ಡೆವಿಲ್ ಸಿನಿಮಾದಲ್ಲಿ ಜೂನಿಯರ್ ದರ್ಶನ್ ವಿನೀಶ್ ಕೂಡ ಬಣ್ಣ ಹಚ್ಚಿದ್ದಾರೆ. ತಂದೆ ಸಿನಿಮಾದಲ್ಲಿ ಮಗ ನಟಿಸೋದು ಹೊಸತೇನಲ್ಲ. ಆದ್ರೆ ಈ ಬಾರಿ ಅದನ್ನ ಮೇಕಿಂಗ್‌ನಲ್ಲೇ ರಿವೀಲ್ ಮಾಡಿದೆ ಚಿತ್ರತಂಡ. ಇದರೊಟ್ಟಿಗೆ ಕಳೆದ ವರ್ಷ ಆಗದೇ ಇರೋದನ್ನ ಈ ವರ್ಷ ನೆರವೇರಿಸಿರೋ ದಾಸನ ಸಂಕಲ್ಪದ ಕಹಾನಿ ನೀವೊಮ್ಮೆ ಓದಲೇಬೇಕು.
- ಡೆವಿಲ್‌ನಲ್ಲಿ Jr. ದಚ್ಚು.. ಡಿಬಾಸ್‌ಗೆ ಚಾಮುಂಡಿ ದರ್ಶನ
- ಮೇಕಿಂಗ್ ಝಲಕ್‌ನಲ್ಲಿ ವಿನೀಶ್ ಜೊತೆ ಪಾತ್ರ ಪರಿಚಯ
ಕಾಟೇರ ಚಿತ್ರದಲ್ಲಿ ಡಿಬಾಸ್ ದರ್ಶನ್ ಅದ್ಯಾಕಾದ್ರೂ ಜೈಲಿಗೆ ಹೋಗುವ ಸೀನ್ ಇಟ್ರೋ ಏನೋ.. ವಿಧಿಯ ಆಟ, ನಿಜ ಜೀವನದಲ್ಲೂ ಜೈಲೂಟ ಸವಿಯುವಂತಾಯ್ತು. ಆದ್ರೀಗ ಹೊರಬಂದಿರೋ ದಾಸ, ಡೆವಿಲ್ ಸಿನಿಮಾಗಾಗಿ ಸಿಕ್ಕಾಪಟ್ಟೆ ಎಫರ್ಟ್ ಹಾಕ್ತಿದ್ದಾರೆ. ಜಿಮ್ ವರ್ಕೌಟ್ ಜೊತೆಗೆ ಡ್ಯಾನ್ಸ್ ಕೂಡ ಪ್ರಾಕ್ಟೀಸ್ ಮಾಡ್ತಿದ್ದಾರೆ. ಅಷ್ಟೇ ಅಲ್ಲ, ಇತ್ತೀಚೆಗೆ ಈ ಸಿನಿಮಾ ಶೂಟಿಂಗ್‌ಗಾಗಿ ಉದಯ್‌ಪುರಗೆ ತೆರಳಿತ್ತು. ಅಲ್ಲಿನ ಬಿಗ್ ಪ್ಯಾಲೆಸ್‌ವೊಂದರಲ್ಲಿ ಚಿತ್ರೀಕರಣ ನಡೆಸಿದ್ದರ ಮೇಕಿಂಗ್ ಝಲಕ್ ರಿವೀಲ್ ಮಾಡಿದೆ ಟೀಂ.
ಇದರಲ್ಲಿ ಡಿಬಾಸ್ ದರ್ಶನ್ ಜೊತೆಗೆ ರಚನಾ ರೈ, ಅಚ್ಯುತ್ ಕುಮಾರ್ ಸೇರಿದಂತೆ ಬಹುತೇಕ ಎಲ್ಲಾ ಕಲಾವಿದರ ಕ್ಯಾರೆಕ್ಟರ್ಸ್ ರಿವೀಲ್ ಆಗಿವೆ. ಮಿಲನ ಪ್ರಕಾಶ್ ನಿರ್ದೇಶಿಸಿ, ನಿರ್ಮಿಸ್ತಿರೋ ಡೆವಿಲ್, ಸಖತ್ ರಿಚ್ ಆಗಿ ನಿರ್ಮಾಣ ಆಗ್ತಿದೆ. ಇನ್ನು ಈ ಸಿನಿಮಾದ ಶೂಟಿಂಗ್‌ಗಾಗಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ಮಗ ವಿನೀಶ್ ಕೂಡ ಡಿಬಾಸ್ ಜೊತೆಗೇ ಬೀಡು ಬಿಟ್ಟಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಮೇಕಿಂಗ್ ವಿಡಿಯೋದಲ್ಲಿ ಅವರುಗಳು ಕೂಡ ಕಾಣ್ತಾರೆ. ಅಷ್ಟೇ ಅಲ್ಲ, ಜೂನಿಯರ್ ದರ್ಶನ್ ವಿನೀಶ್ ಇಲ್ಲಿ ಸಣ್ಣ ಪಾತ್ರವೊಂದಕ್ಕೆ ಬಣ್ಣ ಕೂಡ ಹಚ್ಚಿದ್ದಾರೆ.
ಡೆವಿಲ್ ಸಿನಿಮಾದಲ್ಲಿ ವಿನೀಶ್ ನಟಿಸಿರೋ ಸುದ್ದಿ ತಿಳಿದ ಡಿಬಾಸ್ ಫ್ಯಾನ್ಸ್ ಸಖತ್ ಖುಷಿಯಾಗಿದ್ದಾರೆ. ಇಷ್ಟು ದಿನ ದಚ್ಚು ಚಿತ್ರಗಳಲ್ಲಿ ವಿನೀಶ್ ನಟಿಸಿದ್ರೆ ಸಿನಿಮಾ ರಿಲೀಸ್ ಬಳಿಕ ಸುದ್ದಿ ಆಗ್ತಿತ್ತು. ಆದ್ರೀಗ ಮೇಕಿಂಗ್ ಹಂತದಲ್ಲೇ ಅದು ಟಾಕ್ ಆಫ್ ದಿ ಟೌನ್ ಆಗಿದೆ. ಇನ್ನು ವಿನೀಶ್ ನಟನೆಗೆ ತಾಯಿ ವಿಜಯಲಕ್ಷ್ಮೀ ಕೂಡ ಸಾಥ್ ನೀಡಿದ್ದಾರೆ. ಇದು ಒಂಥರಾ ತೂಗುದೀಪ ದರ್ಶನ್ ಫ್ಯಾಮಿಲಿಗೆ ಪಾಸಿಟಿವ್ ವೈಬ್ ತಂದಿದೆ.
- ಆಷಾಢ ಶುಕ್ರವಾರ ತಾಯಿ ಚಾಮುಂಡಿಗೆ ವಿಶೇಷ ಪೂಜೆ
- ಕಳೆದ ವರ್ಷ ಜೈಲಲ್ಲಿ.. ಈ ವರ್ಷ ಚಾಮುಂಡಿ ತಪ್ಪಲಲ್ಲಿ..!
ಆಷಾಢ ಶುಕ್ರವಾರ ಹಿನ್ನೆಲೆ ನಟ ದರ್ಶನ್ ಪತ್ನಿ ಹಾಗೂ ಮಗನ ಸಮೇತ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದು, ತನ್ನ ಕಷ್ಟಗಳನ್ನು ಒಪ್ಪಿಸಿದ್ದಾರಂತೆ ದಚ್ಚು. ಅಂದಹಾಗೆ ದರ್ಶನ್ ಕಳೆದ ವರ್ಷ ಆಷಾಢ ಪೂಜೆಗೆ ಜೈಲಲ್ಲಿ ಇದ್ದರು. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಅಂದರ್ ಆಗಿದ್ದರು. ಹಾಗಾಗಿ ಕಳೆದ ವರ್ಷ ಆಗದೇ ಇರೋದನ್ನ ಈ ವರ್ಷ ನನಸು ಮಾಡಿಕೊಂಡಿದ್ದಾರೆ.
ಇನ್ನು ಚಾಲೆಂಜಿಂಗ್ ಸ್ಟಾರ್ ಕಾರ್ ಬರ್ತಿದ್ದಂತೆ ಅಭಿಮಾನಿಗಳ ದಂಡೇ ಜಮಾಯಿಸಿದೆ. ಬಾಸ್ ಬಾಸ್ ಅಂತ ಕೂಗಿ ದರ್ಶನ್ ಮೇಲಿನ ಅಭಿಮಾನ ವ್ಯಕ್ತಪಡಿಸಿದ್ದಾರೆ. ಅದಕ್ಕೆ ದರ್ಶನ್ ಕೂಡ ಕೈ ಬೀಸಿ, ನಮಸ್ಕರಿಸುತ್ತಾ ಎಲ್ಲರಿಗೂ ನಗು ಬೀರಿದ್ದಾರೆ. ಅದೇನೇ ಇರಲಿ, ಚಾಮುಂಡಿ ತಾಯಿಯ ಶಕ್ತಿಗೂ, ದರ್ಶನ್ ಭಕ್ತಿಗೂ ಅವಿನಾಭಾವ ಸಂಬಂಧವಿದೆ. ದರ್ಶನ್ ಮತ್ತೆ ಬಾಕ್ಸ್ ಆಫೀಸ್ ಸುಲ್ತಾನನಾಗಿ ಅಬ್ಬರಿಸಿ, ಆರ್ಭಟಿಸಲಿ, ಚಿತ್ರರಂಗಕ್ಕೆ ಆಸರೆಯಾಗಿ ನಿಲ್ಲಲಿ ಅನ್ನೋದು ನಮ್ಮ ಆಶಯ.