ಬಿಗ್ ಬಾಸ್ ಕನ್ನಡ ಸೀಸನ್ 12ರ ಎಂಟನೇ ವಾರದ ನಾಮಿನೇಷನ್ ಪ್ರಕ್ರಿಯೆ ಭಾರೀ ಡ್ರಾಮಾ, ಭಾವನಾತ್ಮಕ ಏರಿಳಿತಗಳು ಮತ್ತು ರಿವೆಂಜ್ ಗೇಮ್ನಿಂದ ತುಂಬಿ ತುಳುಕುತ್ತಿದೆ. ಈ ಬಾರಿ ಒಟ್ಟು 10 ಸ್ಪರ್ಧಿಗಳು ಅಪಾಯದಲ್ಲಿ ಸಿಲುಕಿದ್ದು, ಕ್ಯಾಪ್ಟನ್ ರಘು ಅವರು ತಮ್ಮ ವಿಶೇಷ ಅಧಿಕಾರ ಬಳಸಿ ರಕ್ಷಿತಾ ಶೆಟ್ಟಿಯನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ.
ಸಾಮಾನ್ಯ ನಾಮಿನೇಷನ್ನಲ್ಲಿ ಮನೆಯ ಸದಸ್ಯರ ಆಯ್ಕೆಯಿಂದ ಅಭಿಷೇಕ್, ಮಾಳು ನಿಪನಾಳ, ರಿಷಾ, ಧ್ರುವಂತ್, ರಾಶಿಕಾ ಶೆಟ್ಟಿ, ಸೂರಜ್ ಸಿಂಗ್ ಹಾಗೂ ಸ್ಪಂದನಾ ಒಟ್ಟು ಏಳು ಜನರು ಅಪಾಯಕ್ಕೆ ಸಿಲುಕಿದ್ದರು. ಆದರೆ ಇದಕ್ಕೆ ಮತ್ತಷ್ಟು ತಿರುವು ತಂದಿದೆ. ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರು ಡ್ರೆಸಿಂಗ್ ರೂಮ್ನಲ್ಲಿ ಪಿಸುದನಿಯಲ್ಲಿ ಮಾತನಾಡಿದ್ದಕ್ಕೆ ಬಿಗ್ ಬಾಸ್ ಎಚ್ಚರಿಕೆಯ ನೀಡಿದ್ರು ನೇರವಾಗಿ ನಾಮಿನೇಟ್ ಆಗಿದ್ದಾರೆ.
ಆದರೆ ಕ್ಯಾಪ್ಟನ್ ರಘು ಅವರ ನಿರ್ಧಾರ ಬಿಗ್ ಬಾಸ್ ಮನೆಯಲ್ಲಿ ಸಂಚಲನ ಮೂಡಿಸಿದೆ. ಬಿಗ್ ಬಾಸ್ ಘೋಷಿಸಿದಂತೆ ಕ್ಯಾಪ್ಟನ್ಗೆ ಒಬ್ಬರನ್ನು ನೇರವಾಗಿ ನಾಮಿನೇಟ್ ಮಾಡುವ ಅಧಿಕಾರ ಇದೆ. ಆ ಅವಕಾಶವನ್ನು ರಘು ತಮ್ಮ “ವೈಯಕ್ತಿಕ ರಿವೆಂಜ್”ಗೆ ಬಳಸಿಕೊಂಡರು. ಅವರು ಯಾವುದೇ ಅವಕಾಶ ಬಿಟ್ಟುಕೊಡದೇ ರಕ್ಷಿತಾ ಶೆಟ್ಟಿಯ ಹೆಸರನ್ನೇ ಘೋಷಿಸಿದರು.
“ನಾನು ಆಕೆಯನ್ನು ಚಿಕ್ಕ ಹುಡುಗಿ, ತಂಗಿಯ ರೀತಿ ನೋಡುತ್ತಿದ್ದೆ. ಆದರೆ ಕಳೆದ ವಾರ ಆಕೆ ಮಾಡಿದ ನಾಮಿನೇಷನ್ ನನಗೆ ತುಂಬಾ ನೋವು ತಂದಿತ್ತು. ಆ ನೋವು ಇನ್ನೂ ಮನಸ್ಸಿನಲ್ಲಿದೆ. ಹಾಗಾಗಿ ಈ ಬಾರಿ ರಕ್ಷಿತಾಳನ್ನೇ ನಾಮಿನೇಟ್ ಮಾಡ್ತಿದ್ದೇನೆ” ಎಂದು ರಘು ತಮ್ಮ ಭಾವನೆಗಳನ್ನು ತೆರೆದಿಟ್ಟರು.
ಹೌದು, ಇದಕ್ಕೆ ಕಾರಣ ಕಳೆದ ವಾರದ ಘಟನೆ. ರಕ್ಷಿತಾ ಶೆಟ್ಟಿ ಅವರು ನಾಮಿನೇಷನ್ ನಿಯಮಗಳನ್ನು ಸಂಪೂರ್ಣ ಅರ್ಥೈಸಿಕೊಳ್ಳದೇ ರಘು ಅವರ ಹೆಸರನ್ನು ಆಯ್ದುಕೊಂಡಿದ್ದರು. ಆಗ ರಘು ಅವರಿಗೆ ತೀವ್ರ ನೋವಾಗಿತ್ತು. ಮನೆಯಲ್ಲೇ ಗಿಲ್ಲಿ ನಟ ರಘು “ಈಗ ರಕ್ಷಿತಾಗೆ ಅವಳೇ ಮೇಲೆ ಮಾಡಿದ ಕರ್ಮ ತಿರುಗಿ ಬಂತು” ಎಂದು ಕಾಮೆಂಟ್ ಮಾಡಿ ಗದರಿಸಿದ್ದರು.
ಈಗ ರಕ್ಷಿತಾ ಶೆಟ್ಟಿ ತಮ್ಮ ತಪ್ಪನ್ನು ಅರಿತು, “ನನಗೆ ಗೇಮ್ ಸರಿಯಾಗಿ ಅರ್ಥವಾಗಿಲ್ಲವೆಂದು ತಿಳಿದ ನಂತರ ಬೇಡವೆಂದು ಹೇಳಿದ್ದೆ, ಆದರೂ ಆಗ್ಲಿಲ್ಲ” ಎಂದು ಕ್ಷಮೆಯಾಚಿಸಿದ್ದರು. ಆದರೆ ರಘು ಅವರ ಮನಸ್ಸು ಈ ಬಾರಿ ಕರಗಲಿಲ್ಲ. ಕ್ಯಾಪ್ಟನ್ ಸಿಂಹಾಸನದಲ್ಲಿ ಕುಳಿತವರು ತಮ್ಮ ಅಧಿಕಾರವನ್ನು ಪೂರ್ತಿ ರಿವೆಂಜ್ಗೆ ಬಳಸಿಕೊಂಡರು.





