ಜೈಲಿನ ಕೈದಿಗಳಿಗೆ ರಾಜಾತಿಥ್ಯ ವಿಡಿಯೋ ವೈರಲ್ ಪ್ರಕರಣ ಸಂಬಂಧಿಸಿದಂತೆ ನಟ ಧನ್ವೀರ್ ಎರಡನೇ ಬಾರಿಗೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಜೈಲಿನೊಳಗೆ ನಡೆದ ಅಕ್ರಮಗಳ ವಿಡಿಯೋ ರಿಲೀಸ್ ಮಾಡಿದ್ದು ಯಾರು ಎನ್ನುವ ಬಗ್ಗೆ ದರ್ಶನ್ ಆಪ್ತ ನಟ ಧನ್ವೀರ್‌ಗೆ ಪೊಲೀಸರು ಪ್ರಶ್ನೆಗಳ ಸುರಿಮಳೆಗೈದು ಡ್ರೀಲ್ ಮಾಡಿದ್ದಾರೆ.
ಪರಪ್ಪನ ಅಗ್ರಹಾರ ಜೈಲು ಕೈದಿಗಳ ಪಾಲಿನ ಫೈವ್ ಸ್ಟಾರ್ ಹೋಟೆಲ್ ಆಗಿ ರಾಜಾತಿಥ್ಯ ಪಡೆದಿರುವ ಅಕ್ರಮ ಅನಾಚಾರಗಳ ವಿಡಿಯೋಗಳು ಒಂದೊಂದಾಗಿಯೇ ವೈರಲ್ ಆಗಿದ್ದವು. ವಿಡಿಯೋ ವೈರಲ್ ಆಗಿರುವ ವಿಚಾರವಾಗಿ ದರ್ಶನ್ ಅಪ್ತ ನಟ ಧನ್ವೀರ್ ಇಂದು ಎರಡನೇ ಬಾರಿಗೆ ಪರಪ್ಪನ ಅಗ್ರಹಾರ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ವಕೀಲರ ಜೊತೆ ಆಗಮಿಸಿ ಒಂದೇ ಗಂಟೆಗಳ ಕಾಲ ವಿಚಾರಣೆ ಎದುರಿಸಿದ ಧನ್ವೀರ್..!
ಕಳೆದ 10ನೇ ತಾರೀಖಿನಂದು ಸಿಸಿಬಿ ಪೊಲೀಸರು ಮತ್ತು ಪರಪ್ಪನ ಅಗ್ರಹಾರ ಪೊಲೀಸರು ಧನ್ವೀರ್‌ನಾ ವಶಕ್ಕೆ ಪಡೆದು ವಿಚಾರಣೆ ನಡೆಸಿ ಮೊಬೈಲ್ ಸೀಜ್ ಪಡೆದಿದ್ದಾರೆ. ಧನ್ವೀರ್ ಬಳಸುತ್ತಿದ್ದ ಐಪೋನ್ ಪ್ರಾಥಮಿಕವಾಗಿ ಸೈಬರ್ ಕ್ರೈಂಗೆ ಕಳುಹಿಸಿ ರಿಪೋರ್ಟ್ ತರಿಸಿಕೊಂಡಿದ್ದರು. ಇದರ ಆದಾರದ ಮೇಲೆ ಇಂದು ಪರಪ್ಪನ ಅಗ್ರಹಾರ ಪೊಲೀಸರು ಒಂದು ಗಂಟೆಗಳ ಕಾಲ ಧನ್ವೀರ್‌ಗೆ ಡ್ರೀಲ್ ನಡೆಸಿದ್ದಾರೆ. ಜೈಲಿನಲ್ಲಿ ಕೈದಿಗಳು ಸಾಂಗ್ ಹಾಕಿಕೊಂಡು ಡ್ಯಾನ್ಸ್ ಮಾಡಿ ಕುಣಿದು ಕುಪ್ಪಳಿಸಿರುವ ವಿಡಿಯೋ ವೈರಲ್ ಸಂಬಂಧ ಧನ್ವೀರ್ ವಿಚಾರಣೆ ನಡೆಸಿದ್ದಾರೆ. ವಿಡಿಯೋ ರಿಟ್ರೀವ್ ಎಫ್ಎಸ್ಎಲ್ ರಿಪೋರ್ಟ್ ಗಾಗಿ ಪೊಲೀಸರು ಕಾಯುತ್ತಿದ್ದು, ವಿಡಿಯೋ ವೈರಲ್ ಹಿಂದೆ ದುರುದ್ದೇಶ ಏನಾದ್ರು ಇದ್ಯಾ ಎನ್ನುವ ಬಗ್ಗೆ ವಿಚಾರಣೆ ನಡೆಯುತ್ತಿದೆ.
ವಿಡಿಯೋ ವೈರಲ್ ಸಂಬಂಧ ದರ್ಶನ್ ಆಪ್ತ ಧನ್ವೀರ್ ವಿಚಾರಣೆ..!
ಇನ್ನೂ 13 ನೇ ತಾರೀಖಿನಂದು ಧನ್ವೀರ್‌ಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಲಾಗಿತ್ತು. ಆದ್ರೆ ವಿಚಾರಣೆಗೆ ಹಾಜರಾಗದೆ ವಕೀಲರ ಮೂಲಕ ಕಾಲಾವಕಾಶವನ್ನು ಕೇಳಿದ್ರು. ಇದಾದ ಬಳಿಕ ಕಳೆದ 17ನೇ ತಾರೀಖಿನ ಸೋಮವಾರ ಪೊಲೀಸ್ ಠಾಣೆ ಬಳಿ ಬಂದ್ರು ಕೂಡ ಧನ್ವೀರ್ ವಿಚಾರಣೆಗೆ ಹಾಜರಾಗಿರಲಿಲ್ಲ. ಊಟ ಮಾಡಿ ಬರುವಂತೆ ತಿಳಿಸಿದ್ರೆ ಮೊಬೈಲ್ ಸ್ವಿಚ್ ಆಪ್ ಮಾಡಿಕೊಂಡು ವಿಚಾರಣೆಗೆ ಗೈರಾಗಿದ್ರು. ಇದಾದ ಬಳಿಕ ಇಂದು ಎರಡನೇ ಬಾರಿಗೆ ನಟ ಧನ್ವೀರ್ ವಕೀಲರ ಜೊತೆಗೆ ಆಗಮಿಸಿ ವಿಚಾರಣೆ ಎದುರಿಸಿದ್ದಾರೆ. ಮುಂದಿನ ವಾರ ದಿನಾಂಕ ನಿಗದಿ ಮಾಡಿ ನೋಟೀಸ್ ನೀಡಿ ಪುನಂ ಧನ್ವೀರ್‌ನಾ ವಿಚಾರಣೆಗೆ ಪರಪ್ಪನ ಅಗ್ರಹಾರ ಪೊಲೀಸರು ಕರೆಸಿಕೊಳ್ಳುವ ಸಾಧ್ಯತೆ ಇದೇ ಎನ್ನಲಾಗಿದೆ. ಇನ್ನೂ ವಿಚಾರಣೆ ಮುಗಿಸಿ ಹೊರಡುವಾಗ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ವಕೀಲರ ಜೊತೆಗೆ ಧನ್ವೀರ್ ಕಾರಿನಲ್ಲಿ ಹೊರಟಿದ್ದಾರೆ.
ಕೈದಿಗಳಿಗೆ ರಾಜಾತಿಥ್ಯ ವಿಚಾರವಾಗಿ ಜೈಲಾಧಿಕಾರಿಗಳ ಅಮನಾತಾಗಿದೆ. ವಿಡಿಯೋ ವೈರಲ್ ಬಗ್ಗೆ ದೂರು ನೀಡಲಾಗಿದ್ದು, ಧನ್ವೀರ್ ಸೇರಿ ಹಲವರ ವಿಚಾರಣೆ ನಡೆಸಲಾಗುತ್ತಿದೆ. ಏನಾದ್ರು ನಟ ಧನ್ವೀರ್ ವಿಡಿಯೋಗಳನ್ನು ವೈರಲ್ ಮಾಡಿದ್ದಾರೆ ಎಂದು ತನಿಖೆಯಲ್ಲಿ ಸಾಬೀತಾದ್ರೆ ಸಂಕಷ್ಟ ಫಿಕ್ಸ್ ಎನ್ನಲಾಗ್ತಿದ್ದು, ತನಿಖೆ ಬಳಿಕ ವಿಡಿಯೋ ವೈರಲ್ ಬಗ್ಗೆ ಸತ್ಯಸತ್ಯತೆ ತಿಳಿದುಬರಲಿದೆ.





