ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಅಶ್ವಿನಿ ಗೌಡ ಈಗ ಸಂಪೂರ್ಣ ಒತ್ತಡದಲ್ಲಿವೆ. ಪ್ರತಿ ವೀಕೆಂಡ್ ಎಪಿಸೋಡ್ನಲ್ಲಿ ಕಿಚ್ಚ ಸುದೀಪ್ ಅವರಿಂದಲೇ ತರಾಟೆಗೆ ತೆಗೆದುಕೊಳ್ಳುತ್ತಿರುವುದು ಅವರನ್ನು ಮಾನಸಿಕವಾಗಿ ಕುಗ್ಗಿಸಿದೆ. ಕಳೆದ ವಾರವೂ ಸುದೀಪ್ ಅವರು ಅಶ್ವಿನಿಯವರ ಆಟದ ಶೈಲಿ, ಮಾತುಗಳು ಮತ್ತು ನಡವಳಿಕೆಯನ್ನು ತೀವ್ರವಾಗಿ ಟೀಕಿಸಿದ್ದರು. ಇದರಿಂದ ಅಶ್ವಿನಿ ಗೌಡಗೆ ಏನೇ ಮಾಡಿದರೂ ಕ್ಲಾಸ್ ತಪ್ಪುವುದಿಲ್ಲ ಎಂಬ ಭಯ ಶುರುವಾಗಿದೆ.
ಭಾನುವಾರದ ಎಪಿಸೋಡ್ನಲ್ಲಿ ಅಶ್ವಿನಿ ಗೌಡ ಮತ್ತು ಜಾನ್ವಿ ಅವರ ನಡುವಿನ ಆತ್ಮೀಯ ಮಾತುಕತೆಯಲ್ಲಿ ಈ ಆಂತರಿಕ ಸಂಘರ್ಷ ಎಲ್ಲರ ಮುಂದೆ ಬಂದಿತು. ಈ ಬಗ್ಗೆ ಮಾತನಾಡುತ್ತಾ ಅಶ್ವಿನಿ, ನನಗೆ ಈ ಬಿಗ್ ಬಾಸ್ ಆಟನೇ ಗೊತ್ತಿಲ್ಲ. ನಾವು ಏನು ಮಾಡ್ತಾ ಇದ್ದೀವಿ ಅಂತನೇ ಗೊತ್ತಾಗ್ತಾ ಇಲ್ಲ. ಊಟ ಬಿಟ್ಟಿದ್ದು ಎಮೋಷನಲ್ ಬ್ಲ್ಯಾಕ್ಮೇಲ್ ತರ ಅನಿಸ್ತಾ ಇದೆ. ಆ ಕ್ಷಣಕ್ಕೆ ಗೊತ್ತಾಗಲಿಲ್ಲ. ಗೊತ್ತಿಲ್ಲದೆ ಎಷ್ಟೆಲ್ಲ ಕೆಟ್ಟ ಮಾತುಗಳನ್ನ ಆಡಿದ್ದೇವೆ… ಉದ್ದೇಶಪೂರ್ವಕವಾಗಿ ಹೇಳಿಲ್ಲ. ಪ್ರತಿ ವಾರ ನಮಗೆ ಕ್ಲಾಸ್ ಇದೆ. ಹೊರಗೆ ನಾನು ತುಂಬಾ ನೆಗೆಟಿವ್ ಆಗಿ ಕಾಣಿಸ್ತಾ ಇದ್ದೇನೆ ಅನಿಸ್ತಾ ಇದೆ. ಈ ಆಟ ನನಗೆ ಸೂಟ್ ಆಗ್ತಾ ಇಲ್ಲ ಅನಿಸ್ತಾ ಇದೆ. ತುಂಬಾ ನೋವಾಗ್ತಾ ಇದೆ. ಹಿಂಸೆ ಆಗ್ತಾ ಇದೆ. ಈ ಆಟವನ್ನ ಪೂರ್ತಿ ಮಾಡಲು ಆಗುತ್ತಾ ಗೊತ್ತಿಲ್ಲ.”
ಅಶ್ವಿನಿ ಮುಂದುವರೆದು, “ನಾನು ವಿಲನ್ ಆಗೋಕೆ ಬಂದಿಲ್ಲ. ಆಟ ಆಡುವ ಭರದಲ್ಲಿ, ಗೆಲ್ಲುವ ಭರದಲ್ಲಿ ತಪ್ಪಾಗಿ ನಡೆದುಕೊಂಡಿದ್ದೇನೆ. ನಮ್ಮ ನಡವಳಿಕೆ ಹೊರಗೆ ಹೀಗೆಲ್ಲ ಪ್ರೊಜೆಕ್ಟ್ ಆಗ್ತಾ ಇದೆ. ಭಾವನೆಗಳನ್ನ ಕಂಟ್ರೋಲ್ ಮಾಡಿಕೊಳ್ಳಲು ಆಗ್ತಾ ಇಲ್ಲ” ಎಂದು ಕಣ್ಣೀರಿನೊಂದಿಗೆ ಹೇಳಿದರು.
ಈ ಸಂದರ್ಭದಲ್ಲಿ ಜಾನ್ವಿ ಅಶ್ವಿನಿಗೆ ಧೈರ್ಯ ತುಂಬಿದರು. “ತುಂಬಾ ಎಮೋಷನಲ್ ಆಗಿ ಆಡಬಾರದು. ಪ್ರ್ಯಾಕ್ಟಿಕಲ್ ಆಗಿ ಯೋಚನೆ ಮಾಡಬೇಕು. ಈ ಆಟದಲ್ಲಿ ಎಲ್ಲರೂ ಒಂದಲ್ಲ ಒಂದು ಸಲ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಇದನ್ನು ಸ್ವೀಕರಿಸಿ ಮುಂದೆ ಸಾಗಬೇಕು ಎಂದು ಸಲಹೆ ನೀಡಿದರು.
ಅಶ್ವಿನಿ ಗೌಡರ ಈ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲೂ ಭಾರೀ ಚರ್ಚೆಗೆ ಕಾರಣವಾಗಿವೆ. ಹೊರಗೆ ಅವರ ಇಮೇಜ್ ತೀವ್ರ ನೆಗೆಟಿವ್ ಆಗಿ ರೂಪುಗೊಂಡಿದೆ. ಈಗಾಗಲೇ ಮಾನಸಿಕವಾಗಿ ಕುಗ್ಗಿರುವ ಅಶ್ವಿನಿ ತಮ್ಮ ಆಟವನ್ನು ಬದಲಾಯಿಸಿಕೊಂಡು ಪಾಸಿಟಿವ್ ಇಮೇಜ್ ಮರಳಿ ತರುತ್ತಾರಾ? ಅಥವಾ ಮುಂದಿನ ಎಲಿಮಿನೇಷನ್ನಲ್ಲಿ ಹೊರಹೋಗುತ್ತಾರಾ ? ಎಂದು ಕಾದು ನೋಡಬೇಕು.





