ಬಿಗ್‌ಬಾಸ್‌ನಿಂದ ಹೊರಬಂದ ನಂತರ, ನಿವೇದಿತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮೂಲಕ ಭಾರೀ ಜನಪ್ರಿಯತೆ ಗಳಿಸಿದ್ದಾರೆ. ಮಂಚದ ಮೇಲೆ, ಬಾತ್‌ರೂಮ್‌ನಲ್ಲಿ, ಅಥವಾ ಇತರ ಸ್ಥಳಗಳಲ್ಲಿ ತುಂಡುಡುಗೆಯಲ್ಲಿ ರೀಲ್ಸ್ ಮಾಡುವ ಮೂಲಕ ಆಕೆ ಗಮನ ಸೆಳೆಯುತ್ತಿದ್ದಾರೆ. ಆಕೆಯ ಈ ಶೈಲಿಯನ್ನು ಕೆಲವರು ‘ಅಶ್ಲೀಲ’ ಎಂದು ಟೀಕಿಸಿದರೆ, ಇನ್ನೊಂದು ವರ್ಗವು ಆಕೆಯ ರೀಲ್ಸ್‌ಗೆ ಫಿದಾ ಆಗುತ್ತದೆ. ಟ್ರೋಲ್‌ಗಳೇ ಆಕೆಗೆ ಪ್ರಚಾರವನ್ನು ಒದಗಿಸುತ್ತಿವೆ ಎನ್ನುವುದು ಆಕೆಯ ತಂತ್ರವಾಗಿರಬಹುದು ಎಂದು ಕೆಲವರು ಊಹಿಸುತ್ತಾರೆ.