ಬಿಗ್ ಬಾಸ್ ಕನ್ನಡ ಸೀಸನ್ 12ರ ಮನೆಯಲ್ಲಿ ಗಲಾಟೆ, ಆರೋಪ–ಪ್ರತಾರೋಪದ ಸನ್ನಿವೇಶಗಳಿಂದ ವಾತಾವರಣ ಗದ್ದಲಗೊಂಡಿದೆ. ವಿಶೇಷವಾಗಿ ಅಶ್ವಿನಿ ಗೌಡ ಮತ್ತು ಗಿಲ್ಲಿ ನಡುವಿನ ವೈಷಮ್ಯ ದಿನೇ ದಿನೇ ಹೆಚ್ಚುತ್ತಿದ್ದು, ಈ ಬಾರಿ ಗಿಲ್ಲಿ ಕೊಟ್ಟ ಆರೋಪ ಮತ್ತು ಅದಕ್ಕೆ ಬಿಗ್ ಬಾಸ್ ನೀಡಿದ ಕಠಿಣ ಶಿಕ್ಷೆ ಎಲ್ಲರ ಗಮನ ಸೆಳೆದಿದೆ.
ಈ ಟಾಸ್ಕ್‌ನಲ್ಲಿ ಎಲ್ಲಾ ಸ್ಪರ್ಧಿಗಳಿಗೆ ಬಿಗ್ ಬಾಸ್ ಒಂದೇ ಪ್ರಶ್ನೆ ಕೇಳಿದ್ದಾರೆ. “ಯಾರು ಪದೇ ಪದೇ ಮನೆಯ ಮೂಲ ನಿಯಮಗಳನ್ನು ಉಲ್ಲಂಘಿಸುತ್ತಾರೆ?” ಎಂದು ಕೇಳಿದ್ದು, ಬಹುತೇಕ ಸ್ಪರ್ಧಿಗಳು ಅಶ್ವಿನಿ ಗೌಡ ಅವರ ಹೆಸರನ್ನೇ ಹೇಳಿದ್ದಾರೆ. ಆದರೆ ಗಿಲ್ಲಿ ನೀಡಿದ ಕಾರಣವೇ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.
“ಅಶ್ವಿನಿ ಅವರಿಗೆ ನಾಮಿನೇಶನ್ ಮೇಲೂ ಸೀರಿಯಸ್‌ನೆಸ್ ಇಲ್ಲ, ರೂಲ್ಸ್ ಮೇಲೂ ಸೀರಿಯಸ್‌ನೆಸ್ ಇಲ್ಲ. ಇದಕ್ಕೆ ಬಿಗ್ ಬಾಸ್ ಕಠಿಣ ಶಿಕ್ಷೆ ಕೊಡಬೇಕು” ಎಂದು ಗಿಲ್ಲಿ ನೇರವಾಗಿ ಹೇಳಿಬಿಟ್ಟರು. ಈ ಮಾತುಗಳು ಮನೆಯಲ್ಲಿ ದೊಡ್ಡ ಸದ್ದು ಮಾಡಿದವು. ಈ ಮಾತುಗಳು ಬಿಗ್ ಬಾಸ್‌ಗೆ ತಕ್ಷಣವೇ ಅಶ್ವಿನಿ ಗೌಡ ಅವರಿಗೆ ವಿಶೇಷ ಶಿಕ್ಷೆ ವಿಧಿಸಲಾಯಿತು. ಮನೆಯ ಎಲ್ಲ ಸದಸ್ಯರ ಮುಂದೆ ಬಸ್ಕಿ ಹೊಡೆದು, “ನಾನು ಇನ್ನು ಮುಂದೆ ಯಾರ ಮುಂದೆಯೂ ನಿಯಮ ಉಲ್ಲಂಘಿಸುವುದಿಲ್ಲ” ಎಂದು ಪ್ರತಿಜ್ಞೆ ಮಾಡಬೇಕಿತ್ತು. ಆದರೆ ಅಶ್ವಿನಿ ನಿಯಮ ಪಾಲಿಸಿ ಬಸ್ಕಿ ಹೊಡೆದು ಪ್ರತಿಜ್ಞೆ ಮಾಡಿದರು.
ಅಶ್ವಿನಿ ಶಿಕ್ಷೆಯನ್ನು ನೆರವೇರಿಸಲು ಗಿಲ್ಲಿಯ ಬಳಿಗೆ ಬಂದಾಗ ಗಿಲ್ಲಿ ‘ಕಾಲ ಮೇಲೆ ಕಾಲು ಹಾಕಿ’ ಕೂತಿರುವುದನ್ನು ಕಂಡು ಅಶ್ವಿನಿಗೆ ತೀವ್ರ ಕೋಪ ತರಿಸಿದೆ. ಇದಕ್ಕೆ ಅಶ್ವಿನಿ ಆಕ್ರೋಶದಿಂದ “ತೀರಾ ಓವರ್ ಆಗಿ ಆಡಬೇಡ. ನಿನ್ನ ಧಿಮಾಕು ನಿನ್ನ ಹತ್ತಿರ ಇಟ್ಟುಕೋ. ನಿನ್ನ ವ್ಯಕ್ತಿತ್ವ ಎಲ್ಲರಿಗೂ ಗೊತ್ತಾಗುತ್ತೆ, ನನ್ನದಲ್ಲ,” ಎಂದು ಅಶ್ವಿನಿ ಗಿಲ್ಲಿಗೆ ಗಟ್ಟಿಯಾಗಿ ಆವಾಜ್ ಹಾಕಿದರು.
ಅಶ್ವಿನಿ ಗೌಡ ಮತ್ತು ಗಿಲ್ಲಿ ನಡುವಿನ ಜಗಳ ಮೊದಲಿನಿಂದಲೂ ಇದೆ. ಅಶ್ವಿನಿ ಪದೇ ಪದೇ ಹೇಳುವ ಮಾತೊಂದೇ. “ಗಿಲ್ಲಿ ನನ್ನನ್ನು ಟಾರ್ಗೆಟ್ ಮಾಡುತ್ತಾರೆ.” ಆದರೆ ಈ ಬಾರಿ ಮನೆಯ ಸದಸ್ಯರೇ ಅಶ್ವಿನಿ ಅವರನ್ನು ರೂಲ್ ಬ್ರೇಕರ್ ಎಂದು ಹೇಳಿದ್ದಾರೆ.
ಅಶ್ವಿನಿ ಗೌಡ ಈಗಾಗಲೇ ಹಲವು ಬಾರಿ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪವೂ ಇದೆ. ಮೊದಲನೇಯದು ಉಸ್ತುವಾರಿ ಸಮಯದಲ್ಲಿ ತಮ್ಮದೇ ಆದ ರೂಲ್ಸ್ ಹಾಕಿಕೊಂಡು ಆಟ ಆಡಿದ್ದರು. ಎರಡನೇಯದಾಗಿ ಬಾತ್‌ರೂಮ್‌ಗೆ ಪದೇ ಪದೇ ಹೋಗಿ ಟಾಸ್ಕ್‌ಗಳನ್ನು ತಪ್ಪಿಸಿದ್ದರು. ಮೂರನೇಯದಾಗಿ ಜೈಲಿನಿಂದ ಅನುಮತಿ ಇಲ್ಲದೆ ಹೊರಬಂದಿದ್ದರು. ನಾಲ್ಕನೇಯದಾಗಿ ತರಕಾರಿ ಕಟ್ ಮಾಡದೆ, ಕೆಲಸದಿಂದ ತಪ್ಪಿಸಿಕೊಂಡಿದ್ದರು. ಈ ಎಲ್ಲ ಉಲ್ಲಂಘನೆಗಳಿಗಾಗಿ ಕಿಚ್ಚ ಸುದೀಪ್ ಅವರು ಹಲವು ಬಾರಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಶ್ವಿನಿ ಕ್ಯಾಮೆರಾ ಮುಂದೆ ಕಣ್ಣೀರು ಹಾಕುತ್ತಾ ಕ್ಷಮೆ ಕೇಳಿದ್ದರು.





