ಬಿಗ್‌ಬಾಸ್ ಸೀಸನ್ 12 ಕ್ಕೆ ಇತ್ತೀಚಿಗೆ ಬಂದ ಮೂರು ವೈಲ್ಡ್‌ಕಾರ್ಡ್ ಎಂಟ್ರಿಗಳು ಜಾಹ್ನವಿಗೆ ಸಾಕಷ್ಟು ಟೀಕೆ ಹಾಗೂ ಬುದ್ದಿ ಮಾತುಗಳನ್ನ ಹೇಳಿದ್ದಾರೆ.ಇದರಿಂದ ಮನನೊಂದ ಜಾಹ್ನವಿ ಅಶ್ವಿನಿ ಗೌಡರ ಬಳಿ ತಮ್ಮ ನೋವನ್ನ ಹೇಳಿಕೊಂಡು ಗಳಗಳನೆ ಅತ್ತಿದ್ದಾರೆ. ಆದರೆ ಅವರು ಯಅಕೆ ಅಳುತ್ತಿದ್ದರು, ಏನಾಯ್ತು ಎಂಬುದು ಇಂದಿನ ಸಂಚಿಕೆಯಲ್ಲಿ ಕಾದುನೋಡಬೇಕಿದೆ.
ನಿನ್ನೆಯ ದಿನ ಬಿಗ್ ಬಾಸ್ ಮನೆಗೆ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಪ್ರವೇಶಿಸಿದ್ದರು. ಅವರಲ್ಲಿ ಇಬ್ಬರಾದ ಮ್ಯೂಟೆಂಟ್ ರಘು ಮತ್ತು ರಿಷಾ ಗೌಡ, ಬರುತ್ತಿದ್ದಂತೆಯೇ ಜಾಹ್ನವಿ ಅವರ ತಪ್ಪುಗಳನ್ನು ಒತ್ತಿ ಹೇಳಿ ಸರಿ ಪಡಿಸಿಕೊಳ್ಳುವಂತೆ ಹೇಳಿದ್ದಾರೆ.ಆರಂಭದಲ್ಲಿ ನಾನು ಇರೋದೇ ಹೀಗೆ ಎಂದು ಹೇಳಿದ್ದ ಜಾಹ್ನವಿ, ಈಗ ಸಡನ್ನಾಗಿ ನೊಂದು ಕಣ್ಣೀರು ಸುರಿಸುವ ಸ್ಥಿತಿಗೆ ತಲುಪಿದ್ದಾರೆ.
ವೈಲ್ಡ್ ಕಾರ್ಡ್ ಎಂಟ್ರಿ ಜಾನ್ವಿಗೆ ಎಚ್ಚರಿಕೆ ಗಂಟೆಯಾಯ್ತಾ?
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12 #BBK12 #ColorsKannada #AdeBeruHosaChiguru #ಕಲರ್‌ಫುಲ್‌ಕತೆ #colorfulstory #KicchaSudeep #ExpectTheUnexpected #CKPromo pic.twitter.com/TZl6jOT5xI
— Colors Kannada (@ColorsKannada) October 21, 2025
ರಿಷಾ ಗೌಡ ಅವರು ಜಾಹ್ನವಿಗೆ ನೇರವಾಗಿ ಇಲ್ಲಿ ನೀವು ಪುಕ್ಕ ತರಾನೇ ಇದ್ದರೆ ಜಾಹ್ನವಿ ಕಳೆದುಹೋಗ್ತಾಳೆ. ನೀವು ಸಾಕಷ್ಟು ಕೆಲಸ ಮಾಡಬೇಕು ಅಂತಾ ಕನಸು ಕಟ್ಟಿಕೊಂಡು ಬಂದಿರ್ತೀರಿ. ನಿಮಗೆ ನೀವೇ ಮುಳ್ಳಾಗ್ತೀದ್ದೀರಿ ಅನಿಸುತ್ತೆ ಎಂದು ರಿಷಾ ಗೌಡ ಬಹಳ ಕಟುವಾಗಿ ಮಾತನಾಡಿದ್ದು, ಜಾಹ್ನವಿ ಅವರ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರಿದೆ.
ನಂತರ ಜಾಹ್ನವಿ ಅಶ್ವಿನಿ ಗೌಡ ಅವರ ಮುಂದೆ ಹೋಗಿ ಅಳಲು ತೋಡಿಕೊಂಡಿದ್ದಾರೆ. ಸುಮ್ನೆ ನೆಗೆಟೀವ್ ಮಾಡಿಕೊಂಡು ಹೋದ್ರೆ, ನಮ್ಮ ಗುಂಡಿನ ನಾವೇ ತೋಡಿಕೊಂಡು… ಎಂದು ಕಣ್ಣೀರಿನಲ್ಲಿ ಹೇಳಿಕೊಂಡ ಜಾಹ್ನವಿ ಅವರಿಗೆ ಅಶ್ವಿನಿ ಗೌಡ ಸಮಾಧಾನ ಮಾಡಿದ್ದಾರೆ.
ಅಶ್ವಿನಿ ಗೌಡ ಅವರು, ಏನೂ ಇಲ್ಲ. ಬಿಗ್ ಬಾಸ್ ಮನೆಯಲ್ಲಿ ಇರೋರು ಯಾರೂ ತಪ್ಪೇ ಮಾಡಿಲ್ವಾ? ಅದರಿಂದ ನೀವು ಹೊರಗಡೆ ಬನ್ನಿ. ನಮ್ಮ ವ್ಯಕ್ತಿತ್ವ, ನಿಮ್ಮ ವ್ಯಕ್ತಿತ್ವ ಅದಲ್ಲ ಎಂದು ಬುದ್ಧಿ ಹೇಳಿ ಜಾಹ್ನವಿಯನ್ನು ಧೈರ್ಯಗೊಳಿಸಿದ್ದಾರೆ.