“ಕಂಗ್ರಾಜುಲೇಷನ್ಸ್ ಬ್ರದರ್” ಚಿತ್ರವು ಎರಡನೇ ವಾರದಲ್ಲೂ ಚಿತ್ರ ಮಂದಿರದಲ್ಲಿ ಮುಂದುವರೆದಿದ್ದು, ಈ ಯಶಸ್ಸಿನ ಖುಷಿಯನ್ನು ಹಂಚಿಕೊಳ್ಳಲು ಚಿತ್ರತಂಡವು ಸಕ್ಸಸ್ ಮೀಟ್ ಆಯೋಜಿಸಿತ್ತು. ಕಲ್ಲೂರ್ ಸಿನಿಮಾಸ್, ಪೆನ್ ಎನ್ ಪೇಪರ್ ಸ್ಟುಡಿಯೋಸ್ ಮತ್ತು ಸ್ಕ್ರೀನ್ ಫಸ್ಟ್ ಪ್ರೊಡಕ್ಷನ್ಸ್ ಬ್ಯಾನರ್‌ಗಳಲ್ಲಿ ನಿರ್ಮಾಣವಾದ ಈ ಚಿತ್ರವನ್ನು ಪ್ರಶಾಂತ್ ಕಲ್ಲೂರ್ ನಿರ್ಮಿಸಿದ್ದಾರೆ. ಪ್ರತಾಪ್ ಗಂಧರ್ವ ನಿರ್ದೇಶಿಸಿದ್ದರೆ, ಹೆಸರಾಂತ ನಿರ್ದೇಶಕ ಹರಿಸಂತೋಷ್ ಕಥೆ ಮತ್ತು ಸಂಭಾಷಣೆ ಬರೆದು ಕ್ರಿಯೇಟಿವ್ ಹೆಡ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಯುವನಟ ರಕ್ಷಿತ್ ನಾಗ್ ನಾಯಕನಾಗಿ ನಟಿಸಿದ್ದಾರೆ. ಸಂಜನ್ ದಾಸ್ ಮತ್ತು ಅನುಷಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.
ನಿರ್ಮಾಪಕ ಪ್ರಶಾಂತ್ ಕಲ್ಲೂರ್ ಮಾತನಾಡಿ, ಸದ್ಯ ಚಿತ್ರನಿರ್ಮಾಣದ ಯೋಜನೆ ಇರಲಿಲ್ಲ. ಆದರೆ ಹರಿಸಂತೋಷ್ ಅವರು ನನ್ನನ್ನು ಬಿಡಲಿಲ್ಲ. ಹೊಸ ತಂಡದೊಂದಿಗೆ ಮಾಡಿದ ಈ ಚಿತ್ರ ಜನಪ್ರಿಯವಾಗಿದೆ. ಹರಿಸಂತೋಷ್ ಕ್ರಿಯೇಟಿವ್ ಹೆಡ್ ಆಗಿ ಉತ್ತಮ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ನನ್ನ ಕುಟುಂಬದೊಂದಿಗೆ ಚಿತ್ರ ನೋಡಿದೆ. ನನ್ನ ಅಪ್ಪ ಬೆನ್ನು ತಟ್ಟಿದ್ರು ಇದು ನಿಜವಾದ ಗೆಲುವು. ಮುಂದೆ ಎರಡು ವರ್ಷಗಳಲ್ಲಿ ನಮ್ಮ ಬ್ಯಾನರ್‌ನಿಂದ ಮೂರು ಚಿತ್ರಗಲು ಬರುವ ಯೋಜನೆ ಇದೆ. ಎಂದು ಹೇಳಿದ್ದಾರೆ.
ನಾಯಕ ರಕ್ಷಿತ್ ನಾಗ್ ಅವರು ಸಂಭ್ರಮದಿಂದ ಹೇಳಿದರು, “ಈ ಚಿತ್ರದ ನಂತರ ನನಗೆ ಮತ್ತೆರಡು ಚಿತ್ರಗಳ ಅವಕಾಶ ಬಂದಿದೆ. ಇದು ನಿರ್ಮಾಪಕರು ಮತ್ತು ಹರಿಸಂತೋಷ್ ಅವರ ಕಾರಣದಿಂದ ಸಾಧ್ಯವಾಗಿದೆ. ಇನ್ನೂ ನಾಯಕಿಯರಾದ ಸಂಜನಾ ದಾಸ್, ಅನುಷಾ ಹಾಗೂ ಸಹನಟರು ಸುದರ್ಶನ್, ಚೇತನ್ ದುರ್ಗ ಸೇರಿದಂತೆ ಇಡೀ ತಂಡವು ಯಶಸ್ಸಿನ ಸಂತೋಷವನ್ನು ಹಂಚಿಕೊಂಡರು.





