ಭಾರತೀಯ ಚಿತ್ರರಂಗದ ಈ ವರ್ಷದ ನಂ.1 ಸಿನಿಮಾ ಯಾವುದು ಅಂದ್ರೆ ಅದು ಒನ್ ಅಂಡ್ ಓನ್ಲಿ ಕಾಂತಾರ ಚಾಪ್ಟರ್-1. ಯೆಸ್.. ಈ ವರ್ಷ ಅತಿಹೆಚ್ಚು ಗಳಿಸಿ ಅಗ್ರಸ್ಥಾನಕ್ಕೇರಿದ್ದ ವಿಕ್ಕಿ ಕೌಶಲ್ ನಟನೆಯ ಛಾವಾ ಬಾಕ್ಸ್ ಆಫೀಸ್ ರೆಕಾರ್ಡ್‌ನ ಇಪ್ಪತ್ತೇ ದಿನದಲ್ಲಿ ಉಡೀಸ್ ಮಾಡಿದ್ದಾರೆ ರಿಷಬ್ ಶೆಟ್ರು. ಜಗ ಮೆಚ್ಚಿದ ಹಾಗೂ ಬಾಲಿವುಡ್‌ನೇ ಹಿಂದಿಕ್ಕಿದ ಕಾಂತಾರ ಕಹಳೆಯ ಹೆಮ್ಮೆಯ ಸ್ಟೋರಿ ನಿಮ್ಮ ಮುಂದೆ.
ವಿಜಯದಶಮಿಗೆ ಶುರುವಾದ ಕಾಂತಾರ ಅಬ್ಬರ, ಆಡಂಬರ.. ದೀಪಾವಳಿ ಬಂದ್ರೂ ನಿಂತಿಲ್ಲ. ಬೆಳಕಿನ ಹಬ್ಬದಲ್ಲಿ ಮತ್ತಷ್ಟು, ಮಗದಷ್ಟು ಪ್ರಕಾಶಮಾನವಾಗಿ ಪ್ರಜ್ವಲಿಸುತ್ತಲೇ ಇದೆ ರಿಷಬ್ ಶೆಟ್ಟಿಯ ಕಾಂತಾರ ಚಾಪ್ಟರ್-1. ಹೌದು.. ಒಂದೊಳ್ಳೆ ಸಿನಿಮಾದ ನಿಜವಾದ ಸಕ್ಸಸ್ ಅಂದ್ರೆ ಇದು. ಇಡೀ ವಿಶ್ವವೇ ಕಾಂತಾರ ಬಗ್ಗೆ ಮಾತಾಡ್ತಿದೆ, ಕೊಂಡಾಡ್ತಿದೆ. ಮೂಕವಿಸ್ಮಿತವಾಗಿ ಕಣ್ತುಂಬಿಕೊಳ್ತಿದೆ. ಅಂಥದ್ದೊಂದು ವಿಶೇಷ ಶಕ್ತಿ ಈ ಚಿತ್ರದಲ್ಲಿ ಅಡಗಿದೆ.
ಶಿಷ್ಯೆ ನ್ಯಾಷನಲ್ ಕ್ರಶ್ ರಶ್ಮಿಕಾ ಚಿತ್ರಕ್ಕೆ ಗುನ್ನ ಇಟ್ಟ ಗುರು ರಿಷಬ್ ಶೆಟ್ಟಿ
ಈ ವರ್ಷ ಭಾರತೀಯ ಚಿತ್ರರಂಗದ ಹೊಸ ಮೈಲಿಗಲ್ಲು ಕಾಂತಾರ-1
ಮತ್ತೊಮ್ಮೆ ನಮ್ಮ ಕರಾವಳಿಯ ಮಣ್ಣಿನ ಸೊಗಡು, ಸೊಬಗು ಸಪ್ತ ಸಾಗರದಾಚೆ ಸದ್ದು ಮಾಡ್ತಿದೆ. ಕಥೆಯಲ್ಲಿರೋ ಧಮ್, ಪಾತ್ರಗಳಲ್ಲಿ ರಿಧಮ್, ಮೇಕಿಂಗ್ ಮಸಲತ್ತು ಎಲ್ಲವೂ ಚಿತ್ರದ ಸಕ್ಸಸ್‌ಗೆ ಪೂರಕವಾಗಿದೆ. ಹೊಂಬಾಳೆ ಫಿಲಂಸ್ ಇಂಥದ್ದೊಂದು ಮಹತ್ವದ ಸಿನಿಮಾನ ಜಾಗತಿಕ ಮಟ್ಟಕ್ಕೆ ದೊಡ್ಡ ಮಟ್ಟದಲ್ಲಿ ತಲುಪೋಕೆ ಟೊಂಕ ಕಟ್ಟಿ ನಿಂತ ಪರಿ ಅನನ್ಯ.
ಪರಭಾಷಿಗರು ಕೂಡ ಕಾಂತಾರ ಚಿತ್ರವನ್ನು ತುಂಬು ಹೃದಯದಿಂದ ಮೆಚ್ಚಿ, ಭೇಷ್ ಅಂತ ಹೊಗಳುತ್ತಿದ್ದಾರೆ. ಇಂತಹ ಸಿನಿಮಾ ಈಗಾಗ್ಲೇ ಹತ್ತು, ಹಲವು ದಾಖಲೆಗಳನ್ನ ಬರೆದಾಗಿದೆ. ಇದೀಗ ನಮ್ಮ ಭಾರತೀಯ ಚಿತ್ರರಂಗದಲ್ಲಿ ಮತ್ತೊಂದು ಸಾರ್ವಕಾಲಿಕ ದಾಖಲೆಗೆ ಸಾಕ್ಷಿಯಾಗಿದೆ ಶೆಟ್ರ ಕಾಂತಾರ. ಯೆಸ್.. ಈ ವರ್ಷ ಇಂಡಿಯನ್ ಸಿನಿದುನಿಯಾದಲ್ಲಿ ಅತಿಹೆಚ್ಚು ಗಳಿಸಿದ ಸಿನಿಮಾ ಆಗಿ ಕಾಂತಾರ-1 ಅಗ್ರಸ್ಥಾನದಲ್ಲಿ ರಾರಾಜಿಸ್ತಿದೆ. ಈ ಮೂಲಕ ಇಂಡಿಯನ್ ಬಾಕ್ಸ್ ಆಫೀಸ್‌ಗೆ ರಿಷಬ್ ಶೆಟ್ಟಿ ಕಿಂಗ್ ಆಗಿ ಮಿಂಚುತ್ತಿದ್ದಾರೆ.
ಕಾಂತಾರ ಇಂಡಿಯಾಗೇ ನಂ.1.. ಛಾವಾ ರೆಕಾರ್ಡ್ ಪೀಸ್ ಪೀಸ್
808 ಕೋಟಿಗೂ ಅಧಿಕ ಕಲೆಕ್ಷನ್.. ರಿಷಬ್ ಬಾಕ್ಸಾಫೀಸ್ ಕಿಂಗ್!
ಯೆಸ್.. ಇದೇ ವರ್ಷ ಫೆಬ್ರವರಿ 14ರಂದು ತೆರೆಕಂಡ ಬಾಲಿವುಡ್‌ನ ಛಾವಾ ಸಿನಿಮಾ 807 ಕೋಟಿ 91 ಲಕ್ಷ ಕಲೆಕ್ಷನ್ ಮಾಡೋ ಮೂಲಕ ಇಂಡಿಯಾದ ನಂಬರ್ ಒನ್ ಸಿನಿಮಾ ಅನಿಸಿಕೊಂಡಿತ್ತು. ವಿಕ್ಕಿ ಕೌಶಲ್ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ನಟನೆಯ ಛಾವಾ, ಛತ್ರಪತಿ ಶೀವಾಜಿ ಮಹಾರಾಜರ ಮಗನ ಕುರಿತ ಸಿನಿಮಾ ಆಗಿದ್ದು, ಎಲ್ಲರ ದಿಲ್ ದೋಚಿತ್ತು. ಆದ್ರೀಗ ರಿಷಬ್ ಶೆಟ್ಟಿ, ತನ್ನ ಶಿಷ್ಯೆ ರಶ್ಮಿಕಾ ಸಿನಿಮಾದ ರೆಕಾರ್ಡ್‌ನ ತಾವೇ ಬ್ರೇಕ್ ಮಾಡಿ, ನಂ.1 ಪಟ್ಟಕ್ಕೇರಿದ್ದಾರೆ.
ವಿಕ್ಕಿ ಕೌಶಲ್ ಛಾವಾ ದಾಖಲೆಯನ್ನ ಕಾಂತಾರ ಕೇವಲ 20 ದಿನಗಳಲ್ಲಿ ಮಾಡಿರೋದು ಇಲ್ಲಿ ಮೆಚ್ಚುವಂತಹ ವಿಷಯವಾಗಿದೆ. ದೀಪಾವಳಿ ಹಬ್ಬದ ಹಿನ್ನೆಲೆ ಇಂದಿಗೂ ಎಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಕಾಣ್ತಿದ್ದು, ಬುಕ್ಕಿಂಗ್ಸ್ ಜೋರಾಗಿಯೇ ಆಗ್ತಿದೆ. ನಿನ್ನೆಗೆ 800 ಕೋಟಿ ಗಳಿಸಿದ್ದ ಕಾಂತಾರ-1, ಇಂದಿಗೆ ಛಾವಾ ದಾಖಲೆಯನ್ನ ಸರಿಗಟ್ಟಿ, ನ್ಯಾಷನಲ್ ಲೆವೆಲ್‌ನಲ್ಲಿ ತನ್ನ ಬಾಕ್ಸ್ ಆಫೀಸ್ ಕಹಳೆ ಊದಿದೆ. ಇದು ನಿಜಕ್ಕೂ ಪ್ರತಿಯೊಬ್ಬ ಕನ್ನಡಿಗ ಹೆಮ್ಮೆ ಪಡುವ ವಿಷಯವಾಗಿದೆ. ಸಾವಿರ ಕೋಟಿ ಕ್ಲಬ್‌ನತ್ತ ನಾಗಾಲೋಟ ಮುಂದುವರೆಸಿರೋ ಕಾಂತಾರ ಕಹಾನಿ, ಅದನ್ನೂ ಸಾಧಿಸಲಿ ಅಂತ ಹಾರೈಸೋಣ.