ಬೆಂಗಳೂರು, ಸೆಪ್ಟೆಂಬರ್ 28: ಕನ್ನಡ ಟೆಲಿವಿಷನ್‌ನ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ’ ಇಂದು ಗ್ರ್ಯಾಂಡ್ ಪ್ರೀಮಿಯರ್‌ನೊಂದಿಗೆ ಸೀಸನ್ 12 ಆರಂಭವಾಗುತ್ತಿದೆ. ಕಿಚ್ಚ ಸುದೀಪ್ ಅವರ ಹೋಸ್ಟಿಂಗ್‌ನಲ್ಲಿ ಈ ಬಾರಿ ಸ್ವರ್ಗ ಮತ್ತು ನರಕ ಥೀಮ್‌ನೊಂದಿಗೆ ಮನೆಯು ರೆಡಿಯಾಗಿದೆ. ಕಲರ್ಸ್ ಕನ್ನಡ ಮತ್ತು ಜಿಯೋಸಿನಿಮಾ ಪ್ಲಾಟ್‌ಫಾರ್ಮ್‌ನಲ್ಲಿ ಟೆಲಿಕಾಸ್ಟ್ ಆಗುವ ಈ ಶೋಗೆ 19 ಮಂದಿ ಸೆಲೆಬ್ರಿಟಿಗಳು ಎಂಟ್ರಿ ನೀಡಿದ್ದಾರೆ. ಇದರಲ್ಲಿ ಸೀರಿಯಲ್ ಸ್ಟಾರ್‌ಗಳು, ಕಾಮಿಡಿ ಕಿಂಗ್‌ಗಳು, ಯೂಟ್ಯೂಬರ್‌ಗಳು, ನಟ-ನಟಿಗಳು ಸೇರಿ ವೈವಿಧ್ಯಮಯ ತಂಡವಿದೆ. ಗ್ಯಾರಂಟಿ ನ್ಯೂಸ್‌ನ ಎಕ್ಸ್‌ಕ್ಲೂಸಿವ್ ಮಾಹಿತಿಯ ಪ್ರಕಾರ, ಈ ಸ್ಪರ್ಧಿಗಳು ಮನೆಯಲ್ಲಿ ಡ್ರಾಮಾ, ರೊಮ್ಯಾನ್ಸ್, ಫೈಟ್‌ಗಳ ಮೂಲಕ ಕರ್ನಾಟಕದ ಜನತೆಯನ್ನು ರಂಜಿಸಲಿದ್ದಾರೆ.
ನಿಮ್ಮ ಗ್ಯಾರಂಟಿ ನ್ಯೂಸ್‌ನಲ್ಲಿ 19 ಸ್ಪರ್ಧಿಗಳ ಹೆಸರುಗಳನ್ನು ರಿವೀಲ್ ಮಾಡಲಾಗಿದ್ದು, ಸೀರಿಯಲ್ ನಟ ಅಭಿಷೇಕ್ ಶ್ರೀಕಂಠ ಮನೆಗೆ ಎಂಟ್ರಿ ನೀಡಿದ್ದಾರೆ. ಕನ್ನಡದ ‘ವಧು’ ಟಿವಿ ಸೀರಿಯಲ್‌ನಲ್ಲಿ ಅವರ ಪಾತ್ರದಿಂದ ಜನಪ್ರಿಯರಾದ ಅಭಿಷೇಕ್, ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಎಂಟ್ರಿ ಮನೆಯಲ್ಲಿ ಎಮೋಷನಲ್ ಡ್ರಾಮಾ ನೀಡುವ ಸಾಧ್ಯತೆಯಿದೆ. ಕಾಮಿಡಿ ಕ್ವೀನ್ ಚಂದ್ರಪ್ರಭಾ ಎಂಟ್ರಿ ಕೊಡಲಿದ್ದು, ಅವರ ಹಾಸ್ಯ ಮನೆಯಲ್ಲಿ ಎಲ್ಲರನ್ನೂ ನಗಿಸುತ್ತದೆ ಎಂದು ಊಹಿಸಬಹುದು.
ನಟ ಸುಧೀ ಗೌಡ ಅವರು ಬಿಗ್ ಮನೆಗೆ ಕಾಲಿಡಲಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಮಲ್ಟಿ ಟ್ಯಾಲೆಂಟೆಡ್ ಸುಧೀ, ಅವರ ಕಾಮಿಡಿ ಟೈಮಿಂಗ್‌ನಿಂದ ಫ್ಯಾನ್ಸ್ ಅನ್ನು ಆಕರ್ಷಿಸಲಿದ್ದಾರೆ. ಸೀರಿಯಲ್ ನಟ ಧನುಷ್ ರೆಡ್ಡಿ ಬಿಗ್‌ಬಾಸ್ ಮನೆಗೆ ಬರಲಿದ್ದಾರೆ. ಗಿಲ್ಲಿ ನಟ ಮತ್ತು ಆಂಕರ್ ಜಾಹ್ನವಿ ಅವರ ಎಂಟ್ರಿ ಯುವಕರನ್ನು ಆಕರ್ಷಿಸುತ್ತದೆ.
ನಟಿ ಕಾವ್ಯ ಶ್ರೀನಿಧಿ ಅವರು ಬಿಗ್ ಮನೆಗೆ ಬರಲಿದ್ದಾರೆ. ಕಾವ್ಯ, ಮಾಡೆಲಿಂಗ್ ಬ್ಯಾಕ್‌ಗ್ರೌಂಡ್ ಹೊಂದಿದ್ದಾರೆ. ಯೂಟ್ಯೂಬರ್ ಮಲ್ಲಮ್ಮ ಅವರು ಎಂಟ್ರಿ ಕೊಡಲಿದ್ದಾರೆ. ಅವರ ವೈರಲ್ ವೀಡಿಯೋಗಳು ಮತ್ತು ಧರ್ಮಸ್ಥಳ ಕಾಂಟ್ರೋವರ್ಸಿ ಮನೆಯಲ್ಲಿ ಹಾಟ್ ಟಾಪಿಕ್ ಆಗ್ತಿವೆ. ನಟಿ ಮಂಜು ಭಾಷಿಣಿ ಅವರು ಕೂಡ ದೊಡ್ಮನೆಗೆ ಕಾಲಿಡಲಿದ್ದಾರೆ. ನಟಿ ರಷಿಕಾ ಎಂಟ್ರಿ ಕೊಡಲಿದ್ದಾರೆ.
ಡಾಗ್ ಸತೀಶ್ ಅವರ ಕಾಮಿಡಿ ಟ್ಯಾಗ್ ಮನೆಯಲ್ಲಿ ಎಂಟರ್ಟೈನ್‌ಮೆಂಟ್ ಗ್ಯಾರಂಟಿ. ನಟಿ ಸ್ಪಂದನಾ ಅವರ ಟಿವಿ ಸೀರಿಯಲ್ ಫೇಮ್ ಮನೆಯಲ್ಲಿ ಎಮೋಷನಲ್ ಸೈಡ್ ತೋರಿಸುತ್ತದೆ. ಕರವೇ ಅಶ್ವಿನಿ ಗೌಡ ಅವರ ಫೋಕ್ ಡ್ಯಾನ್ಸ್ ಬ್ಯಾಕ್‌ಗ್ರೌಂಡ್ ಕಲ್ಚರಲ್ ಟಚ್ ನೀಡುತ್ತದೆ. ಕರಿಬಸಪ್ಪ ನವಲಾರ ಅವರ ರಾಯಲ್ ಫ್ಯಾಮಿಲಿ ಕನೆಕ್ಷನ್ ಮನೆಯಲ್ಲಿ ರಾಜಕೀಯ ಡ್ರಾಮಾ ರಚಿಸಬಹುದು.
ರಕ್ಷಿತಾ ಅವರ ಮಿಸ್ ಕನ್ನಡ ಟೈಟಲ್ ಮನೆಯಲ್ಲಿ ಬ್ಯೂಟಿ ವಿತ್ ಬ್ರೈನ್ಸ್ ತರುತ್ತದೆ. ಮಲ್ಲು ನಿಪ್ಪನಾಳ್ ಅವರ್ ಸ್ಟ್ಯಾಂಡ್-ಅಪ್ ಕಾಮಿಡಿ ಮನೆಯಲ್ಲಿ ಲಾಫ್ಟರ್ ರೈಟ್ ಕ್ರಿಯೇಟ್ ಮಾಡುತ್ತದೆ. ಅಮಿತ್ ಪವಾರ್ ಅವರ್ ಯೂಟ್ಯೂಬ್ ಕಂಟೆಂಟ್ ಕ್ರಿಯೇಟರ್ ಆಗಿ ಯಂಗ್ ಎನರ್ಜಿ ತರುತ್ತಾರೆ. ಅಂತಿಮವಾಗಿ, ನಟ ಧೃವಂತ್ ಅವರ ಚಿತ್ರರಂಗ ಎಕ್ಸ್‌ಪೀರಿಯನ್ಸ್ ಮನೆಯಲ್ಲಿ ಲೀಡರ್‌ಶಿಪ್ ತೋರಿಸುತ್ತದೆ.
ಈ 19 ಸ್ಪರ್ಧಿಗಳು ಮನೆಯಲ್ಲಿ ಯಾವ ಚ್ಯಾಲೆಂಜ್‌ಗಳನ್ನು ಎದುರಿಸುತ್ತಾರೆ? ಸ್ವರ್ಗ-ನರಕ ಟಾಸ್ಕ್‌ಗಳು, ವೈಲ್ಡ್ ಕಾರ್ಡ್ ಎಂಟ್ರಿಗಳು, ಎವಿಕ್ಷನ್ ಟ್ವಿಸ್ಟ್‌ಗಳು ಎಲ್ಲವುದಕ್ಕೂ ರೆಡಿಯಾಗಿದ್ದಾರೆ.