ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆಯಲ್ಲಿ ಮತ್ತೊಬ್ಬ ಶಕ್ತಿಶಾಲಿ ಸ್ಪರ್ಧಿ ಮನೆಯಿಂದ ಹೊರಬಿದ್ದಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟ ರಘು, ಪ್ರತಿಸ್ಪರ್ಧಿಗಳಿಗೆ ಟಫ್ ಫೈಟ್ ನೀಡಿ ಕೊನೆಗೂ ಟಾಪ್–4 ಸ್ಥಾನದಲ್ಲೇ ಹೊರಹೋಗಿದ್ದಾರೆ.
ಬಿಗ್ ಬಾಸ್ ಕನ್ನಡ 12ರ ಫೈನಲ್ ರೇಸ್‌ನಲ್ಲಿ ಧನುಷ್ ಗೌಡ, ಗಿಲ್ಲಿ ನಟ, ಅಶ್ವಿನಿ ಗೌಡ, ಕಾವ್ಯ ಶೈವ, ರಕ್ಷಿತಾ ಶೆಟ್ಟಿ ಹಾಗೂ ಮ್ಯೂಟೆಂಟ್ ರಘು ಇದ್ದರು. ಈಗಾಗಲೇ ಧನುಷ್ 5ನೇ ರನ್ನರ್ ಅಪ್ ಆಗಿ ಹೊರಬಿದ್ದಿದ್ದರು. ಅವರ ಬೆನ್ನಲ್ಲೇ ರಘು ಕೂಡ ಮನೆಯಿಂದ ಹೊರಬಂದು ಟಾಪ್–4 ಸ್ಥಾನಕ್ಕೆ ಸೀಮಿತರಾಗಿದ್ದಾರೆ. ಒಂದು ಹಂತದಲ್ಲಿ ಟಾಪ್–3 ಪಕ್ಕಾ ಎಂದುಕೊಂಡಿದ್ದ ಅಭಿಮಾನಿಗಳ ಲೆಕ್ಕಾಚಾರ ಉಲ್ಟಾ ಹೊಡೆದಿದೆ.
ಅನ್ನ ನೀಡೋ ನಳಮಹಾರಾಜ
ರಘು ಅಂದರೆ ಬಿಗ್ ಬಾಸ್ ಮನೆಯಲ್ಲಿ ಮೊದಲಿಗೆ ನೆನಪಾಗೋದು ಅಡುಗೆಮನೆ. ಮನೆಯೊಳಗೆ ಎಷ್ಟೇ ಗಲಾಟೆ, ಜಗಳ, ಕೋಪ-ತಾಪ ಇದ್ದರೂ ರಘು ಅಡುಗೆ ಮಾಡುವುದನ್ನು ಬಿಡಲಿಲ್ಲ. ಎಲ್ಲರಿಗೂ ಸಮಯಕ್ಕೆ ಸರಿಯಾಗಿ ಊಟ, ತಿಂಡಿ ತಯಾರಿಸಿ ‘ಅನ್ನ ನೀಡೋ ನಳಮಹಾರಾಜ’ ಎಂಬ ಹೆಸರು ಗಳಿಸಿಕೊಂಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಹಲವಾರು ಬಾರಿ ಗಿಲ್ಲಿ ನಟರೊಂದಿಗೆ ವಾಗ್ವಾದ ಕೂಡ ನಡೆದಿದೆ. ಆದರೂ ಅಡುಗೆ ವಿಚಾರದಲ್ಲಿ ರಘು ತಮ್ಮ ಜವಾಬ್ದಾರಿಯನ್ನು ಯಾವತ್ತೂ ಮರೆತಿಲ್ಲ.
ಗಿಲ್ಲಿಯ ಜೊತೆ ವಿಶೇಷ ಬಾಂಡಿಂಗ್
ಸ್ವಭಾವದಲ್ಲಿ ಸ್ವಲ್ಪ ಸೈಲೆಂಟ್ ಆಗಿದ್ದರೂ ರಘು ಗಿಲ್ಲಿ ಜೊತೆ ಉತ್ತಮ ಬಾಂಡಿಂಗ್ ಹೊಂದಿದ್ದರು. ಇವರಿಬ್ಬರ ಸ್ನೇಹ, ಜೋಡಿ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್‌ಗಳೂ ನಡೆದಿದ್ದವು. ಕೆಲವೊಮ್ಮೆ ಗಲಾಟೆ ಆದರೂ ಮತ್ತೆ ಒಗ್ಗಟ್ಟಾಗಿ ಕಾಣಿಸಿಕೊಂಡಿದ್ದ ರಘು, ಆಟದ ಮೇಲೆ ಮಾತ್ರ ಸಂಪೂರ್ಣ ಗಮನ ಕೇಂದ್ರೀಕರಿಸಿದ್ದರು.
ಟಾಸ್ಕ್‌ನಲ್ಲಿ ಟ್ರೂ ಚಾಂಪಿಯನ್
ಟಾಸ್ಕ್ ವಿಚಾರದಲ್ಲಿ ರಘು ಯಾವಾಗಲೂ ಫೇರ್ ಪ್ಲೇಗೆ ಬೆಂಬಲ ನೀಡಿದ್ದರು. ಎದುರಾಳಿ ಉತ್ತಮ ಪ್ರದರ್ಶನ ಕೊಟ್ಟರೂ ಮುಕ್ತ ಮನಸ್ಸಿನಿಂದ ಪ್ರಶಂಸೆ ಮಾಡುತ್ತಿದ್ದರು. ಇದೇ ಕಾರಣಕ್ಕೆ ಅಶ್ವಿನಿ ಗೌಡ ಅವರೊಂದಿಗೆ ಎಷ್ಟೇ ಜಗಳವಾದರೂ ಮತ್ತೆ ಸರಿ ಹೋಗುತ್ತಿದ್ದರು. ವೀಕೆಂಡ್ ಎಪಿಸೋಡ್‌ಗಳಲ್ಲಿ ರಘು–ಅಶ್ವಿನಿ ಜಗಳ ಹಾಗೂ ಎಂಟರ್‌ಟೈನ್‌ಮೆಂಟ್ ವೀಕ್ಷಕರಿಗೆ ಫುಲ್ ಮಜಾ ನೀಡಿತ್ತು.
ರಕ್ಷಿತಾ ಮುದ್ದಿನ ಅಣ್ಣ
ಬಿಗ್ ಬಾಸ್ ಮನೆಯಲ್ಲಿ ರಘು ಮತ್ತು ರಕ್ಷಿತಾ ಶೆಟ್ಟಿ ನಡುವಿನ ಸಂಬಂಧ ಎಲ್ಲರಿಗೂ ಇಷ್ಟವಾಗಿತ್ತು. ರಕ್ಷಿತಾಗೆ ರಘು ಅಣ್ಣನಂತಿದ್ದರು. ವೀಕೆಂಡ್‌ನಲ್ಲಿ ಸುದೀಪ್ ಅವರು ಸ್ಪರ್ಧಿಗಳಿಗೆ ಉಡುಗೊರೆ ವಿನಿಮಯ ಮಾಡಲು ಹೇಳಿದಾಗ, ರಕ್ಷಿತಾ ತಮಗೆ ಅತ್ಯಂತ ಪ್ರಿಯವಾಗಿದ್ದ ಮೆಡಲ್ ಅನ್ನು ರಘುಗೆ ನೀಡಿದರು. “ರಘು ನನಗೆ ಅಣ್ಣ ಇದ್ದಂತೆ. ನಾನು ಮನೆಯಿಂದ ಹೊರಹೋದರೂ ಅವರು ನನ್ನ ಬೆಂಬಲವಾಗಿರುತ್ತಾರೆ” ಎಂಬ ರಕ್ಷಿತಾ ಮಾತುಗಳು ಎಲ್ಲರ ಮನಸ್ಸು ತಟ್ಟಿದವು. ಆ ಕ್ಷಣದಲ್ಲಿ ರಘು ಕೂಡ ಭಾವುಕರಾದರು.
ಫಿನಾಲೆ ಹಂತಕ್ಕೆ ಬಂದಾಗ ರಘು ಟಾಪ್–3ರಲ್ಲಿ ಖಂಡಿತ ಇರುತ್ತಾರೆ ಎಂಬ ಅಭಿಪ್ರಾಯ ಬಹುತೇಕ ಅಭಿಮಾನಿಗಳಲ್ಲಿತ್ತು. ಆದರೆ ಮತದಾನದ ಲೆಕ್ಕಾಚಾರದಲ್ಲಿ ರಘು ಹಿಂದೆ ಬಿದ್ದಿದ್ದು, ಕೊನೆಗೆ ಮನೆಯಿಂದ ಹೊರಬರಬೇಕಾಯಿತು..
https://youtu.be/fpTiOtXP_hM?si=-lxvK4VgCP6Xbl-S





