‘ಲವ್ ಮಾಕ್ಟೈಲ್ 2’ ಸಿನಿಮಾದಲ್ಲಿ ನಟಿಸಿದ್ದ ನಟಿ ಸುಷ್ಮಿತಾ ಗೌಡ ತಮ್ಮ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ ನೀಡಿದ್ದಾರೆ. ನಟಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಇತ್ತೀಚೆಗೆ ಸರಳವಾಗಿ ಅವರ ಸೀಮಂತ ಶಾಸ್ತ್ರ ನೆರವೇರಿದೆ.

ಹೊಸ ಅತಿಥಿಯ ಆಗಮನದ ಸಂತಸದಲ್ಲಿರುವ ಸುಷ್ಮಿತಾ ಗೌಡರ ಸೀಮಂತ ಶಾಸ್ತ್ರವನ್ನು ಸರಳವಾಗಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ನೇರಳೆ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ ನಟಿ, ತಾಯ್ತನದ ಸಂಭ್ರಮವನ್ನು ಆನಂದಿಸಿದ್ದಾರೆ. ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ನಟಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ಅಂದಹಾಗೆ, ಸುಷ್ಮಿತಾ ಗೌಡ ಐಟಿ ಕ್ಷೇತ್ರದ ಉದ್ಯೋಗಿಯಾದ ಅಶ್ವಿನ್ ಗೌಡ ಅವರನ್ನು ಹಲವು ವರ್ಷಗಳ ಕಾಲ ಪ್ರೀತಿಸಿ, 2022ರಲ್ಲಿ ವಿವಾಹವಾದರು. ಇವರ ವಿವಾಹ ಸಮಾರಂಭದಲ್ಲಿ ‘ಲವ್ ಮಾಕ್ಟೈಲ್ 2’ ತಂಡದ ಸದಸ್ಯರು ಹಾಗೂ ನಟಿ ಆಶಿಕಾ ರಂಗನಾಥ್ ಸೇರಿದಂತೆ ಹಲವರು ಭಾಗವಹಿಸಿದ್ದರು.





