ದೇಶದಾದ್ಯಂತ ವಿಜಯದಶಮಿ ಹಬ್ಬದ ಸಡಗರ ಮನೆಮಾಡಿದೆ. ಈ ಶುಭ ಸಂದರ್ಭದಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಅನೇಕ ರಾಷ್ಟ್ರೀಯ ನಾಯಕರು ಮತ್ತು ಗಣ್ಯರು ದೇಶದ ಜನತೆಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಮಾಧ್ಯಮದ ಮೂಲಕ ದೇಶವಾಸಿಗಳಿಗೆ ಶುಭಾಶಯ ತಿಳಿಸಿದರು. ದುರ್ಗಾ ಮಾತೆ ಮತ್ತು ಪ್ರಭು ಶ್ರೀರಾಮನ ಆಶೀರ್ವಾದದಿಂದ ನೀವೆಲ್ಲರೂ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಜಯ ಸಾಧಿಸಬೇಕೆಂದು ನಾನು ಬಯಸುತ್ತೇನೆ ಎಂದು ಅವರು ಹೇಳಿದರು. ವಿಜಯದಶಮಿಯು ದುರ್ಗಾ ಪೂಜೆಯ ಕೊನೆಯ ದಿನವಾಗಿದ್ದು, ರಾವಣನ ಮೇಲೆ ಶ್ರೀರಾಮನ ವಿಜಯವನ್ನು ಸ್ಮರಿಸುತ್ತದೆ ಎಂದೂ ಅವರು ತಿಳಿಸಿದರು. ಈ ಹಬ್ಬ ಕೆಟ್ಟದ್ದರ ಮೇಲೆ ಒಳ್ಳೆಯದರ ಮತ್ತು ಅಸತ್ಯದ ಮೇಲೆ ಸತ್ಯದ ವಿಜಯದ ಸಂಕೇತವಾಗಿದೆ ಎಂದು ಪ್ರಧಾನಿ ಮೋದಿ ನುಡಿದಿದ್ದಾರೆ.
ಸತ್ಯ, ನ್ಯಾಯ ಮತ್ತು ನಿಜವಾದ ಧರ್ಮದ ಗೆಲುವಿನ ಸಂದೇಶ ಸಾರುವ ವಿಜಯದಶಮಿ, ಸುಳ್ಳು, ಅನ್ಯಾಯ ಮತ್ತು ಅಧರ್ಮದ ವಿರುದ್ಧ ಧೈರ್ಯದಿಂದ ದನಿ ಎತ್ತಲು ಪ್ರೇರಣೆಯಾಗಲಿ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಶುಭ ಹಾರೈಸಿದ್ದಾರೆ.
ಅಸತ್ಯದ ವಿರುದ್ಧ ಸತ್ಯ, ಅಧರ್ಮದ ವಿರುದ್ಧ ಧರ್ಮ ಮತ್ತು ಅಜ್ಞಾನದ ವಿರುದ್ಧ ಜ್ಞಾನವು ವಿಜಯ ಸಾಧಿಸಿದ ಪವಿತ್ರ ದಿನವೇ ವಿಜಯದಶಮಿ ಎಂದು ಹೇಳಿ ಡಿಸಿಎಂ ಡಿ.ಕೆ. ಶಿವಕುಮಾರ್ ಶುಭಕೋರಿದ್ದಾರೆ.
ನಾಡಿನ ಸಮಸ್ತ ಜನತೆಗೆ ದಸರಾ ಹಾಗೂ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು. pic.twitter.com/5ro3cUNxd9
— DK Shivakumar (@DKShivakumar) October 2, 2025
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ , ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ಜನತೆಗೆ ಶುಭಾಶಯ ತಿಳಿಸಿದ್ದಾರೆ
ಸಂತೋಷ ಮತ್ತು ವಿಜಯದ ಬೆಳಕಿನಿಂದ ನಿಮ್ಮ ಜೀವನ ತುಂಬಿರಲಿ, ಎಲ್ಲರಿಗೂ ದಸರಾ ಹಾಗೂ ವಿಜಯದಶಮಿಯ ಶುಭಾಶಯಗಳು! 😃🙌
As we mark the triumph of good over evil, may this Dasara and Vijayadashami bring peace, prosperity, and joy to all. ✨🙏#PlayBold #ನಮ್ಮRCB #Navratri #Dasara2025 pic.twitter.com/Fy9YKEloIS
— Royal Challengers Bengaluru (@RCBTweets) October 2, 2025