ಡಿಸೆಂಬರ್‌ನಲ್ಲಿ ಒಂಥರಾ ನಮ್ಮ ಸ್ಯಾಂಡಲ್‌ವುಡ್ ಸೂಪರ್ ಸ್ಟಾರ್‌ಗಳಿಗೆ ಲಕ್ಕಿ ಮಂಥ್. ಅದೇ ಕಾರಣದಿಂದ ಎಲ್ರೂ ಡಿಸೆಂಬರ್‌ನಲ್ಲೇ ಸಿನಿಮಾಗಳನ್ನ ರಿಲೀಸ್ ಮಾಡೋಕೆ ಮುಂದಾಗ್ತಾರೆ. ದರ್ಶನ್, ಸುದೀಪ್ ಸಿನಿಮಾಗಳ ಜೊತೆ ಜೊತೆಗೆ ಶಿವಣ್ಣ-ಉಪ್ಪಿ-ರಾಜ್ ಟ್ರಯೋ ಜೋಡಿ ಕೂಡ ಮೋಡಿ ಮಾಡೋಕೆ ಮುಹೂರ್ತ ಫಿಕ್ಸ್ ಮಾಡಿಕೊಂಡಿದೆ. ಇಂಟರೆಸ್ಟಿಂಗ್ ಅಂದ್ರೆ IMDbನಲ್ಲಿ ಆ 45 ಸಿನಿಮಾನೇ ಟ್ರೆಂಡಿಂಗ್ ನಂ.1ನಲ್ಲಿದೆ.
45.. ಡಿಫರೆಂಟ್ ಟೈಟಲ್‌ನಿಂದಲೇ ದೊಡ್ಡ ಭರವಸೆ ಮೂಡಿಸಿರೋ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಸಿನಿಮಾ. ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅಂತಹ ಬಿಗ್ ಸ್ಟಾರ್ಸ್ ಒಟ್ಟಿಗೆ ಒಂದೇ ಸ್ಕ್ರೀನ್ ಮೇಲೆ ಕಾಣಸಿಗಲಿದ್ದು, ಸ್ಯಾಂಡಲ್‌ವುಡ್‌ನ ಬಿಗ್ಗೆಸ್ಟ್ ಮಲ್ಟಿಸ್ಟಾರರ್ ಕೂಡ ಹೌದು.
IMDbನಲ್ಲಿ ಶಿವಣ್ಣ-ಉಪ್ಪಿ-ರಾಜ್ ಟ್ರಯೋ 45 ಟ್ರೆಂಡಿಂಗ್ ನಂ.1
ಡಿಫರೆಂಟ್ ಕಥೆ.. ಮೂವರು ಸ್ಟಾರ್ಸ್.. ವಿಶ್ಯುವಲ್ ಟ್ರೀಟ್ ಫಿಕ್ಸ್
ಕನ್ನಡದ ಜೊತೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ತೆರೆಗೆ ಬರೋಕೆ ಸಜ್ಜಾಗಿರೋ 45 ಸಿನಿಮಾ, ಇದೇ ಡಿಸೆಂಬರ್ 25ಕ್ಕೆ ಡೇಟ್ ಫಿಕ್ಸ್ ಮಾಡಿಕೊಂಡಿದೆ. ಕ್ರಿಸ್‌ಮಸ್ ವಿಶೇಷ ವರ್ಷಾಂತ್ಯಕ್ಕೆ ಬರ್ತಿರೋ ಈ ಚಿತ್ರ, ಕಥೆ, ಮೇಕಿಂಗ್ ಹಾಗೂ ಸ್ಪೆಷಲ್ ಎಫೆಕ್ಟ್‌ಗಳಿಂದ ನೋಡುಗರಿಗೆ ವಿಶ್ಯುವಲ್ ಟ್ರೀಟ್ ನೀಡಲಿದೆ. ರಿವೀಲ್ ಆಗಿರೋದು ಜಸ್ಟ್ ಟೀಸರ್. ಅದ್ರಲ್ಲೇ ಸಿನಿಮಾ ಎಷ್ಟರ ಮಟ್ಟಿಗೆ ಗಮ್ಮತ್ತಿನಿಂದ ಕೂಡಿರಲಿದೆ ಅನ್ನೋದ್ರ ಹಿಂಟ್ ಸಿಕ್ಕಿದೆ.
ಜೈಲರ್ ಸಿನಿಮಾದಿಂದ ಶಿವಣ್ಣ, ಕೂಲಿ ಚಿತ್ರದಿಂದ ಉಪೇಂದ್ರ ಹಾಗೂ ಟರ್ಬೋ ಸಿನಿಮಾದಿಂದ ರಾಜ್ ಬಿ ಶೆಟ್ಟಿ ಪರಭಾಷಿಗರ ದಿಲ್ ದೋಚಿದ್ದಾರೆ. ಅದೀಗ 45 ಪ್ಯಾನ್ ಇಂಡಿಯಾ ರಿಲೀಸ್‌ಗೂ ಪ್ಲಸ್ ಆಗಲಿದ್ದು, ಪರಭಾಷಿಗರು ಕೂಡ 45 ರಿಲೀಸ್‌ಗಾಗಿ ಕಾದು ಕೂತಿದ್ದಾರೆ. ಅಷ್ಟರ ಮಟ್ಟಿಗೆ ಟಾಕ್ ಕ್ರಿಯೇಟ್ ಮಾಡಿದೆ ಈ ಸ್ಯಾಂಡಲ್‌ವುಡ್‌ನ ನಯಾ ಎಕ್ಸ್‌ಪೆರಿಮೆಂಟಲ್ ಮೂವಿ.
ಡಿಸೆಂಬರ್ 25 ಕ್ರಿಸ್‌ಮಸ್‌ಗೆ ಬಾಕ್ಸ್ ಆಫೀಸ್ ದಂಗಲ್ ಗ್ಯಾರಂಟಿ
5 ಭಾಷೆಯಲ್ಲಿ ಸೆನ್ಸೇಷನಲ್ ಸ್ಟಾರ್‌ಗಳ ಧಮಾಕೇದಾರ್ ಮೂವಿ..!
ಪ್ರತಿಷ್ಠಿತ IBDbನಲ್ಲಿ ಟ್ರೆಂಡಿಂಗ್ ನಂಬರ್ ಒನ್ ಲಿಸ್ಟ್‌ನಲ್ಲಿ ರಾರಾಜಿಸ್ತಿರೋ 45 ಸಿನಿಮಾ, ನೋಡುಗರಲ್ಲಿ ದೊಡ್ಡ ನಿರೀಕ್ಷೆ ಮೂಡಿಸಿದೆ. ಒಂದೇ ಟಿಕೆಟ್‌ಗೆ ಮೂರು ಮಂದಿ ಸೂಪರ್ ಸ್ಟಾರ್‌ಗಳ ಪರ್ಫಾಮೆನ್ಸ್‌ನ ಕಣ್ತುಂಬಿಕೊಳ್ಳುವ ಸದಾವಕಾಶ ಅದ್ಭುತವೇ ಸರಿ. ಅದ್ರಲ್ಲೂ ಶಿವಣ್ಣ, ಉಪ್ಪಿ ಲುಕ್ಸ್, ರಾಜ್ ಬಿ ಶೆಟ್ಟಿ ಮನೋಜ್ಞ ಅಭಿನಯ, ಕಸ್ಟಮೈಸ್ಡ್ ಬೈಕ್ ಎಲ್ಲವೂ ಕಣ್ಣಿಗೆ ಹಬ್ಬ ನೀಡಲಿದೆ.
ನಿರ್ಮಾಪಕ ರಮೇಶ್ ರೆಡ್ಡಿ ಈ ಸಿನಿಮಾನ ಬಹಳ ಇಷ್ಟ ಪಟ್ಟು ನಿರ್ಮಿಸಿದ್ದಾರೆ. ದೇಶ, ವಿದೇಶಗಳಲ್ಲೆಲ್ಲಾ ಮ್ಯೂಸಿಕ್ ಹಾಗೂ ಸಿಜಿ ಕೆಲಸಗಳನ್ನ ಮಾಡಿಸ್ತಿದ್ದಾರೆ. ಹಾಗಾಗಿ ಅವ್ರ ಈ ಸಿನಿಮೋತ್ಸಾಹದ ಕೈಗನ್ನಡಿಯಾಗಿ 45 ಚಿತ್ರ ದೊಡ್ಡ ಮಟ್ಟದಲ್ಲಿ ಮೂಡಿಬರಲಿದೆ. ದಾಖಲೆ ಬರೆಯುವಂತಹ ಅಂಶಗಳಿಂದ ಕಿಕ್ ಕೊಡಲಿದೆ ಅನ್ನೋದು ಸದ್ಯದ ಟಾಕ್.





