ಧ್ರುವ ಸರ್ಜಾ ಮೇಲೆ ಕೋಟ್ಯಂತರ ರೂಪಾಯಿ ವಂಚನೆ ಆರೋಪ ಮಾಡಿ, ಮುಂಬೈನಲ್ಲಿ FIR ದಾಖಲಿಸಿದ್ದ ನಿರ್ದೇಶಕ ರಾಘವೇಂದ್ರ ಹೆಗಡೆ, ಕೊನೆಗೂ ಮೌನ ಮುರಿದಿದ್ದಾರೆ. ಧ್ರುವ ಸರ್ಜಾ ಮ್ಯಾನೇಜರ್ ಅಶ್ವಿನ್ ಮಾಧ್ಯಮ ಹೇಳಿಕೆಗಳಿಗೆಲ್ಲಾ ಸ್ಪಷ್ಟನೆ ನೀಡಿದ್ದಾರೆ. ಧ್ರುವ ಸರ್ಜಾರಿಂದ ನಂಗೆ ಮೆಂಟಲ್ ಟಾರ್ಚರ್ ಎಂದಿರೋ ಹೆಗಡೆ, ನಾನು ಕನ್ನಡ ವಿರೋಧಿ ಅಲ್ಲ ಎಂದಿದ್ದಾರೆ. ಅದ್ರ ಎಕ್ಸ್‌ಕ್ಲೂಸಿವ್ ರಿಪೋರ್ಟ್ ಇಲ್ಲಿದೆ.
- ಡೈರೆಕ್ಟರ್‌ಗೆ ಧ್ರುವ ಟಾರ್ಚರ್..? 3.15ಕೋಟಿ ಆಯ್ತಾ 9.5ಕೋಟಿ?
- 8 ವರ್ಷ ಕಾದಿದ್ದಕ್ಕೆ ಹಣವೂ ಇಲ್ಲ ಸಿನಿಮಾನೂ ಇಲ್ಲ ಎಂದ ಹೆಗಡೆ
- ಅರ್ಜುನ್ ಸರ್ಜಾ- ಧ್ರುವ ಮೀಟಿಂಗ್‌ನಲ್ಲಿ ಅಂದು ಆಗಿದ್ದೇನು..?!
- ಕನ್ನಡದಲ್ಲೇ ಸಿನಿಮಾ-ಸೀರಿಯಲ್.. ಕನ್ನಡ ವಿರೋಧಿ ಅಂದವ್ರಿಗೆ ಸ್ಪಷ್ಟನೆ
ಡಿಬಾಸ್ ದರ್ಶನ್‌ಗೆ 2016ರಲ್ಲಿ ಜಗ್ಗುದಾದಾ ಸಿನಿಮಾನ ನಿರ್ದೇಶಿಸಿ, ನಿರ್ಮಿಸಿದ್ದ ರಾಘವೇಂದ್ರ ಹೆಗಡೆ, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜೊತೆ ಎರಡನೇ ಸಿನಿಮಾ ಮಾಡಬೇಕಿತ್ತು. ಆದ್ರೆ ಎಂಟು ವರ್ಷಗಳಿಂದ ಇಂದಿನವರೆಗೆ ರಾಘವೇಂದ್ರ ಹೆಗಡೆ ಯಾವುದೇ ಸಿನಿಮಾ ಮಾಡಿಲ್ಲ. ಮಾಡಲಾಗಿಲ್ಲ. ಅದಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಧ್ರುವ ಸರ್ಜಾ ಅವರೇ ಕಾರಣ ಎನ್ನಲಾಗ್ತಿದೆ.
ಯೆಸ್.. ಎಂಟು ವರ್ಷಗಳ ಹಿಂದೆಯೇ ಸುಮಾರು 3 ಕೋಟಿ 15 ಲಕ್ಷ ಬೃಹತ್ ಮೊತ್ತದ ಹಣವನ್ನು ಅಡ್ವಾನ್ಸ್ ಆಗಿ ಧ್ರುವ ಸರ್ಜಾಗೆ ನೀಡಿ, ಸಿನಿಮಾ ಮಾಡಲು ಒಪ್ಪಂದ ಮಾಡಿಕೊಂಡಿದ್ದ ರಾಘವೇಂದ್ರ ಹೆಗಡೆ, ಮೂಲತಃ ಕನ್ನಡದವರು. ಕರಾವಳಿಯಿಂದ ಹೊಟ್ಟೆ ಪಾಡಿಗಾಗಿ ಮಾಯಾನಗರಿ ಮುಂಬೈಗೆ ತೆರಳಿ, ಅಲ್ಲಿ ಹೋಟೆಲ್ ವೆಯ್ಟರ್ ಆಗಿ, ಅಸಿಸ್ಟೆಂಟ್ ಡೈರೆಕ್ಟರ್ ಆಗಿ, ಸಂಕಲನಕಾರನಾಗಿ, ಇಂದು ದೊಡ್ಡದೊಂದು ನಿರ್ಮಾಣ ಸಂಸ್ಥೆಯ ಮಾಲೀಕರಾಗಿ ಬೆಳೆದು ನಿಂತಿದ್ದಾರೆ.
ಧ್ರುವಗೆ ಅಡ್ವಾನ್ಸ್ ನೀಡಿ ಡೇಟ್ಸ್ ಪಡೆದಿದ್ದ ರಾಘವೇಂದ್ರ ಹೆಗಡೆಗೆ ಹಣವೂ ಇಲ್ಲ, ಸಿನಿಮಾಗೆ ಡೇಟ್ಸ್ ಕೂಡ ಇಲ್ಲವಾಗಿದೆ. ಹಾಗಾಗಿ ಇತ್ತೀಚೆಗೆ ಅವ್ರ ವಿರುದ್ಧ ಮುಂಬೈನ ಅಂಬೋಲಿ ಪೊಲೀಸ್ ಸ್ಟೇಷನ್‌ನಲ್ಲಿ ಎಫ್‌ಐಆರ್ ದಾಖಲಿಸಿದ್ರು. ಹಣ ವಂಚನೆ ಆರೋಪ ಹೊತ್ತಿರೋ ಧ್ರುವ ಪರ ಅವ್ರ ಮ್ಯಾನೇಜರ್ ಅಶ್ವಿನ್, ಅವೆಲ್ಲಾ ಸುಳ್ಳು ಆರೋಪಗಳು. ಕನ್ನಡದಲ್ಲಿ ಬ್ಯುಸಿನೆಸ್ ಆಗ್ತಿಲ್ಲ. ತಮಿಳು, ತೆಲುಗಿನಲ್ಲಿ ಸಿನಿಮಾ ಮಾಡೋಣ ಅಂದಿದ್ರು. ಅಲ್ಲದೆ ತಾನು ಮಾಡಿದ್ದ ಕಥೆ ಅಮರನ್ ಚಿತ್ರದ ಕಥೆಯಂತಿತ್ತು. ಹಾಗಾಗಿ ಕಥೆ ಸಿದ್ದವಿಲ್ಲ ಅಂತ ಅವರೇ ತಡ ಮಾಡಿದ್ರು ಎಂದಿದ್ರು.
ಈಗ ಅದಕ್ಕೆಲ್ಲಾ ಸ್ಪಷ್ಟನೆ ನೀಡಿರೋ ರಾಘವೇಂದ್ರ ಹೆಗಡೆ, ನಾನು ಕನ್ನಡ ವಿರೋಧಿ ಅಲ್ಲ. ಕನ್ನಡದಲ್ಲೇ ಸಿನಿಮಾ, ಸೀರಿಯಲ್ ಮಾಡಿದ್ದೀನಿ. ಪರಭಾಷೆಗಳಲ್ಲಿ ಸಿನಿಮಾ ಮಾಡೋದಾದ್ರೆ ಅಲ್ಲಿನ ಸ್ಟಾರ್‌ಗಳ ಜೊತೆಗೇ ಸಿನಿಮಾ ಮಾಡ್ತಿದ್ದೆ. ಇವ್ರು ಪ್ಯಾನ್ ಇಂಡಿಯಾ ಸಿನಿಮಾ ಮಾಡ್ಬೇಕು ಅಂತ ಅರ್ಜುನ್ ಸರ್ಜಾ ಜೊತೆಗಿನ ಮೀಟಿಂಗ್‌ನಲ್ಲಿ 2025ರ ಫೆಬ್ರವರಿ 4ರಂದು ಹೇಳಿದ್ರು ಅಂತ ಎಲ್ಲಾ ಆರೋಪಗಳಿಗೆ ಉತ್ತರ ನೀಡಿದ್ದಾರೆ.
ಅಲ್ಲದೆ, ನಾನು ಜಗ್ಗುದಾದಾ ಬಳಿಕ ಅಷ್ಟು ವರ್ಷಗಳಿಂದ ಸಿನಿಮಾ ಮಾಡಲಿಲ್ಲ ಅಂದ್ರೆ ಅದಕ್ಕೆ ಧ್ರುವನೇ ಕಾರಣ. ನನಗೆ ಅವರಿಂದ ಮೆಂಟಲ್ ಟಾರ್ಚರ್ ಆಗಿಬಿಟ್ಟಿದೆ. ಆದ್ರೂ ಬೇಜಾರಿಲ್ಲ. ನನ್ನ ದುಡ್ಡು ನನಗೆ ಸಿಕ್ರೆ ಸಾಕು. ಅಶ್ವಿನ್ ಇತ್ತೀಚೆಗೆ ಬಂದವ್ರು. ನನ್ನ ಮತ್ತು ಧ್ರುವ ಸರ್ಜಾ ನಡುವಿನ ಒಪ್ಪಂದ, ಮಾತುಕತೆಗಳ ಬಗ್ಗೆ ಅಶ್ವಿನ್‌ಗೆ ಗೊತ್ತಿಲ್ಲ ಅಂತ ತಿರುಗೇಟು ನೀಡಿದ್ದಾರೆ.
ಒಟ್ಟಾರೆ ಕೋರ್ಟ್ ಮೊರೆ ಹೋಗಿರೋ ರಾಘವೇಂದ್ರ ಹೆಗಡೆ, ನಟ ಧ್ರುವ ಸರ್ಜಾ ವಿರುದ್ಧ ಕಾನೂನು ಕಟ್ಟಳೆ ಅಂತ ಕಸಿಡಿದೆದ್ದು ನಿಂತಿದ್ದಾರೆ. ಕಾನೂನು ಸಮರ ನಡೆಸ್ತಿರೋ ಹೆಗಡೆ, ಕಾನೂನಿನಾತ್ಮಕವಾಗಿ, ನ್ಯಾಯಯುತವಾಗಿ ನನ್ನ ಹಣ ನನಗೆ ದಕ್ಕಿದ್ರೆ ಸಾಕು ಅಂತಿದ್ದಾರೆ. ಇನ್ನು ಇದಕ್ಕೆ ಧ್ರುವ ಸರ್ಜಾ ಯಾವ ರೀತಿ ಪ್ರತ್ಯುತ್ತರ ನೀಡ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್