ಪವಿತ್ರಾ ಗೌಡ, ಕನ್ನಡ ಚಿತ್ರರಂಗದಲ್ಲೂ ತಮ್ಮ ತಮ್ಮ ರೆಡ್ ಕಾರ್ಪೆಟ್ ಸ್ಟುಡಿಯೋ ಮೂಲಕ ಫ್ಯಾಷನ್ ಜಗತ್ತಿನಲ್ಲೂ ಗುರುತಿಸಿಕೊಂಡಿದ್ದಾರೆ. ಆದರೆ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲುವಾಸ ಅನುಭವಿಸಿದಾಗ, ರೆಡ್ ಕಾರ್ಪೆಟ್ ಸ್ಟುಡಿಯೋ ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿತ್ತು. ಈಗ ಪವಿತ್ರಾ ಗೌಡ ಅವರ ಪುತ್ರಿ ಖುಷಿ ಗೌಡ ಈ ಸ್ಟುಡಿಯೋವನ್ನು ಮತ್ತೆ ಮುಂದುವರೆಸಿದ್ದಾರೆ. ಇದರ ಜೊತೆಗೆ, ಗ್ಯಾರಂಟಿ ನ್ಯೂಸ್‌ನ ವರದಿಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆಯೊಂದನ್ನು ಹಂಚಿಕೊಂಡು ಗಮನ ಸೆಳೆದಿದ್ದಾರೆ.
ಗ್ಯಾರಂಟಿ ನ್ಯೂಸ್‌ನ ಸುದ್ದಿಯ ವಿಡಿಯೋವನ್ನು ಪವಿತ್ರಗೌಡ ಮಗಳು ಖುಷಿ ಗೌಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, “ನಾವು ಯಾವುದೇ ಸಂದರ್ಭದಲ್ಲೂ ರೆಡ್ ಕಾರ್ಪೆಟ್ ಸ್ಟುಡಿಯೋವನ್ನು ಮುಚ್ಚುವುದಿಲ್ಲ” ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಈ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಖುಷಿಯ ಧೈರ್ಯ ಮತ್ತು ಸ್ಟುಡಿಯೋವನ್ನು ಮುಂದುವರಿಸುವ ಛಲಕ್ಕೆ ಶ್ಲಾಘನೆಗಳು ಕೇಳಿಬಂದಿವೆ.
ರೆಡ್ ಕಾರ್ಪೆಟ್ ಸ್ಟುಡಿಯೋ, ಪವಿತ್ರಾ ಗೌಡರ ಫ್ಯಾಷನ್ ಉದ್ಯಮದ ಪ್ರಮುಖ ಭಾಗವಾಗಿದೆ. ಈ ಸ್ಟುಡಿಯೋ ಆಕರ್ಷಕ ವಿನ್ಯಾಸಗಳು ಮತ್ತು ಗುಣಮಟ್ಟದ ಉತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ಆದರೆ, ಕಳೆದ ಎಂಟು ತಿಂಗಳಿಂದ ಜೈಲುವಾಸದಿಂದಾಗಿ ಸ್ಟುಡಿಯೋದ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಫೆಬ್ರವರಿ 14, 2025ರಂದು, ಪ್ರೇಮಿಗಳ ದಿನದಂದು, ಪವಿತ್ರಾ ಗೌಡ ತಮ್ಮ ಸ್ಟುಡಿಯೋವನ್ನು ರೀಲಾಂಚ್ ಮಾಡಿದರು. ಈ ಸಂದರ್ಭದಲ್ಲಿ ಖುಷಿ ಜೊತೆಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.