ಸಚಿನ್-ಸಂಗೀತಾ ಜೋಡಿಯ ಕಮಲ್ ಶ್ರೀದೇವಿ ಸಿನಿಮಾ ಈ ವಾರ ಪ್ರೇಕ್ಷಕರ ಮುಂದೆ ಬರ್ತಿದೆ. ತರುಣ್ ಸುಧೀರ್, ರಾಗಿಣಿಯಿಂದ ರಂಗೇರಿತು ಗ್ರ್ಯಾಂಡ್ ಪ್ರೀ-ರಿಲೀಸ್ ಇವೆಂಟ್. ಇಂಟರೆಸ್ಟಿಂಗ್ ಅಂದ್ರೆ ಇಡೀ ಇವೆಂಟ್‌ನಲ್ಲಿ ಡಿಬಾಸ್ ಡಿಬಾಸ್ ಅಂತ ದರ್ಶನ್ ಹೆಸರು ಮಾರ್ದನಿಸಿತು. ಹೇಗಿತ್ತು ಕಲರ್‌ಫುಲ್ ಫಂಕ್ಷನ್..?
ಟೀಸರ್, ಟ್ರೈಲರ್ ಹಾಗೂ ಹಾಡೊಂದರಿಂದಲೇ ಬಹು ದೊಡ್ಡ ಭರವಸೆ ಮೂಡಿಸಿರೋ ಕಮಲ್ ಶ್ರೀದೇವಿ ಮೂವಿ ಇದೇ ವಾರ ಅಂದ್ರೆ ಸೆಪ್ಟೆಂಬರ್ 19ಕ್ಕೆ ತೆರೆಗೆ ಬರ್ತಿದೆ. ಸಚಿನ್ ಚಲುವರಾಯಸ್ವಾಮಿ ಹಾಗೂ ಸಂಗೀತಾ ಭಟ್ ಜೋಡಿಯ ಈ ಸಿನಿಮಾ ಸ್ಯಾಂಪಲ್ಸ್‌ನಿಂದ ವೆರಿ ವೆರಿ ಇಂಟರೆಸ್ಟಿಂಗ್ ಅನಿಸಿಕೊಂಡಿದ್ದು, ಇಬ್ಬರಿಗೂ ಭರ್ಜರಿ ಕಂಬ್ಯಾಕ್ ಚಿತ್ರ ಕೂಡ ಆಗಲಿದೆ.
ತರುಣ್ – ರಾಗಿಣಿ ರಂಗು.. ಹಿರಿಯ ಕಲಾವಿದರಿಗೆ ಗೌರವ..!
ಬೆಂಗಳೂರಲ್ಲಿ ಕಡಿಮೆ ಆಗ್ತಿದ್ದಾರಾ ಕನ್ನಡಿಗರು? ಹೀಗಂದರೇಕೆ?
ಸುನಿಲ್ ನಿರ್ದೇಶನದ ಈ ಸಿನಿಮಾನ ಸಚಿನ್ ಹಾಗೂ ರಾಜವರ್ಧನ್ ಇಬ್ಬರೂ ನಿರ್ಮಾಣ ಮಾಡಿದ್ದಾರೆ. ಅಷ್ಟೇ ಅಲ್ಲ, ರಾಜವರ್ಧನ್ ಈ ಚಿತ್ರಕ್ಕೆ ಕ್ರಿಯೇಟಿವ್ ಹೆಡ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಜಾನರ್‌ನ ಈ ಕಮಲ್ ಶ್ರೀದೇವಿಯಲ್ಲಿ ಕಿಶೋರ್, ರಮೇಶ್ ಇಂದಿರಾ, ಬಿರಾದಾರ್, ಉಮೇಶ್ ಸೇರಿದಂತೆ ಸಾಕಷ್ಟು ಮಂದಿ ಕಲಾವಿದರ ದಂಡಿದೆ.
ರಿಲೀಸ್‌ಗೂ ಮುನ್ನ ಮಂತ್ರಿ ಮಾಲ್‌ನಲ್ಲಿ ನಡೆದ ಪ್ರೀ ರಿಲೀಸ್ ಇವೆಂಟ್ ಸಖತ್ ಕಲರ್‌ಫುಲ್ ಆಗಿತ್ತು. ಅಲ್ಲಿ ಚಿತ್ರತಂಡ, ಹಿರಿಯ ಕಲಾವಿದರುಗಳಿಗೆ ವಿಶೇಷ ಗೌರವ ಅರ್ಪಿಸಿದ್ದು ಇಂಟರೆಸ್ಟಿಂಗ್. ಸೆನ್ಸೇಷನಲ್ ಡೈರೆಕ್ಟರ್ ತರುಣ್ ಸುಧೀರ್ ಹಾಗೂ ನಟಿ ರಾಗಿಣಿ ಕಾರ್ಯಕ್ರಮಕ್ಕೆ ಆಗಮಿಸಿ, ಚಿತ್ರತಂಡಕ್ಕೆ ಶುಭ ಕೋರಿದ್ರು.
ಸಂಗೀತಾ ಭಟ್ ಮಾತಾಡ್ತಾ ನಮ್ಮ ಬೆಂಗಳೂರಲ್ಲಿ ಯಾಕೋ ಕನ್ನಡಿಗರು ಕಮ್ಮಿ ಆಗ್ತಿದ್ದಾರೆ ಅನಿಸ್ತಿದೆ ಅಂತ ಕಳವಳ ವ್ಯಕ್ತಪಡಿಸಿದ್ರು. ರಾಜವರ್ಧನ್ ಇಂದಲೇ ಈ ಚಿತ್ರ ಮಾಡಿದೆ ಅಂತ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ರು.
ನಟ ಸಚಿನ್ ಹಾಗೂ ರಾಜವರ್ಧನ್ ಕಮಲ್ ಶ್ರೀದೇವಿ ಬಗ್ಗೆ ಮಾತಾಡಿ, ನಟ ದರ್ಶನ್ ಬಗ್ಗೆಯೂ ಮುಕ್ತವಾಗಿ ಮಾತನಾಡಿದ್ರು. ಕಾರ್ಯಕ್ರಮ ನೋಡಲು ಸುತ್ತುವರಿದಿದ್ದ ಪ್ರೇಕ್ಷಕರ ಬಾಯಿಂದ ಡಿಬಾಸ್ ಡಿಬಾಸ್ ಅಂತ ದರ್ಶನ್ ಹೆಸರು ಮಾರ್ದನಿಸುತ್ತಿತ್ತು. ಹಾಗಾಗಿ ಎಲ್ಲಾ ಪಕ್ಕಕ್ಕಿಟ್ಟು ಡೆವಿಲ್ ಸಿನಿಮಾಗೆ ಪ್ರಮೋಷನ್ಸ್ ಮಾಡ್ತೀವಿ ಅಂತ ರಾಜವರ್ಧನ್ ಹಾಗೂ ಸಚಿನ್ ಹೇಳಿದ್ದು ಇಂಟರೆಸ್ಟಿಂಗ್.
ಒಟ್ಟಾರೆ ಕೊಡೋ ಕಾಸಿಗೆ ಮೋಸ ಇಲ್ಲದಂತೆ ಮಸ್ತ್ ಮನರಂಜನೆ ಪಡೆಯಬಹುದಾದ ಚಿತ್ರವಾಗಿ ಕಮಲ್ ಶ್ರೀದೇವಿ ಹೊರಹೊಮ್ಮಲಿದೆ. ಇಡೀ ಸಿನಿಮಾ ನೋಡುಗರನ್ನ ಸೀಟ್ ಎಡ್ಜ್‌ನಲ್ಲಿ ಕೂತು ಎಂಜಾಯ್ ಮಾಡುವಂತೆ ಎಂಗೇಜಿಂಗ್ ಆಗಿರೋ ಕಥೆ, ಪಾತ್ರಗಳು ಇಲ್ಲಿರೋದು ಪ್ಲಸ್ ಪಾಯಿಂಟ್ ಆಗಲಿದೆ.