ಚಿಕ್ಕಬಳ್ಳಾಪುರ: ತಂದೆಯ ಸಾವಿನ ದುಃಖ ತಾಳಲಾರದೆ 22 ವರ್ಷಯ ವಿದ್ಯಾರ್ಥಿನಿ ಸ್ವರ್ಣ (ಹೆಸರು ಬದಲಾವಣೆ) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ ಗೌರಿಬಿದನೂರು ನಗರದ ನಾಗಿರೆಡ್ಡಿ ಬಡಾವಣೆಯಲ್ಲಿ ನಡೆದಿದೆ.
ಸ್ವರ್ಣ ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಎಂಎಸ್‌ಸಿ ಪದವಿ ವ್ಯಾಸಂಗ ಮಾಡುತ್ತಿದ್ದಳು. ಕಳೆದ 3 ತಿಂಗಳ ಹಿಂದೆ ಅವಳ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆಯಿಂದ ಗಂಭೀರವಾಗಿ ಮನನೊಂದ ಸ್ವರ್ಣ, ಕಾಲೇಜು ಹಾಸ್ಟೆಲ್ನೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ನಂತರ ಅವಳ ತಾಯಿ ತಮ್ಮ ಊರಾದ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಸ್ವರ್ಣಳನ್ನ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸ್ವರ್ಣ ಸಾವನ್ನಪ್ಪಿದ್ದಾಳೆ.
ಒಂದೇ ಕುಟುಂಬದಲ್ಲಿ ಕೆಲವೇ ತಿಂಗಳಗಳ ಅಂತರದಲ್ಲಿ ಎರಡು ಆತ್ಮಹತ್ಯೆಯ ಘಟನೆಗಳು ಸಂಭವಿಸಿದ್ದು, ತಾಯಿಯನ್ನು ದಿಕ್ಕುತೋಚದ ಸ್ಥಿತಿಗೆ ತಂದಿದೆ. ಗಂಡ ಮತ್ತು ಮಗಳು ಇಬ್ಬರನ್ನೂ ಕಳೆದುಕೊಂಡ ತಾಯಿ ಸಂಕಟದಿಂದ ಹೋರಾಡುತ್ತಿದ್ದಾರೆ.