ಕರ್ನಾಟಕದಾದ್ಯಂತ ಇಂದು (ಜುಲೈ 22) ಭಾರಿ ಮಳೆಯ ಮುನ್ಸೂಚನೆ ಇದ್ದು, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಮತ್ತು ಶಿವಮೊಗ್ಗಕ್ಕೆ ಭಾರತೀಯ ಹವಾಮಾನ ಇಲಾಖೆ (IMD) ಆರೆಂಜ್ ಅಲರ್ಟ್ ಘೋಷಿಸಿದೆ.
ಈ ಜಿಲ್ಲೆಗಳಲ್ಲಿ ಭಾರೀ ರಿಂದ ಅತಿ ಭಾರರೀ ಮಳೆಯಾಗುವ ಸಾಧ್ಯತೆಯಿದೆ, ಜೊತೆಗೆ 30-40 ಕಿ.ಮೀ./ಗಂಟೆ ವೇಗದ ಗಾಳಿಯೂ ಇರಬಹುದು. ಮೈಸೂರು, ಮಂಡ್ಯ, ಚಾಮರಾಜನಗರ, ಯಾದಗಿರಿ, ರಾಯಚೂರು, ಕಲಬುರಗಿ, ಹಾವೇರಿ, ಧಾರವಾಡ, ಬೀದರ್, ಮತ್ತು ಬೆಳಗಾವಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ, ಅಂದರೆ ಈ ಜಿಲ್ಲೆಗಳಲ್ಲಿ ಮಧ್ಯಮ ರಿಂದ ಭಾರರೀ ಮಳೆಯಾಗಬಹುದು. ತುಮಕೂರು, ರಾಮನಗರ, ಕೋಲಾರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಮತ್ತು ಕೊಪ್ಪಳದಲ್ಲಿ ಸಾಧಾರಣ ಮಳೆಯ ಮುನ್ಸೂಚನೆ ಇದೆ.
ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಈ ಪ್ರದೇಶಗಳು ದಕ್ಷಿಣ-ಪಶ್ಚಿಮ ಮಾನ್ಸೂನ್‌ನಿಂದಾಗಿ ಸಾಮಾನ್ಯವಾಗಿ ಹೆಚ್ಚಿನ ಮಳೆಯನ್ನು ಪಡೆಯುತ್ತವೆ, ವಿಶೇಷವಾಗಿ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ.
ರಾಯಚೂರು, ಥೊಂಡೇಬಾವಿ, ಹೊನ್ನಾವರ, ಗೇರುಸೊಪ್ಪ, ಕುಂದಾಪುರ, ಭಾಗಮಂಡಲ, ನಾಪೋಕ್ಲು, ಆಗುಂಬೆ, ಮಂಗಳೂರು, ಬಾದಾಮಿ, ವಿಜಯಪುರ, ಮಂಕಿ, ಶಕ್ತಿನಗರ, ಕೋಟಾ, ಕಾರವಾರ, ಸಿದ್ದಾಪುರ, ಗೋಕರ್ಣ, ಬಂಟವಾಳ, ಮಾಣಿ, ಕುಮಟಾ, ಸುಳ್ಯ, ಶಿರಾಲಿ, ಬೆಳ್ತಂಗಡಿ, ಉಡುಪಿ, ಮುದ್ದೇಬಿಹಾಳ, ಮಾನ್ವಿ, ರೋಣ, ಹಾವೇರಿ, ಪೊನ್ನಂಪೇಟೆ, ಕದ್ರಾ, ಯಲ್ಲಾಪುರ, ಧರ್ಮಸ್ಥಳ, ಜೋಯ್ಡಾ, ಗುರುಮಿಟ್ಕಲ್, ನರಗುಂದ, ಗೋಕಾಕ್, ಹುಕ್ಕೇರಿ, ಮುಂಡಗೋಡು, ಹಿಡಕಲ್, ತಿಪಟೂರು, ಪಾವಗಡ, ಕೊಪ್ಪ, ಸೇಡಬಾಳ, ರಾಯಲ್ಪಾಡು, ಕಮ್ಮರಡಿ, ಮಧುಗಿರಿ, ಕೋಲಾರ, ಹೊನ್ನಾಳಿ, ಶೃಂಗೇರಿ, ಹರಪನಹಳ್ಳಿ, ಪರಶುರಾಂಪುರ, ಸೋಮವಾರಪೇಟೆ, ಬೆಳ್ಳೂರು, ತ್ಯಾಗರ್ತಿ, ಮತ್ತು ಎಚ್‌ಡಿ ಕೋಟೆಯಲ್ಲಿ ಮಳೆ ದಾಖಲಾಗಿದೆ.
ಬೆಂಗಳೂರಿನ ವಾತಾವರಣ
ಬೆಂಗಳೂರಿನಲ್ಲಿ ಸೋಮವಾರ (ಜುಲೈ 21) ಭಾರಿ ಮಳೆಯಾಗಿದ್ದು, ಜುಲೈ 22 ರಂದು ಮೋಡಕವಿದ ವಾತಾವರಣ ಮುಂದುವರಿಯಲಿದೆ. ಈ ಕೆಳಗಿನ ತಾಪಮಾನಗಳು ದಾಖಲಾಗಿವೆ:
- ಎಚ್‌ಎಎಲ್: ಗರಿಷ್ಠ 27.8°C, ಕನಿಷ್ಠ 19.6°C
- ನಗರ: ಗರಿಷ್ಠ 26.6°C, ಕನಿಷ್ಠ 19.5°C
- ಕೆಐಎಎಲ್: ಗರಿಷ್ಠ 28.6°C, ಕನಿಷ್ಠ 20.0°C
- ಜಿಕೆವಿಕೆ: ಗರಿಷ್ಠ 27.2°C, ಕನಿಷ್ಠ 19.6°C
ಕರಾವಳಿ ಮತ್ತು ಇತರ ಪ್ರದೇಶಗಳ ತಾಪಮಾನ
- ಹೊನ್ನಾವರ: ಗರಿಷ್ಠ 26.0°C, ಕನಿಷ್ಠ 23.4°C
- ಕಾರವಾರ: ಗರಿಷ್ಠ 26.4°C, ಕನಿಷ್ಠ 24.0°C
- ಮಂಗಳೂರು ಏರ್‌ಪೋರ್ಟ್: ಗರಿಷ್ಠ 27.0°C, ಕನಿಷ್ಠ 23.0°C
- ಶಕ್ತಿನಗರ: ಗರಿಷ್ಠ 26.5°C, ಕನಿಷ್ಠ 22.5°C
- ಬೆಳಗಾವಿ ಏರ್‌ಪೋರ್ಟ್: ಗರಿಷ್ಠ 27.4°C, ಕನಿಷ್ಠ 21.0°C
- ಬೀದರ್: ಗರಿಷ್ಠ 32.2°C, ಕನಿಷ್ಠ 22.6°C
- ವಿಜಯಪುರ: ಗರಿಷ್ಠ 31.0°C
- ಧಾರವಾಡ: ಗರಿಷ್ಠ 27.8°C, ಕನಿಷ್ಠ 20.0°C
- ಗದಗ: ಗರಿಷ್ಠ 29.2°C, ಕನಿಷ್ಠ 21.2°C
- ಕಲಬುರಗಿ: ಗರಿಷ್ಠ 33.8°C, ಕನಿಷ್ಠ 23.5°C
-
ಹಾವೇರಿ: ಗರಿಷ್ಠ 23.0°C, ಕನಿಷ್ಠ 21.2°C
- ಕೊಪ್ಪಳ: ಗರಿಷ್ಠ 30.7°C, ಕನಿಷ್ಠ 24.1°C
- ರಾಯಚೂರು: ಗರಿಷ್ಠ 35.8°C, ಕನಿಷ್ಠ 22.0°C
ಮುನ್ನೆಚ್ಚರಿಕೆ ಕ್ರಮಗಳು:
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಮಳೆಯಿಂದಾಗಿ, ಜನರು ಸುರಕ್ಷಿತ ಕ್ರಮಗಳನ್ನು ಅನುಸರಿಸುವಂತೆ ಸರ್ಕಾರ ಮತ್ತು ಹವಾಮಾನ ಇಲಾಖೆ ಸೂಚಿಸಿದೆ. ಈ ಪ್ರದೇಶಗಳಲ್ಲಿ ಪ್ರವಾಹ ಸಾಧ್ಯತೆ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಭೂಕುಸಿತದ ಅಪಾಯವಿದೆ. ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ.