ರಾಕಿಂಗ್ ಸ್ಟಾರ್ ಯಶ್ ಅಭಿನಯದ ರಾಮಾಯಣ ಸಿನಿಮಾ, ಮೇಕಿಂಗ್ ಹಂತದಲ್ಲೇ ವಿಶ್ವ ಸಿನಿದುನಿಯಾದ ಗಮನ ಸೆಳೆದಿದೆ. ನಮಿತ್ ಮಲ್ಹೋತ್ರಾ-ಯಶ್ ನಿರ್ಮಾಣದ ಈ ಮಾಸ್ಟರ್‌ಪೀಸ್‌ಗೆ ಹಾಲಿವುಡ್ ಪ್ರೊಡ್ಯೂಸರ್ ಎಂಟ್ರಿ ಕೊಟ್ಟಿದ್ದಾರೆ. ಹಾಗಾದ್ರೆ ಎಷ್ಟು ಕೋಟಿ ಬಜೆಟ್‌ನಲ್ಲಿ ತಯಾರಾಗ್ತಿದೆ ರಾಮಾಯಣ..? ಯಾರು ಆ ಹಾಲಿವುಡ್ ಆಸ್ಕರ್ ಅವಾರ್ಡ್ ವಿನ್ನರ್ ಅನ್ನೋದ್ರ ಕಂಪ್ಲೀಟ್ ಇನ್‌ಸೈಡ್ ಸ್ಟೋರಿ ಇಲ್ಲಿದೆ.
- ಯಶ್ ರಾಮಾಯಣಕ್ಕೆ ಓಪನ್‌ಹೈಮರ್ ಪ್ರೊಡ್ಯೂಸರ್ ಎಂಟ್ರಿ
- ಆಸ್ಕರ್ ವಿನ್ನರ್ ನಿರ್ಮಾಪಕ ಚಾರ್ಲ್ಸ್ ರೋವನ್ ಬೆನ್ನೆಲುಬು..!
- 400Cr ಬಜೆಟ್‌ನಲ್ಲಿ ರಾಮಾಯಣ ಮೊದಲ ಭಾಗ ನಿರ್ಮಾಣ
- ದಂಗಲ್ ಡೈರೆಕ್ಟರ್‌ಗೆ ಈಗ ಆನೆ ಬಲ.. ರಣ್‌ಬೀರ್-ಯಶ್ ರಾಕ್ಸ್
ರಾಮಾಯಣ.. ನಮ್ಮ ಹಿಂದೂ ಸಂಸ್ಕೃತಿಯ ಪ್ರತಿಬಿಂಬ. ರಾಮ, ಹನುಮ, ಸೀತಾದೇವಿಯ ಕುರಿತ ಬಹುದೊಡ್ಡ ಜರ್ನಿ. ರಾವಣ ಸಂಹಾರ ಹಾಗೂ ದೀಪಾವಳಿ ಸಂಭ್ರಮಕ್ಕೆ ಕಾರಣೀಭೂತವಾದ ಘಟನೆ. ಎಲ್ಲಕ್ಕಿಂತ ಮಿಗಿಲಾಗಿ ನಮ್ಮ ಹಿಂದೂ ಧರ್ಮದ ಧಾರ್ಮಿಕ ನಂಬಿಕೆಯ ಪ್ರತಿರೂಪವದು. ಅದೀಗ ಮಾಸ್ಟರ್‌ಪೀಸ್ ಸಿನಿಮಾ ಆಗಿ ಬೆಳ್ಳಿತೆರೆ ಬೆಳಗಲು ಸಜ್ಜಾಗ್ತಿದೆ. ಅದಕ್ಕೆ ದಂಗಲ್ ಖ್ಯಾತಿಯ ಡೈರೆಕ್ಟರ್ ನಿತೇಶ್ ತಿವಾರಿ ಆ್ಯಕ್ಷನ್ ಕಟ್ ಹೇಳ್ತಿದ್ದು, ನಮಿತ್ ಮಲ್ಹೋತ್ರಾ ನಿರ್ಮಾಣ ಮಾಡ್ತಿದ್ದಾರೆ.
ಇತ್ತೀಚೆಗೆ ಟೈಟಲ್ ಟೀಸರ್ ಝಲಕ್ ರಿಲೀಸ್ ಆಗಿದ್ದು, ರಾಮನಾಗಿ ರಣ್‌ಬೀರ್ ಕಪೂರ್ ಹಾಗೂ ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ದೃಶ್ಯಗಳು ನೋಡುಗರ ಹುಬ್ಬೇರಿಸಿವೆ. ಇಲ್ಲಿ ಸೀತೆಯಾಗಿ ಸಾಯಿ ಪಲ್ಲವಿ ಬಣ್ಣ ಹಚ್ಚಿದ್ದು, ಬಹುಭಾಷಾ ಸೂಪರ್ ಸ್ಟಾರ್‌ಗಳು ಸಾಕಷ್ಟು ಮಂದಿ ಈ ಚಿತ್ರದ ತಾರಾಗಣದಲ್ಲಿದ್ದಾರೆ. ಅಂದಹಾಗೆ ಕೆಜಿಎಫ್‌ನಿಂದ ನ್ಯಾಷನಲ್ ಸ್ಟಾರ್ ಆಗಿ ರಾರಾಜಿಸಿದ ನಮ್ಮ ಯಶ್, ಈ ಚಿತ್ರದಲ್ಲಿ ಲಂಕೇಶ್ವರನಾಗಿ ಮಾತ್ರ ಬಣ್ಣ ಹಚ್ಚಿಲ್ಲ. ಸಹ ನಿರ್ಮಾಣ ಕೂಡ ಮಾಡ್ತಿದ್ದಾರೆ.
ರಾಮಾಯಣ ಚಿತ್ರ ಒಂದಲ್ಲ ಎರಡೆರಡು ಭಾಗಗಳಲ್ಲಿ ತಯಾರಾಗ್ತಿದ್ದು, 2026ರ ದೀಪಾವಳಿಗೆ ಮೊಲದ ಭಾಗ, 2027ರ ದೀಪಾವಳಿ ಹಬ್ಬಕ್ಕೆ ಎರಡನೇ ಭಾಗ ರಿಲೀಸ್ ಆಗಲಿದೆ. ಈ ಚಿತ್ರದ ಬಜೆಟ್ ಸಾವಿರ ಕೋಟಿ ಎನ್ನಲಾಗಿತ್ತು. ಹೌದು.. ಹೆಚ್ಚು ಕಡಿಮೆ ಅಷ್ಟೇ ಆಗ್ತಿದೆ. ಯಾಕಂದ್ರೆ ಮೊದಲ ಭಾಗ ಒಂದಕ್ಕೇನೇ ಬರೋಬ್ಬರಿ 400 ಕೋಟಿ ಹೂಡಿಕೆ ಮಾಡಲಾಗ್ತಿದೆ. ಸಿನಿಮಾ ಪೇಂಟಿಂಗ್‌ನಂತೆ ಕಣ್ಣಿಗೆ ಕಟ್ಟಿದ ದೃಶ್ಯ ವೈಭವ ನೀಡಲಿದೆ ಎನ್ನಲಾಗ್ತಿದೆ. 8 ಬಾರಿ ಆಸ್ಕರ್ ಅವಾರ್ಡ್ ವಿನ್ ಆಗಿರೋ ಹಾಲಿವುಡ್ ವಿಎಫ್‌ಎಕ್ಸ್ ಸ್ಟುಡಿಯೋ ಇದರೊಟ್ಟಿಗೆ ಕೈ ಜೋಡಿಸಿದೆ.
ಇದೀಗ ರಾಮಾಯಣ ಚಿತ್ರದ ಟೀಸರ್ ಮೇಕಿಂಗ್ ಕ್ವಾಲಿಟಿ ನೋಡಿರೋ ಹಾಲಿವುಡ್‌ನ ಖ್ಯಾತ ನಿರ್ಮಾಪಕರೊಬ್ಬರು ಈ ಚಿತ್ರದ ಸಹ ನಿರ್ಮಾಣ ಮಾಡೋದಾಗಿ ಮುಂದೆ ಬಂದಿದ್ದಾರಂತೆ. ಅದೂ ಆಸ್ಕರ್ ಅವಾರ್ಡ್ ವಿನ್ನಿಂಗ್ ಸಿನಿಮಾ ಓಪನ್‌ಹೈಮರ್ ನಿರ್ಮಾಪಕ ಚಾರ್ಲ್ಸ್ ರೋವನ್ ಅನ್ನೋದು ಇಂಟರೆಸ್ಟಿಂಗ್. ಹೌದು.. ಸಾವಿರಾರು ಕೋಟಿ ಬ್ಯುಸಿನೆಸ್ ಮಾಡಿದ ಮಾಸ್ಟರ್‌ಪೀಸ್ ಸಿನಿಮಾ ಓಪನ್‌ಹೈಮರ್ ಬಗ್ಗೆ ಎಲ್ಲರಿಗೂ ಗೊತ್ತೇಯಿದೆ. ಇದೀಗ ಅದ್ರ ಪ್ರೊಡ್ಯೂಸರ್ ನಮಿತ್ ಮಲ್ಹೋತ್ರಾ ಹಾಗೂ ಯಶ್ ಜೊತೆ ಕೈ ಜೋಡಿಸಿರೋದು ವಿಶೇಷ.
ಈಗಾಗ್ಲೇ ಹಾಲಿವುಡ್‌ನ ಸಾಕಷ್ಟು ಟೆಕ್ನಿಷಿಯನ್ಸ್ ಬಂದು ರಾಮಾಯಣ ಸೆಟ್‌ನಲ್ಲಿ ಕೆಲಸ ಮಾಡ್ತಿದ್ದಾರೆ. ಇಡೀ ವಿಶ್ವದ ಗಮನ ಸೆಳೆದಂತಹ ಸಿನಿಮಾಗಳ ನಿರ್ಮಾಪಕರೊಬ್ಬರು ಅವರೇ ಮುತುವರ್ಜಿ ವಹಿಸಿ ಬಂದು, ರಾಮಾಯಣ ಟೀಂ ಸೇರಿಕೊಂಡಿರೋದು ಸಿನಿಮಾ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಇದ್ರಿಂದ ಭಾರತ ಬಿಟ್ಟು ಹೊರದೇಶಗಳಲ್ಲಿ ರಾಮಾಯಣ ಚಿತ್ರಗಳ ರಿಲೀಸ್, ಪ್ರಮೋಷನ್ಸ್ ಹಾಗೂ ಮಾರ್ಕೆಟಿಂಗ್‌ಗೆ ಪ್ಲಸ್ ಆಗಲಿದೆ. ಹಾಗಾಗಿ ಯಶ್ ಈ ಚಿತ್ರದಿಂದ ಹಾಲಿವುಡ್‌ಗೆ ಮತ್ತಷ್ಟು ಹತ್ತಿರ ಆಗಲಿದ್ದಾರೆ ಅನ್ನೋದ್ರಲ್ಲಿ ಯಾವುದೇ ಸಂದೇಹವಿಲ್ಲ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್