ಬಿಗ್ ಬಾಸ್ ಕನ್ನಡ ಸೀಸನ್ 12 ದಿನದಿಂದ ದಿನಕ್ಕೆ ವೀಕ್ಷಕರ ಮನಗೆದ್ದು, ರಿಯಾಲಿಟಿ ಶೋಗಳ ರಾಜನಂತೆ ಮಿಂಚುತ್ತಿದೆ. ದೊಡ್ಮನೆಯ ಒಳಗಿನ ಸನ್ನಿವೇಶಗಳು, ಸ್ಪರ್ಧಿಗಳ ನಡವಳಿಕೆ, ಮಾತುಗಳು ವೀಕ್ಷಕರ ಕುತೂಹಲವನ್ನು ಕೆರಳಿಸಿವೆ. ಈ ಬಾರಿಯ ಸೀಸನ್‌ನಲ್ಲಿ ನಟ ಅಭಿಷೇಕ್ ಮತ್ತು ಜಾನ್ವಿ ನಡುವಿನ ಸಂಭಾಷಣೆಯೊಂದು ದೊಡ್ಡ ಸದ್ದು ಮಾಡುತ್ತಿದೆ. ಅಭಿಷೇಕ್‌ಗೆ ‘ಆಂಟಿ ಲವರ್’ ಎಂಬ ಟ್ಯಾಗ್ ಸಿಕ್ಕಿದ್ದು, ಜಾನ್ವಿಯ ವೈಯಕ್ತಿಕ ಜೀವನದ ಕೆಲವು ರಹಸ್ಯಗಳು ಬಯಲಾಗಿವೆ.
ಲಕ್ಷಣ ಮತ್ತು ವಧು ಸೀರಿಯಲ್‌ನಿಂದ ಖ್ಯಾತಿ ಗಳಿಸಿದ ನಟ ಅಭಿಷೇಕ್, ದೊಡ್ಮನೆಯಲ್ಲಿ ತಮ್ಮ ಚುರುಕಾದ ಮಾತುಗಾರಿಕೆಯಿಂದ ಗಮನ ಸೆಳೆಯುತ್ತಿದ್ದಾರೆ. ಅಡುಗೆ ಮನೆಯ ಬಳಿ ಜಾನ್ವಿಯೊಂದಿಗೆ ಮಾತಿಗೆ ಇಳಿದ ಅಭಿಷೇಕ್, “ನಿಮ್ಮ ವಯಸ್ಸು ಎಷ್ಟು?” ಎಂದು ಕೇಳಿದಾಗ, ಜಾನ್ವಿ ತಮಾಷೆಯಾಗಿ, “ನೀವು ಮದುವೆಯ ವಯಸ್ಸಿನವರಂತೆ ಕಾಣುತ್ತೀರಿ, 21 ಇದ್ದೀರಾ?” ಎಂದು ಕೇಳಿದರು. ಇದಕ್ಕೆ ಅಭಿಷೇಕ್, “ನಿಮಗಿಂತ ದೊಡ್ಡವರಾದರೆ ಇಷ್ಟನಾ?” ಎಂದು ಫ್ಲರ್ಟ್ ಮಾಡುವ ರೀತಿಯಲ್ಲಿ ಪ್ರಶ್ನೆ ಕೇಳಿದರು.
ಈ ಸಂಭಾಷಣೆಯ ಸಂದರ್ಭದಲ್ಲಿ ಪಕ್ಕದಲ್ಲಿದ್ದ ಸ್ಪರ್ಧಿ ಅಶ್ವಿನಿ, “ಅಭಿಷೇಕ್‌ಗೆ ಬೇರೆ ಆಯ್ಕೆ ಇಲ್ಲ, ಆಂಟಿ ಲವರ್!” ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದರು. ಇದಕ್ಕೆ ಫ್ಲರ್ಟ್ ಕೂಡ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. “ನಿಮ್ಮ ವಯಸ್ಸು 28 ಎಂದು ನನಗೆ ಗೊತ್ತು, ನಾನು ನಿಮಗಿಂತ 10 ವರ್ಷ ದೊಡ್ಡವಳು. ನನ್ನಂತವರೆಂದರೆ ಇಷ್ಟನಾ?” ಎಂದು ಅಭಿಷೇಕ್‌ಗೆ ಕೇಳಿದ ಜಾನ್ವಿ, ತಾವು ‘ಆಂಟಿ’ಯಂತೆ ಕಾಣದಂತೆ ತಮ್ಮನ್ನು ಮೇಂಟೈನ್ ಮಾಡಿಕೊಂಡಿರುವುದಾಗಿ ತಿರುಗೇಟು ನೀಡಿದರು. ಅಭಿಷೇಕ್ ಕೂಡ, “ನೀವು ಆಂಟಿಯಂತೆ ಕಾಣಿಸಲ್ಲ!” ಎಂದು ಫ್ಲರ್ಟ್ ಮಾಡಿದರು.
ಈ ಲಘು ಸಂಭಾಷಣೆಯ ನಡುವೆ ಜಾನ್ವಿ ತಮ್ಮ ವೈಯಕ್ತಿಕ ಜೀವನದ ಕೆಲವು ಆಘಾತಕಾರಿ ಸತ್ಯಗಳನ್ನು ಬಿಗ್ ಬಾಸ್ ಮನೆಯಲ್ಲಿ ಬಿಚ್ಚಿಟ್ಟರು. ತಮ್ಮ ವಿಚ್ಛೇದನ ಮತ್ತು ಮಾಜಿ ಪತಿಯ ಎರಡನೇ ಮದುವೆಯ ಬಗ್ಗೆ ಮಾತನಾಡಿದ ಜಾನ್ವಿ, “ನಾನು ಡಿವೋರ್ಸ್ ತೆಗೆದುಕೊಳ್ಳುವ ಮೊದಲೇ ನನ್ನ ಮಾಜಿ ಪತಿ ನನ್ನ ಸ್ನೇಹಿತೆಯನ್ನೇ ಮದುವೆಯಾಗಿದ್ದರು” ಎಂದು ತಿಳಿಸಿದರು.