ಐಟಂ ಸಾಂಗ್ ಬಂದ್ರೆ ಸಾಕು ಕಣ್ಮುಚ್ಚಿಕೊಳ್ತಿದ್ದ ಪ್ರೇಕ್ಷಕರಿಗೆ ಈಗ ಹೀರೋಯಿನ್‌ಗಳ ಬೆಡಗು ಬಿನ್ನಾಣ, ಮೈಮಾಟವೇ ಹೆಚ್ಚಾಗಿ ರುಚಿಸುವಂತಾಗಿದೆ. ಅದು ಸಿನಿಮಾಗೆ ಮೈಲೇಜ್ ಆದ್ರೆ, ನೋಡುಗರ ಕಣ್ಣಿಗೆ ಹಬ್ಬ. ಹಾಲಿವುಡ್ ಗ್ಲಾಮರ್ ಡಾಲ್‌ಗಳ ರೀತಿ ಟು-ಪೀಸ್‌ನಲ್ಲಿ ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಿರೋ ಚೆಂದುಳ್ಳಿ ಚೆಲುವೆಯರ ಹಾಟ್ ಸ್ಟೋರಿ.
ಸಿನಿಮಾ ಅಂದ್ರೇನೇ ಗ್ಲಾಮರ್. ಹಾಗಂತ ಹಾಲಿವುಡ್ ರೀತಿ ನಮ್ಮ ಭಾರತೀಯರ ಭಾವನೆಗಳಿಗೆ ಧಕ್ಕೆ ಬರುವ ರೇಂಜ್‌ಗೆ ನಟಿಮಣಿಯರ ಬಟ್ಟೆ ಬಿಚ್ಚಿಸಿ ಕುಣಿಸೋಕೆ ಆಗಲ್ವಲ್ವಾ..? ಆದ್ರೂ ಕೂಡ ಬರ್ತಾ ಬರ್ತಾ ನಮ್ಮ ಭಾರತೀಯ ಚಿತ್ರರಂಗ ಹಾಲಿವುಡ್‌ಗಿಂತ ಜಾಸ್ತಿ ಅದ್ವಾನ ಆಗ್ತಿದೆ.
ಬಟ್ಟೆ ಬಿಚ್ಚಿದಷ್ಟೂ ನಟಿಯರಿಗೆ ಸಂಭಾವನೆ ಜಾಸ್ತಿ ಅನ್ನುವಂತಾಗಿದೆ. ಅದಕ್ಕೆ ಇಲ್ಲಿರೋ ಹಾಟ್ ಬ್ಯೂಟಿಯರ ಕ್ಯೂಟೆಸ್ಟ್ ಫೋಟೋಸ್ ಹಾಗೂ ವಿಡಿಯೋಗಳೇ ಸಾಕ್ಷಿ.
ಒಂದು ಕಾಲದಲ್ಲಿ ಐಟಂ ಸಾಂಗ್‌ಗಳು ಬಂದ್ರೇನೇ ಕಣ್ಮುಚ್ಚಿಕೊಳ್ತಿದ್ರು ನಮ್ಮ ಪ್ರೇಕ್ಷಕರು. ಆದ್ರೀಗ ಅರೆಬರೆ ಬಟ್ಟೆ, ಹಸಿಬಿಸಿ ದೃಶ್ಯಗಳೇ ಸಿನಿಮಾದಲ್ಲಿ ಸೆಂಟರ್ ಆಫ್ ಅಟ್ರ್ಯಾಕ್ಷನ್. ಅದೇ ಸಿನಿಮಾದ ಜೀವಾಳ ಆಗಿಬಿಟ್ಟಿದೆ.
ಇನ್ನು ನಟಿಯರು ಎಕ್ಸ್‌ಪೋಸ್ ಅಥ್ವಾ ಕಿಸ್ಸಿಂಗ್ಸ್ ಸೀನ್ಸ್ ಮಾಡೋಕೆ ಅಂತಲೇ ಜಾಸ್ತಿ ಹಣ ಡಿಮ್ಯಾಂಡ್ ಮಾಡ್ತಿದ್ದಾರೆ. ನಿರ್ಮಾಪಕರು ಕೂಡ ಅಂಥದ್ದೊಂದು ಸೀನ್ ಸಿನಿಮಾದಲ್ಲಿ ಇರಲೇಬೇಕು ಅನ್ನೋ ಮನಸ್ಥಿತಿಗೆ ಬಂದಿದ್ದಾರೆ.
ಮಡಿ ಮೈಲಿಗೆ ಬಿಟ್ಟು, ತನ್ನ ದೇಹವನ್ನು ಆ ರೇಂಜ್‌ಗೆ ಬಿಚ್ಚಿ ತೋರಿಸೋದ್ರಲ್ಲಿ ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ, ಕಿಯಾರಾ ಅದ್ವಾನಿ, ದಿಶಾ ಪಟಾನಿ, ತೃಪ್ತಿ ದಿಮ್ರಿ ಮೊದಲ ಸಾಲಿನಲ್ಲಿ ನಿಲ್ತಾರೆ.
ಇನ್ನು ಇವರನ್ನ ಫಾಲೋ ಮಾಡ್ತಿರೋ ಸಮಂತಾ, ಶಾನ್ವಿ ಶ್ರೀವಾತ್ಸವ್, ಸಂಗೀತಾ ಭಟ್, ಜಾನ್ವಿ ಕಪೂರ್, ಕೇತಿಕಾ ಶರ್ಮಾ, ನೋರಾ ಫತೇಹಿ, ನಭಾ ನಟೇಶ್ ಕೂಡ ಅದೇ ಹಾದಿ ಹಿಡಿದಿದ್ದಾರೆ. ಅವರಿಗೇ ಇಲ್ಲದ ನಾಚಿಕೆ ನೋಡೋರಿಗೆ ಎಂಥದ್ದು ಅಲ್ಲವೇ..?