ಸಸ್ಪೆನ್ಸ್ ಕ್ರೈಂ ಥ್ರಿಲ್ಲರ್ ಜಾನರ್ ಸಿನಿಮಾಗಳಿಗೆ ಬಹುದೊಡ್ಡ ಪ್ರೇಕ್ಷಕ ವರ್ಗವಿದೆ. ಸದ್ಯ ದಿ ಟಾಸ್ಕ್ ಅನ್ನೋ ಹೊಸ ಪ್ರತಿಭೆಗಳ ಸಿನಿಮಾ ಬರ್ತಿದ್ದು, ಟ್ರೈಲರ್‌ನ ರೋರಿಂಗ್ ಸ್ಟಾರ್ ಶ್ರೀಮುರಳಿ ಲಾಂಚ್ ಮಾಡಿರೋದು ಇಂಟರೆಸ್ಟಿಂಗ್. ಅದು ಹೇಗಿದೆ ಅನ್ನೋದ್ರ ಜೊತೆ ಸ್ಯಾಂಡಲ್‌ವುಡ್ ಬಘೀರನ ವೇದಘೋಷ ಕೂಡ ತೋರಿಸ್ತೀವಿ, ನೋಡ್ಕೊಂಡ್ ಬನ್ನಿ.
- ಹೊಸ ಪ್ರತಿಭೆಗಳ ಬಿಗ್ ‘ಟಾಸ್ಕ್’ಗೆ ಶ್ರೀಮುರಳಿ ಸಾಥ್..!!
- ದುನಿಯಾ ವಿಜಿ ಗರಡಿ ಜಯಸೂರ್ಯ ಹೀರೋ ಇನ್ನಿಂಗ್ಸ್
ರಾಘು ಶಿವಮೊಗ್ಗ ನಿರ್ದೇಶನ ಮಾಡಿರುವ 3ನೇ ಸಿನಿಮಾ ‘ದಿ ಟಾಸ್ಕ್’ ಈಗ ಬಿಡುಗಡೆಯ ಹಂತದಲ್ಲಿದೆ. ಈ ಹಿಂದೆ ಚಿತ್ರದ ಟೀಸರ್ ಅನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದ್ರು, ಇದೀಗ ಟಾಸ್ಕ್ ಚಿತ್ರದಲ್ಲಿ ಅಭಿನಯಿಸಿರುವ ಜಯಸೂರ್ಯ ಹಾಗೂ ಸಾಗರ್ ಗೆ ಸಾಥ್ ನೀಡಲು ಶ್ರೀಮುರಳಿ ಮುಂದಾಗಿದ್ದಾರೆ. ಎಸ್, ಟಾಸ್ಕ್ ಚಿತ್ರದ ಟ್ರೈಲರ್ ಅನ್ನು ರೋರಿಂಗ್ ಸ್ಟಾರ್ ಶ್ರೀಮುರಳಿ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ. 2ನಿಮಿಷ 45ಸೆಕೆಂಡ್ ಇರುವ ಟಾಸ್ಕ್ ಟ್ರೈಲರ್ ರಫ್ ಆಂಡ್ ಟಫ್ ಆಗಿ ಮೂಡಿ ಬಂದಿದೆ. ಮಾಸ್.. ಆಕ್ಷನ್.. ಪಂಚಿಂಗ್ ಡೈಲಾಗ್ಸ್ ಎಲ್ಲವೂ ಔಟ್ ಸ್ಟ್ಯಾಂಡಿಂಗ್ ಆಗಿದೆ.
ಚೂರಿಕಟ್ಟೆ ಖ್ಯಾತಿಯ ರಾಘು ಶಿವಮೊಗ್ಗ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಭೀಮ ಸಿನಿಮಾ ಖ್ಯಾತಿಯ ಜಯ ಸೂರ್ಯ ಆರ್ ಅಜಾದ್ , ಪೆಂಟಗನ್ ಸಿನಿಮಾ ಖ್ಯಾತಿಯ ಸಾಗರ್ ರಾಮ್ ಹಾಗೂ ಬಾಲ ನಟಿ ಬೇಬಿ ಶ್ರೀ ಲಕ್ಷ್ಮಿ ಅಭಿನಯಿಸಿದ್ದಾರೆ. ರಾಘು ಶಿವಮೊಗ್ಗ ಅವರು ನಿರ್ದೇಶನದ ಜವಾಬ್ದಾರಿಯ ಜೊತೆಗೆ ಒಂದು ಮುಖ್ಯ ಪಾತ್ರವನ್ನು ಸಹ ನಿರ್ವಹಿಸಿದ್ದಾರೆ. ಉಳಿದಂತೆ ಅಚ್ಯುತ್ ಕುಮಾರ್, ಶ್ರೀಲಕ್ಷ್ಮೀ, ಗೋಪಾಲಕೃಷ್ಣ ದೇಶಪಾಂಡೆ, ಅರವಿಂದ್ ಕುಪ್ಳಿಕರ್, ಹರಿಣಿ ಶ್ರೀಕಾಂತ್, ಸಂಪತ್ ಮೈತ್ರಿಯಾ, ಬಾಲಾಜಿ ಮನೋಹರ್, ಬಿ.ಎಂ. ಗಿರಿರಾಜ್ ತಾರಾಬಳಗದಲ್ಲಿದ್ದಾರೆ.
ಲೋಕಪೂಜ್ಯ ಪಿಕ್ಚರ್ ಹೌಸ್ ಸಂಸ್ಥೆಯಡಿ ನಿರ್ಮಾಪಕ ವಿಜಯ್ ಕುಮಾರ್ ಹಾಗೂ ರಾಮಣ್ಣ ಅವರು ಚಿತ್ರ ನಿರ್ಮಾಣ ಮಾಡಿದ್ದಾರೆ. ಸದ್ಯ ಬಿಡುಗಡೆ ಆಗಿರುವ ಟೀಸರ್, ಸಾಂಗ್, ಟ್ರೈಲರ್ ಗೆ ಉತ್ತಮ ರೆಸ್ಪಾನ್ಸ್ ಸಿಗ್ತಿದೆ. ಕೇವಲ ಮನರಂಜನೆ ಅಲ್ಲದೇ ಒಂದು ಮೆಸೇಜ್ ಇರುವ ಸಿನಿಮಾ ದಿ ಟಾಸ್ಕ್ ಇದೇ ನವೆಂಬರ್ 21ರಂದು ರಾಜ್ಯಾದ್ಯಂತ ಬಿಡುಗಡೆ ಆಗ್ತಿದೆ.
ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್





