತು ನವೀಕರಿಸಬಹುದಾದ ಇಂಧನ ಸಚಿವ ಸುಬೈಹ್ ಅಬ್ದುಲ್ ಅಜೀಜ್ ಅಲ್-ಮುಖೈಝೀಮ್ ಅವರೊಂದಿಗೆ ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೂಡಿಕೆ ಸಂಬಂದ ಚರ್ಚಿಸಿದರು.

WEF ವಾರ್ಷಿಕ ಸಭೆಯ ಹೊರತಾಗಿ ಪ್ರಲ್ಹಾದ ಜೋಶಿ ಅವರು ಅಂತರಾಷ್ಟ್ರೀಯ ಸಹಕಾರ ಮತ್ತು ಶುದ್ಧ ಇಂಧನದಲ್ಲಿ ಹೂಡಿಕೆಯನ್ನು ಬಲಪಡಿಸಲು ಉನ್ನತ ಮಟ್ಟದ ದ್ವಿಪಕ್ಷೀಯ ಸಂವಾದ ನಡೆಸಿದರು. ಭಾರತದಲ್ಲಿ ದೀರ್ಘಕಾಲೀನ ಹವಾಮಾನ ಮತ್ತು ಶುದ್ಧ ಇಂಧನ ಹೂಡಿಕೆ ಹೆಚ್ಚಿಸುವತ್ತ ಗಮನಹರಿಸಿದ ಜೋಶಿ, ಲಾ ಕೈಸ್ಸೆಯ ಅಧ್ಯಕ್ಷ ಮತ್ತು ಸಿಇಒ ಚಾರ್ಲ್ಸ್ ಎಮಂಡ್ ಮತ್ತು ಸಿಒಒ ಶ್ರೀಮತಿ ಸಾರಾ ಬೌಚರ್ಡ್ ಅವರೊಂದಿಗೆ ಚರ್ಚೆ ನಡೆಸಿದರು. 2030ರ ವೇಳೆಗೆ ಗುಂಪಿನ ಬದ್ಧ USD 400 ಶತಕೋಟಿ ಹವಾಮಾನ ಕ್ರಿಯಾ ಹೂಡಿಕೆಗಳನ್ನು ಬಳಸಿಕೊಳ್ಳಲು ಭಾರತದೊಂದಿಗೆ ಪಾಲುದಾರಿಕೆ ವೃದ್ಧಿಗೆ ಪ್ರೋತ್ಸಾಹಿಸಿದರು.

ಐಕಿಯಾ ಚಿಲ್ಲರೆ ವ್ಯವಹಾರವನ್ನು ನಿರ್ವಹಿಸುವ ಇಂಗ್ಕಾ ಗ್ರೂಪ್‌ನ ಸಿಇಒ ಮತ್ತು ಅಧ್ಯಕ್ಷ ಜುವೆನ್ಸಿಯೊ ಮೇಜ್ಟು ಅವರನ್ನು ಭೇಟಿಯಾದ ಪ್ರಲ್ಹಾದ ಜೋಶಿ, ಅವರಲ್ಲಿ ಇಂಗ್ಕಾ ಗ್ರೂಪ್ ಭಾರತದ ನವೀಕರಿಸಬಹುದಾದ ಇಂಧನ ವಲಯವನ್ನು ವಿಶೇಷವಾಗಿ ಸೌರ, ಪವನ ಮತ್ತು ಹೈಬ್ರಿಡ್ ಪರಿಹಾರಗಳಲ್ಲಿ ಪ್ರವೇಶಿಸಲು ಆಸಕ್ತಿ ವ್ಯಕ್ತಪಡಿಸಿತು.

ಇಂಡಿಯಾ ಪೆವಿಲಿಯನ್ ಉದ್ಘಾಟನೆ:

ದಾವೋಸ್‌ನ ವಿಶ್ವ ಆರ್ಥಿಕ ವೇದಿಕೆ ಸಭೆ ವೇಳೆ ಪ್ರಮುಖವಾಗಿ ಇಂಡಿಯಾ ಪೆವಿಲಿಯನ್ ಸಹ ಉದ್ಘಾಟನೆ ಕಂಡಿತು. ಸಚಿವ ಪ್ರಹ್ಲಾದ್ ಜೋಶಿ, ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ, ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಮತ್ತು ಕರ್ನಾಟಕ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆಗಳು ಮತ್ತು ಮೂಲಸೌಕರ್ಯ ಸಚಿವ ಎಂ.ಬಿ. ಪಾಟೀಲ್ ಸೇರಿದಂತೆ ವಿವಿಧ ರಾಜ್ಯಗಳ ಕೇಂದ್ರ ಸಚಿವರು ಮುಖ್ಯಮಂತ್ರಿಗಳು ಮತ್ತು ಸಚಿವರು ಭಾಗವಹಿಸಿದ್ದು ವಿಶೇಷವಾಗಿತ್ತು.

ಇಂಡಿಯಾ ಪೆವಿಲಿಯನ್ ಉದ್ಘಾಟನೆ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ದಿ ಇಂಡಿಯಾ ಸ್ಟೋರಿ ಹೆಸರಿನ ಹಸಿರು ಹೂಡಿಕೆ ಕೈಪಿಡಿ ಸಹ ಬಿಡುಗಡೆ ಮಾಡಿದರು. ಇದು ಉತ್ಪಾದನೆ, ಮೂಲಸೌಕರ್ಯ, ನವೀಕರಿಸಬಹುದಾದ ಇಂಧನ, ತಂತ್ರಜ್ಞಾನ ಮತ್ತು ನಾವೀನ್ಯತೆಗಳಲ್ಲಿ ಭಾರತದ ಸಾಮರ್ಥ್ಯ ಹಾಗೂ 2047ರ ವಿಕಸಿತ ಭಾರತದ ದೃಷ್ಟಿಕೋನ ಮತ್ತು ಸುಸ್ಥಿರ ಮತ್ತು ಸಮಗ್ರ ಬೆಳವಣಿಗೆಗೆ ಬದ್ಧತೆಯನ್ನು ಪ್ರಸ್ತುತಪಡಿಸುತ್ತದೆ ಎಂದು ಜೋಶಿ ಪ್ರತಿಪಾದಿಸಿದರು.

ಭಾರತ NDC ಗುರಿಗಳಿಗಿಂತ ಐದು ವರ್ಷಗಳ ಮೊದಲೇ ಶೇ.50% ಪಳೆಯುಳಿಕೆ ರಹಿತ ಸ್ಥಾಪಿತ ವಿದ್ಯುತ್ ಸಾಮರ್ಥ್ಯವನ್ನು ಸಾಧಿಸಿದೆ. ಇಂಧನ ಪರಿವರ್ತನೆಯನ್ನು ಜನ-ಕೇಂದ್ರಿತ ಚಳುವಳಿಯಾಗಿ ಪರಿವರ್ತಿಸಿದೆ ಎಂದು ವಿದೇಶಿ ನಾಯಕರ ಗಮನ ಸೆಳೆದರು ಪ್ರಲ್ಹಾದ ಜೋಶಿ.

ಶೇ.8ರಷ್ಟು ಸೌರ ಸುಂಕ ಕಡಿಮೆ: ಭಾರತದಲ್ಲಿ ಸೌರ ಸುಂಕಗಳು ಸುಮಾರು ಶೇ.80ರಷ್ಟು ಕಡಿಮೆಗೊಳಿಸಿ ನವೀಕರಿಸಬಹುದಾದ ಇಂಧನ ಮತ್ತು ಸಂಗ್ರಹಣೆಗೆ ಒಟ್ಟು ನೀಡಿದೆ. ಹಸಿರು ಹೈಡ್ರೋಜನ್ ಮತ್ತು ಅಮೋನಿಯಾ ಜಾಗತಿಕವಾಗಿ ಸ್ಪರ್ಧಾತ್ಮಕ ಬೆಲೆಯಲ್ಲಿದ್ದು, ದೇಶೀಯ ಉತ್ಪಾದನಾ ಸಾಮರ್ಥ್ಯವು 144 GW ಗೆ ವಿಸ್ತರಣೆ ಕಂಡಿದೆ. ಭಾರತವನ್ನು ಕೇವಲ ಮಾರುಕಟ್ಟೆಯಾಗಿ ಮಾತ್ರವಲ್ಲದೆ, “ವಿಕಸಿ ಭಾರತ 2047” ಕಡೆಗೆ ಪ್ರಯಾಣದಲ್ಲಿ ವಿಶ್ವಾಸಾರ್ಹ ಉತ್ಪಾದನಾ ಮತ್ತು ಹೂಡಿಕೆ ಕೇಂದ್ರವಾಗಿ ಸ್ಥಾನ ಪಡೆದಿದೆ ಎಂದು ಸಚಿವ ಪ್ರಲ್ಹಾದ ಜೋಶಿ ವಿಶ್ವ ಆರ್ಥಿಕ ವೇದಿಕೆ ಗಮನ ಸೆಳೆದರು.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

ರಸ್ತೆಯಲ್ಲಿ (1)

ವಸಿಷ್ಠ ಸಿಂಹ ಬರ್ತ್‌ಡೇ ಸ್ಪೆಷಲ್: ಖಡಕ್ ಲುಕ್‌ನಲ್ಲಿ ‘ಭೀಮ್ & ರಾವ್’ ಪೋಸ್ಟರ್ ರಿವೀಲ್

by ಶಾಲಿನಿ ಕೆ. ಡಿ
October 18, 2026 - 2:34 pm
0

ರಸ್ತೆಯಲ್ಲಿ

ಬೆಂಗಳೂರಿಗರ ಗಮನಕ್ಕೆ: ಅಕ್ಟೋಬರ್ 20, 21ರಂದು ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ

by ಶಾಲಿನಿ ಕೆ. ಡಿ
October 18, 2026 - 2:23 pm
0

Untitled design 2026 10 18T134635.144

ಫ್ಯಾಂಟಸಿ ಥ್ರಿಲ್ಲರ್ ‘ಮಿಸ್ಟರ್ ಲಕ್ಕಿ’ ಟೋಪಿ ಸಾಂಗ್-ಟೀಸರ್ ಬಿಡುಗಡೆ

by ಶಾಲಿನಿ ಕೆ. ಡಿ
October 18, 2026 - 1:53 pm
0

ಕ್ಯಾನ್ಸರ್

ಕ್ಯಾನ್ಸರ್ ರೋಗಿಗಳಿಗೆ ಕೇಂದ್ರದಿಂದ ಬಿಗ್ ರಿಲೀಫ್; 137 ಔಷಧಿಗಳ ಬೆಲೆ ಶೇ. 70 ರಷ್ಟು ಇಳಿಕೆ

by ಶಾಲಿನಿ ಕೆ. ಡಿ
October 18, 2026 - 1:39 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಕ್ಯಾನ್ಸರ್
    ಕ್ಯಾನ್ಸರ್ ರೋಗಿಗಳಿಗೆ ಕೇಂದ್ರದಿಂದ ಬಿಗ್ ರಿಲೀಫ್; 137 ಔಷಧಿಗಳ ಬೆಲೆ ಶೇ. 70 ರಷ್ಟು ಇಳಿಕೆ
    October 18, 2026 | 0
  • ಫ್ರಾನ್ಸ್ ನಲ್ಲಿ ಬೆಲೆ ಏರಿಕೆ ಆರ್ಥಿಕ ಬಿಕ್ಕಟ್ಟಿಗೆ ಜನಾಕ್ರೋಶ
    ಫ್ರಾನ್ಸ್‌ನಲ್ಲಿ ಬೆಲೆ ಏರಿಕೆ: ಆರ್ಥಿಕ ಬಿಕ್ಕಟ್ಟಿಗೆ ಜನಾಕ್ರೋಶ, ಐತಿಹಾಸಿಕ ಕಟ್ಟಡಗಳ ಧ್ವಂಸ
    October 18, 2026 | 0
  • Untitled design 2026 10 18T123438.173
    ದಾಂಡಿಯಾ ಕಾರ್ಯಕ್ರಮದ ವೇಳೆ ದುರಂತ: ಲೈಟಿಂಗ್ ಕಂಬ ಬಿದ್ದು ವಿದ್ಯಾರ್ಥಿನಿ ಸಾ*ವು
    October 18, 2026 | 0
  • Untitled design (98)
    ಕೋಲ್ಕತ್ತಾ ಕಾಲ್ತುಳಿತ ಪ್ರಕರಣ; ದುರ್ಗಾ ಪೂಜಾ ಪೆಂಡಾಲ್ ಆಯೋಜಕರು ಸೇರಿ 7 ಮಂದಿ ಅರೆಸ್ಟ್‌
    October 18, 2026 | 0
  • Untitled design (96)
    ದುರ್ಗಾ ಪೂಜಾ ಪೆಂಡಾಲ್‌ನಲ್ಲಿ ಕಾಲ್ತುಳಿತ; 18 ಮಂದಿ ದುರ್ಮರಣ, ಮೃತರ ಕುಟುಂಬಕ್ಕೆ ₹2 ಲಕ್ಷ ಪರಿಹಾರ
    October 18, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version