ಕೋವಿಡ್-19 ಸಾಂಕ್ರಾಮಿಕದ ನಂತರ ಭಾರತದಲ್ಲಿ ಮತ್ತೊಂದು ಮಾರಕ ರೋಗ ಕಾಲಿಟ್ಟಿದೆ. ಅದುವೇ ‘ಸ್ಕ್ರಬ್ ಟೈಫಸ್’ (Scrub Typhus). ಇದು ಸಣ್ಣ ಕೆಂಪು ಬಣ್ಣದ ಹುಳುಗಳು (ಚಿಗ್ಗರ್ ಮೈಟ್ಸ್) ಕಡಿತದಿಂದ ಹರಡುವ ಬ್ಯಾಕ್ಟೀರಿಯಾ ಸೋಂಕು. ಈ ಹುಳುಗಳು ಗಿಡ-ಗಂಟಿಗಳು, ಭತ್ತದ ಗದ್ದೆಗಳು, ಕಸ ಸಂಗ್ರಹ ಸ್ಥಳಗಳು, ಮಕ್ಕಳ ಆಟದ ಮೈದಾನಗಳು ಮತ್ತು ಅರಣ್ಯದ ಅಂಚಿನ ಪ್ರದೇಶಗಳಲ್ಲಿ ಹೇರಳವಾಗಿ ಕಾಣಸಿಗುತ್ತವೆ. ಹುಳು ಕಡಿದ 6 ರಿಂದ 21 ದಿನಗಳಲ್ಲಿ ರೋಗ ಲಕ್ಷಣಗಳು ತೀವ್ರಗೊಳ್ಳುತ್ತವೆ. ಚಳಿಗಾಲದಲ್ಲಿ, ವಿಶೇಷವಾಗಿ ಆಗಸ್ಟ್‌ನಿಂದ ಫೆಬ್ರವರಿ ತಿಂಗಳವರೆಗೆ ಈ ರೋಗ ಹೆಚ್ಚು ವ್ಯಾಪಿಸುತ್ತದೆ.
ಪ್ರಸ್ಥುತ ಆಂಧ್ರಪ್ರದೇಶದಲ್ಲಿ ಸ್ಕ್ರಬ್ ಟೈಫಸ್ ಹೆಚ್ಚಾಗುತ್ತಿದ್ದು, ನವೆಂಬರ್ ಅಂತ್ಯದ ವರೆಗೆ ರಾಜ್ಯದ 26 ಜಿಲ್ಲೆಗಳಲ್ಲಿ ಸಾವಿರಾರು ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ ಚಿತ್ತೂರು, ಕಾಕಿನಾಡ, ವಿಶಾಖಪಟ್ಟಣಂ ಮತ್ತು ವಿಜಯನಗರಂನಂತಹ ಜಿಲ್ಲೆಗಳು ಹೆಚ್ಚು ೀ ರೋಗಕ್ಕೆ ಹೆಚ್ಚು ಪ್ರಭಾವಕ್ಕೀಡಾಗಿದೆ.
ಈಗಾಗಲೇ ವಿಜಯನಗರಂನಲ್ಲಿ ಒಬ್ಬ ಮಹಿಳೆ ಸಾವನ್ನಪ್ಪಿದ್ದಾರೆ. ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, 500ಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟವೆ ಎಂದು ತಿಳಿಸಿದೆ. ವರದಿಯಾಗಿವೆ. ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಕೃಷಿಕರು, ಕಾರ್ಮಿಕರು ಮತ್ತು ಅರಣ್ಯ ಅಂಚಿನ ನಿವಾಸಿಗಳು ಹೆಚ್ಚು ಅಪಾಯದಲ್ಲಿದ್ದಾರೆ. ಮಕ್ಕಳು ಆಟವಾಡುವ ಮೈದಾನಗಳಲ್ಲಿ ಹುಳುಗಳು ಇರುವುದರಿಂದ ಮಕ್ಕಳೂ ಸುರಕ್ಷಿತರಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಸ್ಕ್ರಬ್ ಟೈಫಸ್ ಲಕ್ಷಣಗಳು ಆರಂಭದಲ್ಲಿ ಸಾಮಾನ್ಯ ಜ್ವರದಂತೆ ಕಾಣುತ್ತವೆ. ಮೊದಲು ಹೆಚ್ಚಿನ ಜ್ವರ, ತಲೆನೋವು, ವಾಂತಿ, ಸುಸ್ತು, ಕೆಮ್ಮು, ಶೀತ-ನೆಗಡಿ ಕಾಣಿಸಿಕೊಳ್ಳುತ್ತವೆ. ಕಡಿತದ ಸ್ಥಳದಲ್ಲಿ ಕಪ್ಪು ಗಾಯ ಉಂಟಾಗುತ್ತದೆ. ಆರಂಭಿಕ ದಿನಗಳಲ್ಲಿ ಯಾವುದೇ ಚಿಕಿತ್ಸೆ ನೀಡಿದರೂ ಗುಣವಾಗದು. ಕೆಲವು ದಿನಗಳಲ್ಲಿ ರಕ್ತ ಕಣಗಳ ಕುಸಿತ, ಲಿವರ್-ಮೂತ್ರಪಿಂಡದ ಸಮಸ್ಯೆಗಳು ಉಂಟಾಗುತ್ತವೆ. ಸೂಕ್ತ ಚಿಕಿತ್ಸೆ ಇಲ್ಲದಿದ್ದರೆ ರೋಗಿ ಕೋಮಾಕ್ಕೆ ಜಾರಿ ಸಾವನ್ನಪ್ಪುವ ಸಾಧ್ಯತೆ ಇದೆ. ಸಮಯಕ್ಕೆ ಸರಿಯಾಗಿ ಗುರುತಿಸಿ ಆ್ಯಂಟಿಬಯಾಟಿಕ್ ನೀಡಿದರೆ ಸಂಪೂರ್ಣ ಗುಣಮುಖವಾಗುತ್ತದೆ. ಮರಣ ಪ್ರಮಾಣ ಶೇ.2ರಷ್ಟು ಕಡಿಮೆ.
ಆಂಧ್ರಪ್ರದೇಶ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ಸೋಂಕು ಲಕ್ಷಣಗಳಿರುವವರ ಸಮಗ್ರ ತಪಾಸಣೆಗೆ ಆದೇಶಿಸಲಾಗಿದೆ. IgM ELISA ಅಥವಾ PCR ಪರೀಕ್ಷೆಗಳ ಮೂಲಕ ರೋಗ ದೃಢೀಕರಿಸಲಾಗುತ್ತದೆ. ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಚಳಿಗಾಲ, ತುಂತುರು ಮಳೆಯಿಂದಾಗಿ ನೆರೆಯ ಆಂಧ್ರದಿಂದ ವೈರಸ್ ಹರಡುವ ಭೀತಿ ಇದೆ. ಕರ್ನಾಟಕದಲ್ಲಿ ಈ ಹಿಂದೆಯೇ ಸ್ಕ್ರಬ್ ಟೈಫಸ್ ಪ್ರಕರಣಗಳು ವರದಿಯಾಗಿವೆ. ಆದ್ದರಿಂದ ರಾಜ್ಯ ಆರೋಗ್ಯ ಇಲಾಖೆ ಈ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ
ತಡೆಗಟ್ಟುವ ಕ್ರಮಗಳು:
ಗದ್ದೆಗಳಲ್ಲಿ ಕೆಲಸ ಮಾಡುವಾಗ ಪೂರ್ಣ ಬಟ್ಟೆ ಧರಿಸಿ, ಕಾಲುಗಳನ್ನು ಮುಚ್ಚಿ. ಹುಳು ನಿವಾರಕ ಕ್ರೀಮ್ ಬಳಸಿ. ಮನೆ ಸುತ್ತಮುತ್ತ ಕಸ-ಕಡ್ಡಿಗಳಿದ್ದರೆ ಸ್ವಚ್ಛಗೊಳಿಸಿ. ಜ್ವರ ಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಸ್ಕ್ರಬ್ ಟೈಫಸ್ ಕೋವಿಡ್‌ಗಿಂತ ಹೆಚ್ಚು ಮಾರಕವಲ್ಲ, ಆದರೆ ಅರಿವಿನ ಕೊರತೆಯಿಂದ ಸಮಸ್ಯೆ ಉಂಟಾಗುತ್ತದೆ. ಆರೋಗ್ಯ ಇಲಾಖೆ ಜಾಗೃತಿ ಮೂಡಿಸಬೇಕು.





