ಕೇರಳದ ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಭಾರೀ ಜನದಟ್ಟಣೆ ಇದ್ದು, ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದ 58 ವರ್ಷದ ಮಹಿಳೆ ಒಬ್ಬರು ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಮಾಹಿತಿಯ ಪ್ರಕಾರ, ಮೃತಪಟ್ಟವರು ಕೋಝಿಕ್ಕೋಡ್ ಜಿಲ್ಲೆಯ ಕೊಯಿಲಾಂಡಿ ನಿವಾಸಿ ಎಂದು ಗುರುತಿಸಲಾಗಿದೆ.
ಕೋಝಿಕ್ಕೋಡ್ ಜಿಲ್ಲೆಯ ಕೊಯಿಲಾಂಡಿ ಪ್ರದೇಶದ ನಿವಾಸಿಯಾಗಿದ್ದ ಈ ಮಹಿಳೆ ಶನಿವಾರ ರಾತ್ರಿಯಿಂದ್ದ ಭಕ್ತರ ಜೊತೆಗೂಡಿ ಸಾಲಿನಲ್ಲಿ ನಿಂತಿದ್ದರು. ಸನ್ನಿಧಾನದತ್ತ ಹೋಗುವ ಮಾರ್ಗದಲ್ಲಿ ಭಾರೀ ಜನದಟ್ಟಣೆ ಉಂಟಾಗಿದ್ದು, ಈ ವೇಳೆ ಮಹಿಳೆಗೆ ಏಕಾಏಕಿ ಉಸಿರಾಟದ ತೊಂದರೆ ಕಾಣಿಸಿಕೊಂಡು ತಕ್ಷಣ ಕುಸಿದು ಬಿದ್ದಿದ್ದಾರೆ.
ತಿರುವಾಂಕೂರು ದೇವಸ್ವಂ ಬೋರ್ಡ್ (TDB) ಅಧ್ಯಕ್ಷ ಕೆ. ಜಯಕುಮಾರ್ ಈ ಘಟನೆ ಬಗ್ಗೆ ಮಾತನಾಡಿ, “ಅವರಿಗೆ ಹೃದಯಾಘಾತ ಅಥವಾ ಉಸಿರುಗಟ್ಟುದರಿಂದ ಮೃತಪಟ್ಟಿದ್ದಾರೆ. ಮೃತದೇಹವನ್ನು TDB ವೆಚ್ಚದಲ್ಲೇ ಆಂಬ್ಯುಲೆನ್ಸ್‌ನಲ್ಲಿ ಅವರ ಗ್ರಾಮಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದರು.
ಶಬರಿಮಲೆಗೆ ತೆರಳುತ್ತಿದ್ದ ಬಸ್ ಪಲ್ಟಿ: ಪ್ರಾಣಾಪಾಯದಿಂದ ಪಾರಾದ 33 ಮಾಲಧಾರಿಗಳು
ಮಂಡ್ಯ, ನವೆಂಬರ್ 18: ಶಬರಿಮಲೆ ಸ್ವಾಮಿ ಅಯ್ಯಪ್ಪನ ದರ್ಶನಕ್ಕೆ ತೆರಳುತ್ತಿದ್ದ ಮಂಡ್ಯ ಜಿಲ್ಲೆಯ ಭಕ್ತರ ಬಸ್ ಕೇರಳದಲ್ಲಿ ಚಾಲಕನ ನಿಯಂತ್ರ ತಪ್ಪಿ ಪಲ್ಟಿ ಹೊಡೆದಿದೆ. ಆದರೆ ಬಸ್‌ನಲ್ಲಿದ್ದ 33 ಮಂದಿ ಮಾಲಾಧಾರಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಈ ದುರಂತ ಘಟನೆ ಕೇರಳದ ಕೊಟ್ಟಾಯಂ ಜಿಲ್ಲೆಯ ಎರುಮೇಲಿ (ಏರಿಮಲೈ) ಸಮೀಪದ ತಟ್ಟಿಪಿಟ್ಟಂ ಎಂಬಲ್ಲಿ ನಡೆದಿದೆ. ಕೇರಳದತ್ತ ಪ್ರಯಾಣ ಮುಂದುವರೆದ ಬಸ್ ಬೆಳಗ್ಗೆ ಏರಿಮಲೈ–ತಟ್ಟಿಪಿಟ್ಟಮ್ ಮಾರ್ಗದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಗೆ ಪಲ್ಟಿ ಹೊಡೆದಿದೆ. ಅಪಘಾತಕ್ಕೀಡಾದ ಬಸ್ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಯಾಲದಹಳ್ಳಿ ಕೊಪ್ಪಲು ಗ್ರಾಮದವರಾಗಿದ್ದಾರೆ. ಈ ಗ್ರಾಮದ ಅಯ್ಯಪ್ಪ ಭಕ್ತರು ಶಬರಿಮಲೆ ಮಾಲಾಧಾರಿಗಳಾಗಿ 41 ದಿನಗಳ ವ್ರತವನ್ನು ಪಾಲಿಸಿ, ಕಪ್ಪು ವಸ್ತ್ರ ಧರಿಸಿ, ಮಾಲೆ ಹಾಕಿಕೊಂಡು ಸ್ವಾಮಿಯ ದರ್ಶನಕ್ಕೆ ತೆರಳುತ್ತಿದ್ದರು.
ಅಪಘಾತ ಸ್ಥಳಕ್ಕೆ ಪೊಲೀಸರು ಧಾವಿಸಿದ್ದು, ಸ್ಥಳೀಯರು ಮತ್ತು ಇತರ ಯಾತ್ರಿಗಳ ಸಹಾಯದಿಂದ ಎಲ್ಲ ಭಕ್ತರನ್ನು ಬಸ್‌ನಿಂದ ಹೊರತೆಗೆದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಕೆಲವರಿಗೆ ಎರುಮೇಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.





