ಬಿಗ್‌ಬಾಸ್ ಕನ್ನಡ ಸೀಸನ್‌ನ ಫಿನಾಲೆ ಸಮೀಪಿಸುತ್ತಿದ್ದಂತೆ, ಮನೆಯಲ್ಲಿರುವ ಅಂತಿಮ ಸ್ಪರ್ಧಿಗಳಿಗೆ ಬಿಗ್‌ಬಾಸ್ ಒಂದು ವಿಶೇಷ ಅವಕಾಶ ನೀಡಿದ್ದರು. ತಮ್ಮ ಮನಸ್ಸಿನ ಯಾವುದಾದರೂ ಮೂರು ಆಸೆಗಳನ್ನು ತಿಳಿಸುವಂತೆ ಸ್ಪರ್ಧಿಗಳಿಗೆ ಸೂಚಿಸಲಾಗಿತ್ತು. ಈ ಪೈಕಿ ಒಂದನ್ನು ಈಡೇರಿಸುವ ಭರವಸೆಯನ್ನು ಬಿಗ್‌ಬಾಸ್ ನೀಡಿದ್ದರು. ಗಿಲ್ಲಿ ನಟ ನಲ್ಲಿಮೂಳೆ ತಿನ್ನಬೇಕೆಂದು ತಮ್ಮ ಆಸೆ ವ್ಯಕ್ತಪಡಿಸಿದ್ದರು.
ಅದರಂತೆ ಬಿಗ್‌ಬಾಸ್ ತಟ್ಟೆ ತುಂಬಾ ಮಸಾಲೆಯುಕ್ತ ನಲ್ಲಿಮೂಳೆಯನ್ನು ಗಿಲ್ಲಿ ನಟನಿಗೆ ಕೊಡುತ್ತಾರೆ. ಗಿಲ್ಲಿ ಅದನ್ನು ಅತ್ಯಂತ ಉತ್ಸಾಹದಿಂದ ತಿಂದಿದ್ದಾರೆ. ನನಗೆ ಹೊಟ್ಟೆ ತುಂಬಾ ನಲ್ಲಿಮೂಳೆ ತಿನ್ನಬೇಕು ಮತ್ತು ಆರಾಮವಾಗಿ ನಿದ್ದೆ ಮಾಡಬೇಕು ಎಂಬುದು ಅವರ ಆಸೆಯಾಗಿತ್ತು. ಅದರಂತೆಯೇ ಮನಸಾರೆ ನಳ್ಳಿಮೂಲೆ ಸೇವಿಸಿ, ಆರಾಮವಾಗಿ ನಿದ್ದೆ ಕೂಡ ಮಾಡಿದ್ದರು.
ನಿದ್ದೆಯಿಂದ ಎದ್ದ ನಂತರ ಗಿಲ್ಲಿ ನಟ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿತು. ಅತಿಯಾದ ಮಸಾಲೆಯುಕ್ತ ಆಹಾರ ಸೇವನೆಯಿಂದಾಗಿ ಹೊಟ್ಟೆ ನೋವು ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಕಾಡತೊಡಗಿತು. ನನ್ನ ಕೈಯಲ್ಲಿ ಆಗ್ತಾಯಿಲ್ಲಾ ಅಣ್ಣಾ, ಹೊಟ್ಟೆಯೊಳಗೆ ಗುಡುಗುಡು ಆಗ್ತಿದೆ ಎಂದು ಸಹ ಸ್ಪರ್ಧಿ ರಘು ಅವರೊಂದಿಗೆ ತಮ್ಮ ನೋವನ್ನ ಹೇಳಿಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ರಘು, ಅಷ್ಟೊಂದು ಮಸಾಲೆಯುಕ್ತ ಆಹಾರವನ್ನು ಒಮ್ಮೆಲೆ ತಿಂದಿದ್ದರಿಂದ ಜೀರ್ಣಕ್ರಿಯೆಗೆ ಸಮಯ ಬೇಕಾಗುತ್ತದೆ. ಮೊದಲು ಸ್ವಲ್ಪ ತಿಂದು, ಉಳಿದಿದ್ದನ್ನು ಆಮೇಲೆ ತಿಂದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಕಿವಿಮಾತು ಹೇಳಿದರು. ಅಲ್ಲದೆ, ಗಿಲ್ಲಿಗೆ ಜೀರ್ಣಕಾರಕ ಮಾತ್ರೆ ಕಳುಹಿಸಿಕೊಡುವಂತೆ ಬಿಗ್‌ಬಾಸ್‌ಗೆ ಮನವಿ ಮಾಡಿದರು.
ಗಿಲ್ಲಿ ನಟನ ಪರಿಸ್ಥಿತಿಯನ್ನು ನೋಡಿದ ಧ್ರುವಂತ್, ಇದನ್ನು ಸ್ವಲ್ಪ ಹಾಸ್ಯಮಯವಾಗಿ ಮಾತನಾಡುತ್ತಾ, ಆಹಾರ ಎನ್ನುವುದು ದೈವಸ್ವರೂಪ. ಬಿಗ್‌ಬಾಸ್ ಇಷ್ಟು ಪ್ರೀತಿಯಿಂದ ಕಳುಹಿಸಿಕೊಟ್ಟಾಗ, ಅದಕ್ಕೆ ನಮಸ್ಕರಿಸಿ, ಮನೆಯ ಇತರ ಸದಸ್ಯರಿಗೂ ಸ್ವಲ್ಪ ರುಚಿ ನೋಡಲು ನೀಡಿ ಆನಂದಿಸಬೇಕಿತ್ತು. ಆದರೆ, ನೀವು ಸ್ವಿಮ್ಮಿಂಗ್ ಪೂಲ್ ಹತ್ತಿರ ಕುಳಿತು ಒಬ್ಬರೇ ಅತಿಯಾಗಿ ತಿಂದಿದ್ದರಿಂದ ಈಗ ಗೇಟ್ ಓಪನ್ (ಲೂಸ್ ಮೋಷನ್) ಆಗಿದೆ ಎಂದು ಕಾಲೆಳೆದರು. ಧ್ರುವಂತ್ ಅವರ ಈ ಮಾತಿಗೆ ಅಶ್ವಿನಿ ಗೌಡ ಕೂಡ ಧ್ವನಿಗೂಡಿಸಿದ್ದಾರೆ.





