ನವದೆಹಲಿ, 30 ಅಕ್ಟೋಬರ್ 2025: ದಬಾಂಗ್ ದೆಹಲಿ ಕೆಸಿ ತಂಡವು ಪ್ರೊ ಕಬಡ್ಡಿ ಲೀಗ್ ಸೀಸನ್ 12 ರ ಫೈನಲ್‌ಗೆ ಲಗ್ಗೆ ಇಟ್ಟಿದ್ದು ಪ್ರಬಲ ತಂಡಗಳಲ್ಲಿ ಒಂದಾಗಿ ಹೊರಹೊಮ್ಮಿದೆ.
ರಾಜಧಾನಿ ಆಧಾರಿತ ಈ ಫ್ರಾಂಚೈಸಿ ಸೀಸನ್ 12 ಅನ್ನು ಸ್ಫೋಟಕ ರೀತಿಯಲ್ಲಿ ಆರಂಭಿಸಿ ಮೊದಲ ಆರು ಪಂದ್ಯಗಳನ್ನು ಗೆದ್ದು ನೇರವಾಗಿ ಕಿರೀಟ ಪೈಪೋಟಿದಾರರಾಗಿ ಹೊರಹೊಮ್ಮಿತು. ಪಟ್ನಾ ಪೈರೇಟ್ಸ್ ವಿರುದ್ಧ (33-30) ಸಣ್ಣ ಅಂತರದ ಸೋಲು ಕಂಡರೂ, ಅದು ತಂಡದ ಹೋರಾಟದ ಮನೋಭಾವವನ್ನು ಮತ್ತಷ್ಟು ಬಲಪಡಿಸಿತು. ತಕ್ಷಣವೇ ಐದು ಸತತ ಜಯಗಳನ್ನು ದಾಖಲಿಸಿ, ಪಿಕೆಎಲ್ ಸೀಸನ್ 12 ಪ್ಲೇಆಫ್‌ಗೆ ಅರ್ಹತೆ ಪಡೆದ ಮೊದಲ ತಂಡವಾಯಿತು. ಆರ್ಹತೆ ಪಡೆದ ಬಳಿಕ, ದಬಾಂಗ್ ದೆಹಲಿ ಕೆ.ಸಿ ತಮ್ಮ ಅಂತಿಮ ಹಂತದ ಪಂದ್ಯಗಳಲ್ಲಿ ಬದಲಿ ಆಟಗಾರರಿಗೆ ಅವಕಾಶ ನೀಡಿತು.
ಕ್ವಾಲಿಫೈಯರ್ 1ರಲ್ಲಿ ಪುಣೆರಿ ಪಲ್ಟಾನ್ ವಿರುದ್ಧದ ಪೈಪೋಟಿ ಸೀಸನ್‌ನ ಅತ್ಯಂತ ರೋಚಕ ಪಂದ್ಯಗಳಲ್ಲಿ ಒಂದಾಯಿತು. ಪಂದ್ಯ ರೋಚಕ ಸಮನಾಗಿ ಅಂತ್ಯಗೊಂಡಿದ್ದು, ಈ ಸೀಸನ್‌ನಲ್ಲಿ ಎರಡೂ ತಂಡಗಳ ನಡುವೆ ಮೂರನೇ ಡ್ರಾ ಆಗಿತ್ತು. ಟೈಬ್ರೇಕರ್‌ನಲ್ಲಿ ದೆಹಲಿ ತಂಡ ತಮ್ಮ ಸಮತೋಲನ ಕಾಪಾಡಿ 6-4 ಅಂತರದಲ್ಲಿ ಗೆದ್ದು ಫೈನಲ್‌ಗೆ ಮೊದಲ ಸ್ಥಾನ ಪಡೆದಿತು.
ಗೆಲುವಿನ ಬಳಿಕ ಮಾತನಾಡಿದ ದಬಾಂಗ್ ದೆಹಲಿ ಕೆ.ಸಿಯ ಮುಖ್ಯ ಕೋಚ್ ಜೋಗಿಂದರ್ ನರವಾಲ್ ಈ ಸೀಸನ್‌ನಲ್ಲಿ ನಮ್ಮ ತಂಡ ನಿರಂತರ ಹೋರಾಟ ನಡೆಸಿದ್ದು, ಪ್ರತಿಯೊಬ್ಬ ಆಟಗಾರ ಅಗತ್ಯ ಸಮಯದಲ್ಲಿ ಹೊಣೆ ಹೊತ್ತಿದ್ದಾರೆ. ಪುಣೆರಿ ಪಲ್ಟಾನ್ ನಮ್ಮ ಪೈಪೋಟಿದಾರರಾಗಿದ್ದು, ಫೈನಲ್‌ನಲ್ಲಿ ನಾವು ಶೇಕಡಾ 100 ಪ್ರಯತ್ನ ನೀಡುತ್ತೇವೆ.
ಟೀಮ್‌ನ ಪ್ರದರ್ಶನದ ಬಗ್ಗೆ ಮಾತನಾಡಿದ ದಬಾಂಗ್ ದೆಹಲಿ ಕೆ.ಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಿಸ್ಟರ್ ಪ್ರಶಾಂತ್ ರಮೇಶ್ ಮಿಶ್ರ ‘ಅಜಿಂಕ್ಯ ಪವಾರ್ ಮತ್ತು ನೀರಜ ನರವಾಲ್ ಅವರ ಸಹಕಾರ ಮಹತ್ವದ ಪಾತ್ರವಹಿಸಿದೆ. ಫಝಲ್ ಅತ್ರಾಚಲಿ ಮತ್ತು ಸುರಜೀತ್ ಸಿಂಗ್ ಅವರಂತಹ ಹಿರಿಯ ಆಟಗಾರರ ಅನುಭವ ರಕ್ಷಣಾ ವಿಭಾಗದಲ್ಲಿ ತಂಡಕ್ಕೆ ಬಲ ತುಂಬಿದೆ ಹಾಗು ಕೋಚ್ ಜೋಗಿಂದರ್ ನರವಾಲ್ ತಮ್ಮ ಅನುಭವ ಮತ್ತು ತಂತ್ರಜ್ಞಾನದಿಂದ ತಂಡವನ್ನು ಅತ್ಯುತ್ತಮವಾಗಿ ಮುನ್ನಡೆಸಿದ್ದಾರೆ ಎಂದರು.
ದಬಾಂಗ್ ದೆಹಲಿ ಕೆ.ಸಿ ತಮ್ಮ ಅನುಭವ, ಆತ್ಮವಿಶ್ವಾಸ ಮತ್ತು ಬಲಿಷ್ಠ ತಂಡದ ಸಹಾಯದಿಂದ ಪಿಕೆಎಲ್ ಕಿರೀಟವನ್ನು ಮರುಸ್ವೀಕರಿಸಲು ಸಜ್ಜಾಗಿದೆ.
 
			
 
					




 
                             
                             
                             
                             
                            