Petrol-Diesel Price Today: ಫುಲ್ ಟ್ಯಾಂಕ್ ಮಾಡೋ ಯೋಜನೆ ಇದ್ರೆ, ಮೊದಲು ಇಂದಿನ ಪೆಟ್ರೋಲ್-ಡೀಸೆಲ್ ದರಗಳನ್ನ ಪರಿಶೀಲಿಸಿಕೊಳ್ಳೋದು ಒಳ್ಳೇದು. ಭಾರತದೆಲ್ಲೆಡೆ ಸಾಮಾನ್ಯವಾಗಿ ಇಂಧನ ದರಗಳು ಪ್ರತಿದಿನ ಬದಲಾಗುತ್ತವೆ. ಆದರೆ ಇಂದಿನಂತೆ ದೇಶದ ಬಹುತೇಕ ರಾಜ್ಯಗಳಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ, ದರಗಳಲ್ಲಿ ಅತಿ ಕಡಿಮೆ ಪೈಸೆಗಳ ಮಟ್ಟಿನ ಬದಲಾವಣೆ ಹೊರತುಪಡಿಸಿದರೆ ಯಾವುದೇ ದೊಡ್ಡ ವ್ಯತ್ಯಾಸ ಕಂಡುಬಂದಿಲ್ಲ.
ಪೆಟ್ರೋಲ್ ಮತ್ತು ಡೀಸೆಲ್‌ಗೆ ಜಗತ್ತಿನಾದ್ಯಂತ ಅತಿ ಹೆಚ್ಚು ಬೇಡಿಕೆ ಇದೆ. “ದ್ರವರೂಪದ ಬಂಗಾರ” ಎಂದು ಕರೆಯುವ ಈ ಇಂಧನಗಳ ಬೆಲೆ ಅಂತರರಾಷ್ಟ್ರೀಯ ಮಾರುಕಟ್ಟೆಯ ಬೇಡಿಕೆ, ಪೂರೈಕೆ, ಜಾಗತಿಕ ಘಟನೆಗಳು, ಅಮೆರಿಕನ್ ಡಾಲರ್ ವಿನಿಮಯದ ಬದಲಾವಣೆಗಳು, ಕಚ್ಚಾ ತೈಲದ ಉತ್ಪಾದನೆ, ಸಂಗ್ರಹಣೆಯ ಮಾಹಿತಿ ಹೀಗೆ ಹಲವು ಅಂಶಗಳಿಂದ ಅವಲಂಬಿತವಾಗಿರುತ್ತದೆ.
ಮಹಾನಗರಗಳ ಇಂಧನ ದರಗಳು
ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ದರ ರೂ. 102.92, ಡೀಸೆಲ್ ದರ ರೂ. 90.99 ಆಗಿದೆ.
ಮುಂಬೈ, ಚೆನ್ನೈ, ಕೊಲ್ಕತ್ತಾ ಸೇರಿದಂತೆ ಇತರ ಪ್ರಮುಖ ನಗರಗಳ ದರಗಳು ಹೀಗಿವೆ.
-
ಚೆನ್ನೈ: ಪೆಟ್ರೋಲ್ ₹100.90 | ಡೀಸೆಲ್ ₹92.49
-
ಮುಂಬೈ: ಪೆಟ್ರೋಲ್ ₹103.50 | ಡೀಸೆಲ್ ₹90.03
-
ಕೊಲ್ಕತ್ತಾ: ಪೆಟ್ರೋಲ್ ₹105.41 | ಡೀಸೆಲ್ ₹92.02
-
ದೆಹಲಿ: ಪೆಟ್ರೋಲ್ ₹94.77 | ಡೀಸೆಲ್ ₹87.67
ಕರ್ನಾಟಕದ ಜಿಲ್ಲೆಗಳ ಪೆಟ್ರೋಲ್ ದರ
ಇಂದು ಹಲವು ಜಿಲ್ಲೆಗಳಲ್ಲಿ ಪೆಟ್ರೋಲ್ ದರದಲ್ಲಿ ಸ್ವಲ್ಪ ಮಟ್ಟಿನ ಏರಿಳಿತಗಳು ಕಂಡುಬಂದಿವೆ. ಬಾಗಲಕೋಟೆಯಲ್ಲಿ 42 ಪೈಸೆ ಏರಿಕೆ ಕಾಣಿಸಿಕೊಂಡರೆ, ಬೆಳಗಾವಿಯಲ್ಲಿ 16 ಪೈಸೆ ಏರಿಕೆ, ಬೀದರ್‌ನಲ್ಲಿ 56 ಪೈಸೆ ಏರಿಕೆಯಾಗಿದೆ. ದಕ್ಷಿಣ ಕನ್ನಡ, ಕೊಲಾರ, ಮೈಸೂರು, ಶಿವಮೊಗ್ಗ ಸೇರಿದಂತೆ ಹಲವೆಡೆ ಪೆಟ್ರೋಲ್ ದರದಲ್ಲಿ ಇಳಿಕೆ ಕಂಡುಬಂದಿದೆ.
-
ಬಾಗಲಕೋಟೆ: ₹103.68
-
ಬೆಂಗಳೂರು: ₹102.92
ADVERTISEMENTADVERTISEMENT -
ಬೆಳಗಾವಿ: ₹103.57
-
ಚಾಮರಾಜನಗರ: ₹102.99
-
ಮೈಸೂರು: ₹102.46
-
ಉಡುಪಿ: ₹102.90
-
ಯಾದಗಿರಿ: ₹103.80
ಪ್ರತಿ ಜಿಲ್ಲೆಯಲ್ಲಿ ಕೆಲವು ಪೈಸೆಗಳ ಮಟ್ಟಿನ ಬದಲಾವಣೆ ಹೊರತುಪಡಿಸಿದರೆ ದರಗಳು ಸ್ಥಿರವಾಗಿವೆ.
ಜಿಲ್ಲೆಗಳ ಡೀಸೆಲ್ ದರಗಳು
ಡೀಸೆಲ್ ದರದಲ್ಲಿ ಸಹ ಸುಮಾರು ಸ್ಥಿರತೆ ಮುಂದುವರಿದಿದ್ದು ಕೆಲವು ಸ್ಥಳಗಳಲ್ಲಿ ಮಾತ್ರ ಅಲ್ಪ ಬದಲಾವಣೆ ಕಂಡುಬಂದಿದೆ. ದಕ್ಷಿಣ ಕನ್ನಡದಲ್ಲಿ ಡೀಸೆಲ್ ದರ ₹90.18 ಗೆ ಇಳಿಕೆಯಾದರೆ, ಬಳ್ಳಾರಿ, ಬೀದರ್, ದಾವಣಗೆರೆ ಜಿಲ್ಲೆಗಳಲ್ಲಿ ಡೀಸೆಲ್ ದರ ರೂ. 92.22 ನಲ್ಲಿ ಸ್ಥಿರವಾಗಿದೆ.
ಕೆಲವು ಜಿಲ್ಲೆಗಳ ದರಗಳು:
-
ಬೆಂಗಳೂರು: ₹90.99
-
ಬಳ್ಳಾರಿ: ₹92.22
-
ಕೋಲಾರ: ₹90.93
-
ಮಂಡ್ಯ: ₹90.84
-
ಮೈಸೂರು: ₹90.57
-
ಉತ್ತರ ಕನ್ನಡ: ₹91.93
-
ವಿಜಯನಗರ: ₹92.23
ಕರ್ನಾಟಕದಲ್ಲಿ ಇಂದಿನ ಇಂಧನ ದರಗಳು ದೊಡ್ಡ ಮಟ್ಟದಲ್ಲಿ ಬದಲಾವಣೆಯಾಗಿಲ್ಲ. ಆದರೆ ಪ್ರತಿದಿನ ಬೆಳಗ್ಗೆ ದರಗಳು ನವೀಕರಿಸಲಾಗುವ ಕಾರಣ, ವಾಹನ ಸವಾರರು, ವಿಶೇಷವಾಗಿ ದೀರ್ಘ ಪ್ರಯಾಣಕ್ಕೆ ಹೊರಟವರು, ದರಗಳನ್ನು ಪರಿಶೀಲಿಸಿ ನಂತರವೇ ಫುಲ್ ಟ್ಯಾಂಕ್ ಮಾಡಿಕೊಳ್ಳುವುದು ಉತ್ತಮ.





