ವರದಿ: ಮೂರ್ತಿ, ಬೀರಯ್ಯನಪಾಳ್ಯ, ಗ್ಯಾರಂಟಿ ನ್ಯೂಸ್, ನೆಲಮಂಗಲ
ಬೆಂಗಳೂರು ನಗರದ ನೆಲಗದರನಹಳ್ಳಿಯಲ್ಲಿ ಯುಗಾದಿ ಹಬ್ಬದಂದು ಸಂಭವಿಸಿದ ಒಂದು ಘಟನೆ ಇಡೀ ಸಂಸಾರವನ್ನ ಛಿದ್ರ ಛಿದ್ರ ಮಾಡಿ ಸ್ಥಳೀಯರಲ್ಲಿ ಭಾರೀ ಸಂಚಲನ ಮೂಡಿಸಿದೆ.
27 ವರ್ಷದ ರಾಮಕ್ಕ ಎಂಬ ಮಹಿಳೆ, ತನ್ನ ಪತಿ ಮಂಜುನಾಥ್ ಮತ್ತು ಮಕ್ಕಳೊಂದಿಗೆ ನೆಲಗದರನಹಳ್ಳಿಯಲ್ಲಿ ವಾಸವಾಗಿದ್ದರು. ಮಂಜುನಾಥ್ ಮತ್ತು ರಾಮಕ್ಕ 10 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದು, ಇಬ್ಬರು ಮಕ್ಕಳಾದ ಮೋಹನ್ (10) ಮತ್ತು ದೀಕ್ಷಿತಾ (8) ಸಹಿತ ಜೀವನ ನಡೆಸುತ್ತಿದ್ದರು.
ಜೀವನ ನಿರ್ವಹಣೆಗೆ ಸಾಕಷ್ಟು ವರ್ಷಗಳಿಂದ ಬಾರ್ ಆ್ಯಂಡ್ ರೆಸ್ಟೋರೆಂಟ್ ನಲ್ಲಿ ಮಂಜುನಾಥ ಕೆಲಸ ಮಾಡುತ್ತಿದ್ದನು.
ಪತ್ನಿ ನೋಡಲು ಸುಂದರವಾಗಿರುವುದರಿಂದ ಬಸವರಾಜ್ ಎಂಬ ಯುವಕ ಮನಸೋತು, ಎರಡು ಮಕ್ಕಳ ತಾಯಿ ಆಗಿದ್ರೂ ಅವಳನ್ನು ಕರೆದುಕೊಂಡು ಪರಾರಿಯಾಗಿದ್ದಾನೆ.
ಎರಡು ತಿಂಗಳ ಹಿಂದೆ ಯುಗಾದಿ ಹಬ್ಬದ ದಿನ, ಕ್ಷುಲ್ಲಕ ಕಾರಣಕ್ಕಾಗಿ ಪತಿ-ಪತ್ನಿಯ ನಡುವೆ ಜಗಳವಾಯಿತೆಂದು ತಿಳಿದು ಬಂದಿದೆ. ಈ ವೇಳೆ ನಡೆದ ಹಲ್ಲೆಯನ್ನೇ ನೆಪ ಮಾಡಿಕೊಂಡು, ಆಗಾಗ ಖ್ಯಾತೆ ತಗೆಯುತ್ತಿದ್ದಳು ರಾಮಕ್ಕ. ಅವಳು ಅತಿಯಾದ ಮೊಬೈಲ್ ಬಳಕೆ ವಿಚಾರವಾಗಿಯೂ ಹೆಚ್ಚಾಗಿ ಗಲಾಟೆ ನಡೆಯುತ್ತಿದ್ದ ಬಗ್ಗೆ ಪತಿ ಮಂಜುನಾಥ ಮಾಹಿತಿ ಕೊಟ್ಟಿದ್ದಾರೆ.
ಸಣ್ಣಪುಟ್ಟ ಘಟನೆಗಳು ನಡೆದು ನೆಮ್ಮದಿ ಇಲ್ಲದ ಕಾರಣದಿಂದಾಗಿ ಬೇರೆ ಬಾಡಿಗೆ ಮನೆ ಮಾಡಿದ್ದ ಮಂಜುನಾಥ್. ಆದರೆ ಆ ಹೊಸ ಮನೆಗೆ ಶಿಫ್ಟ್ ಆದ ಕೇವಲ ನಾಲ್ಕನೇ ದಿನದಲ್ಲೇ ರಾಮಕ್ಕ ಗ್ರಾಮದ ಬಸವರಾಜ್ ಎಂಬ ಯುವಕನೊಂದಿಗೆ ಪರಾರಿಯಾಗಿದ್ದಾಳೆ. ಈಕೆಯ ಜೊತೆಗೆ ಇಬ್ಬರು ಮಕ್ಕಳನ್ನ ಕೂಡ ರಾಮಕ್ಕ ಕರೆದುಕೊಂಡು ಹೋಗಿದ್ದಾರೆ.
ಈ ಘಟನೆ ಎರಡು ಕುಟುಂಬ ಹಾಗೂ ಪತಿ ಮಂಜುನಾಥ್ ಅವರಿಗೆ ಭಾರೀ ಆಘಾತ ಉಂಟುಮಾಡಿದೆ. ತಕ್ಷಣವೇ ಪೀಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಈ ಕುರಿತು ತನಿಖೆ ಆರಂಭಿಸಿದ್ದಾರೆ.
ಈ ಘಟನೆ ಮನೆಯೊಳಗಿನ ಬಿಕ್ಕಟ್ಟು ಹೇಗೆ ಆಕಸ್ಮಿಕವಾಗಿ ದೊಡ್ಡ ಸಮಸ್ಯೆಯಾಗಬಹುದು ಎಂಬುದಕ್ಕೆ ಸ್ಪಷ್ಟ ಉದಾಹರಣೆ. ಪತಿ ಮಂಜುನಾಥ್ ನೀಡಿದ ದೂರಿನಡಿ ಪೀಣ್ಯ ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪತ್ನಿ ರಾಮಕ್ಕ ಹಾಗೂ ಮಕ್ಕಳ ಪತ್ತೆಗಾಗಿ ಹುಡುಕಾಟ ಮುಂದುವರೆದಿದ್ದು, ಈ ಬಗ್ಗೆ ಇನ್ನಷ್ಟು ಮಾಹಿತಿಗಳು ಮುಂದಿನ ದಿನಗಳಲ್ಲಿ ಬಹಿರಂಗವಾಗುವ ನಿರೀಕ್ಷೆಯಿದೆ.