ಪ್ಯಾನ್ ಇಂಡಿಯಾ ಹುಚ್ಚಿಗೆ ಬಿದ್ದಿರೋ ನಮ್ಮ ಕನ್ನಡದ ಕೆಲ ಟೆಕ್ನಿಷಿಯನ್ಸ್ ಕನ್ನಡದ ಮಾನ, ಮರ್ಯಾದೆಯನ್ನ ಮೂರು ಕಾಸಿಗೆ ಹರಾಜು ಹಾಕ್ತಿದ್ದಾರೆ. ಅದಕ್ಕೆ ಪ್ರತ್ಯಕ್ಷ ಸಾಕ್ಷಿ ಮೋಹನ್‌ಲಾಲ್‌ಗೆ ಸಿನಿಮಾ ಮಾಡಿರೋ ನಂದಕಿಶೋರ್. 80 ಕೋಟಿ ಬಜೆಟ್ ಮೂವಿಯ ಓಪನಿಂಗ್ ಡೇ ಕಲೆಕ್ಷನ್ 80 ಲಕ್ಷ ಅಂದ್ರೆ ನೀವು ಶಾಕ್ ಆಗ್ತೀರಾ. ಕನ್ನಡದಲ್ಲಿ ವೃಷಭ ಗಳಿಕೆ ಕೇವಲ 240 ರೂಪಾಯಿ.
ವೃಷಭ.. ಡಿಸೆಂಬರ್ 25ರಂದು ತೆರೆಕಂಡ ಮಲಯಾಳಂನ ಪ್ಯಾನ್ ಇಂಡಿಯಾ ಮೂವಿ. ಇದು ಸೂಪರ್ ಸ್ಟಾರ್ ಮೋಹನ್‌ಲಾಲ್ ಕರಿಯರ್‌ನ ಬಿಗ್ಗೆಸ್ಟ್ ಡಿಸಾಸ್ಟರ್ ಮೂವಿ. ಯಾಕಂದ್ರೆ ಬರೋಬ್ಬರಿ 80 ಕೋಟಿ ಬಿಗ್ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಓಪನಿಂಗ್ ಡೇ ಗಳಿಸಿದ್ದು ಕೇವಲ 80 ಲಕ್ಷ. ಅದಕ್ಕೆ ಪ್ರಮುಖ ಕಾರಣ ಚಿತ್ರದ ಕಥೆ ಹಾಗೂ ಮೇಕಿಂಗ್.
ಪ್ಯಾನ್ ಇಂಡಿಯಾ ಹುಚ್ಚು..ಕನ್ನಡದ ಮರ್ಯಾದೆ 3 ಕಾಸಿಗೆ ಹರಾಜು
ವೃಷಭ ಡಿಸಾಸ್ಟರ್.. ಮೋಹನ್‌ಲಾಲ್ ಕರಿಯರ್‌ಗೆ ಕಪ್ಪು ಚುಕ್ಕೆ
ಅಂದಹಾಗೆ ವೃಷಭ ಸೋಲಿನ ನೈತಿಕ ಹೊಣೆ ಹೊರಬೇಕಿರೋದು ಕನ್ನಡಿಗರಾದ ನಾವು. ಯಾಕಂದ್ರೆ ವೃಷಭ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು ನಮ್ಮ ಕನ್ನಡಿಗ ನಂದಕಿಶೋರ್. ಮೋಹನ್‌ಲಾಲ್ ಅಂತಹ ಸೂಪರ್ ಸ್ಟಾರ್‌ನ ಇಟ್ಕೊಂಡು, ಕೋಟ್ಯಂತರ ರೂಪಾಯಿ ಹಣ ಸುರಿದ ನಿರ್ಮಾಪಕರು ಇದ್ಕೊಂಡು ಇಂತಹ ಡಬ್ಬಾ ಮೂವಿ ಮಾಡಿರೋದು ನಮ್ಮವರೇ. ಹಾಗಾಗಿ ಕಂಪ್ಲೀಟ್ ಹೊಣೆಯನ್ನ ನಂದಕಿಶೋರ್ ಹೊತ್ತಿಕೊಳ್ಳಬೇಕಿದೆ. ನಂದಕಿಶೋರ್ ಸೇರಿದಂತೆ ಒಂದಷ್ಟು ಮಂದಿ ಡೈರೆಕ್ಟರ್‌ಗಳು ಪ್ಯಾನ್ ಇಂಡಿಯಾ ಹುಚ್ಚಿಗೆ ಬಿದ್ದಿದ್ದಾರೆ. ಹಾಗಾಗಿಯೇ ಕಲೆಗೆ ಮೂರು ಕಾಸಿನ ಬೆಲೆ ಇಲ್ಲದಂತೆ ಮಾಡ್ತಿದ್ದಾರೆ.
ಕರ್ನಾಟಕದಲ್ಲಿ ವೃಷಭ ಓಪನಿಂಗ್ ಡೇ ಕಲೆಕ್ಷನ್ ಕೇಳಿದ್ರೆ ಬೆಚ್ಚಿ ಬೆರಗಾಗ್ತೀರಾ. ಹೌದು.. ಕನ್ನಡದಲ್ಲಿ ವೃಷಭ ಕೇವಲ 240 ರೂಪಾಯಿ ಗಳಿಸಿದೆ. ಇದಕ್ಕಿಂತ ಬಹುದೊಡ್ಡ ಅವಮಾನ ಅಥ್ವಾ ಅಪಮಾನ ಮತ್ತೊಂದು ಇರಲು ಸಾಧ್ಯವೇ ಇಲ್ಲ. ತಂದೆ-ಮಗನ ಕುರಿತ ಫ್ಯಾಂಟಸಿ ಆ್ಯಕ್ಷನ್ ಎಂಟರ್‌ಟೈನರ್ ಇದಾಗಿದ್ದು, ಮೋಹನ್‌ಲಾಲ್ ಜೊತೆ ರಾಗಿಣಿ, ಇಂದ್ರಜಿತ್ ಮಗ ಸಮರ್ಜಿತ್, ಕಿಶೋರ್, ಮ್ಯೂಟೆಂಟ್ ರಘು, ಅಯ್ಯಪ್ಪ, ಗರುಡ ರಾಮ್ ಸೇರಿದಂತೆ ಸಾಕಷಷ್ಟು ಮಂದಿ ಕನ್ನಡದ ಕಲಾವಿದರಿದ್ದಾರೆ.
ಈ ಹಿಂದೆ ಲೂಸಿಯಾ ಫೇಮ್ ಪವನ್ ಕುಮಾರ್ ಕೂಡ ಫಹಾದ್ ಫಾಸಿಲ್ ನಂತಹ ವರ್ಸಟೈಲ್ ಆ್ಯಕ್ಟರ್‌ನ ಕನ್ನಡಕ್ಕೆ ಕರೆತಂದು ಧೂಮಂ ಅನ್ನೋ ಸಿನಿಮಾ ಮಾಡಿದ್ರು. ಅದು ಕೂಡ ಬಾಕ್ಸ್ ಆಫೀಸ್‌ನಲ್ಲಿ ಅಟ್ಟರ್ ಫ್ಲಾಪ್ ಆಗಿತ್ತು. ಹೊಂಬಾಳೆ ಫಿಲಂಸ್‌ನಂತಹ ಬಿಗ್ ಬ್ಯಾನರ್‌ನಡಿ ವಿಜಯ್ ಕಿರಗಂದೂರು ಕೋಟ್ಯಂತರ ರೂಪಾಯಿ ಬಂಡವಾಳ ಹಾಕಿದ್ರೂ ಸಹ, ಒಳ್ಳೆಯ ಕಥೆ ಮಾಡದ ಹಿನ್ನೆಲೆ ಸಿನಿಮಾ ನೆಲಕಚ್ಚಿತ್ತು. ಇದೀಗ ಮೋಹನ್‌ಲಾಲ್‌ರ ವೃಷಭ ಸರದಿ.
ನಂದಕಿಶೋರ್ ನಿರ್ದೇಶನ.. 80Cr ಮೂವಿ ಗಳಿಸಿದ್ದು 80ಲಕ್ಷ
ಮೊನ್ನೆ ಪವನ್ ಧೂಮಂ.. ಈಗ ನಂದಕಿಶೋರ್ ವೃಷಭ ಸರದಿ
ಇಂಟರೆಸ್ಟಿಂಗ್ ಅಂದ್ರೆ 2025ರಲ್ಲಿ ಮೋಹನ್‌ಲಾಲ್ ಎರಡೆರಡು ಬಿಗ್ ಬ್ಲಾಕ್‌ಬಸ್ಟರ್ ಹಿಟ್ಸ್ ನೀಡ್ತಾರೆ. ಎಂಪುರಾನ್ ಮೂಲಕ 268 ಕೋಟಿ ಗಳಿಸಿದ್ರೆ, ಥುಡರುಮ್ ಮುಖೇನ 235 ಕೋಟಿ ಬ್ಯುಸಿನೆಸ್ ಮಾಡ್ತಾರೆ. ಅಂತಹ ಬಿಗ್ಗೆಸ್ಟ್ ಸೂಪರ್ ಸ್ಟಾರ್ ಕರಿಯರ್‌ಗೆ ವೃಷಭ ನಿಜಕ್ಕೂ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ. ಇನ್ನೊಮ್ಮೆ ನಮ್ಮ ಕನ್ನಡದ ಡೈರೆಕ್ಟರ್‌ಗಳಿಗೆ ಮೋಹನ್‌ಲಾಲ್ ಡೇಟ್ಸ್ ಕೊಡೋ ಸಾಹಸ ಮಾಡೋಕೆ ಸಾಧ್ಯವೇ..? ನೀವೇ ಊಹಿಸಿ. ಸಿಕ್ಕ ಅವಕಾಶಗಳನ್ನ ಸಮರ್ಪಕವಾಗಿ ಬಳಸಿಕೊಳ್ಳದೆ ಇದ್ರೆ ಇಂತಹ ರಿಸಲ್ಟ್‌ಗಳನ್ನ ನಿರೀಕ್ಷಿಸಬೇಕಾಗುತ್ತೆ.
ಕನ್ನಡಕ್ಕೆ ಕೆಜಿಎಫ್, ಕಾಂತಾರ ಬಿಟ್ರೆ ಪ್ಯಾನ್ ಇಂಡಿಯಾ ಅನ್ನೋ ಕಾನ್ಸೆಪ್ಟ್ ನಿಜಕ್ಕೂ ವರದಾನ ಅಲ್ಲವೇ ಅಲ್ಲ. ಅದೊಂಥರಾ ಶಾಪವಾಗಿದೆ. ಇನ್ನಾದ್ರೂ ಫಿಲ್ಮ್ ಮೇಕರ್ಸ್ ಎಚ್ಚೆತ್ತುಕೊಳ್ಳಬೇಕಿದೆ. ಕಂಟೆಂಟ್ ಈಸ್ ದಿ ಕಿಂಗ್. ಕಥೆ, ಚಿತ್ರಕಥೆ ಗಟ್ಟಿಯಾಗಿರಬೇಕು. ಬರವಣಿಗೆಯನ್ನ ಎಲ್ಲರೂ ಮೆಚ್ಚುವಂತಾಗಬೇಕು. ಆಗಲೇ ಸಿನಿಮಾದ ಸಕ್ಸಸ್. ಜನ ಮೆಚ್ಚುಗೆ ಹಾಗೂ ಬಾಕ್ಸ್ ಆಫೀಸ್ ಸದ್ದು ಮಾಡೋಕೆ ಸಾಧ್ಯ.





