ರಾಜ್ಯ ಕಾಂಗ್ರೆಸ್ ಪಾಳೆಯದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ಕುರಿತು ಪರ ವಿರೋಧಗಳು ನಡೆಯುತ್ತಿವೆ. ಕೆಪಿಸಿಸಿ ಅಧ್ಯಕ್ಷ ಆಗುವವರ ಬಗ್ಗೆ Terms & conditions ಬಗ್ಗೆ ಚರ್ಚೆ ಆಗಿಲ್ಲ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ವಿಷಯ ಹೈಕಮಾಂಡ್‌ಗೆ ಬಿಟ್ಟದ್ದು ಎಂದು ಸಚಿವ ಸತೀಶ್ ಜಾರಕಿಹೊಳಿ ಇಂದು ಬೆಂಗಳೂರಿನಲ್ಲಿ ಹೇಳಿದರು.
ಸಿಎಂ ಬಂದ ಬಳಿಕ ಎನೇನು ಚರ್ಚೆ ಆಗಿದೆ ಅಂತ ಮಾಹಿತಿ ಪಡೆಯುತ್ತೇನೆ. ಆ ಬಗ್ಗೆ ಹೈಕಮಾಂಡ್ ಅಭಿಪ್ರಾಯ ಕೇಳಿದ್ರೆ ನಮ್ಮ ನಮ್ಮ ವಿಚಾರ ತಿಳಿಸುತ್ತೇವೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನನ್ನ ಹೆಸರು ಮತ್ತು ಈಶ್ವರ್ ಖಂಡ್ರೆ ಹೆಸರು ಸೂಚಿಸಲಾಗಿದೆ. ಈಶ್ವರ್ ಖಂಡ್ರೆ ಕೆಪಿಸಿಸಿ ಅಧ್ಯಕ್ಷರಾದರೆ ನನ್ನ ಬೆಂಬಲವಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಈ ಬಾರಿ ನಾನು ಹೈಕಮಾಂಡ್ ನಾಯಕರನ್ನ ಭೇಟಿ ಮಾಡಿಲ್ಲ. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ, ಪರಿಷತ್ ಸದಸ್ಯರ ಆಯ್ಕೆ ಮತ್ತು ರಾಜ್ಯ ರಾಜಕೀಯ ಬೆಳವಣಿಗೆ ಹಾಗೂ ಬೇರೆ ಬೇರೆ ವಿಚಾರಗಳ ಕುರಿತು ಚರ್ಚಿಸಲು ಅನೇಕರು ಸಿದ್ಧರಿದ್ದರು. ಪರಿಷತ್ ಸದಸ್ಯರ ನೇಮಕ ವಿಚಾರದಲ್ಲಿ ನಾವು ಈಗಾಗಲೇ ಸಿಎಂ ಗೆ ಹೇಳಿದ್ದೇವೆ. ಅವರು ದೆಹಲಿಯಿಂದ ಬಂದ ಬಳಿಕ ಮಾಹಿತಿ ಪಡೆಯುವೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಕರ್ನಾಟಕ ಭವನ ಉದ್ಘಾಟನೆಗೆ ಪರಮೇಶ್ವರ್ ಅವರಿಗಿಲ್ಲ ಆಹ್ವಾನ
ಗೃಹಮಂತ್ರಿ ಡಾ. ಜಿ. ಪರಮೇಶ್ವರ್‌ರವರಿಗೆ ಕರ್ನಾಟಕ ಭವನ ಉದ್ಘಾಟನೆಗೆ ಆಹ್ವಾನ ನೀಡದ ವಿಚಾರವಾಗಿ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ನನಗೆ ಡಿಪಿಆರ್ ಅವರು ಆಹ್ವಾನ ಮಾಡಿದ್ರು. ಕೆಲವರು ಬಂದಿದ್ರು, ಕೆಲವರು ಬಂದಿರಲಿಲ್ಲ. ಅವರು ಇಲ್ಲ ಅಂದ್ರೆ ನಾನು. ನಾನು ಇಲ್ಲ ಅಂದ್ರೆ ಅವರು. ಸರ್ಕಾರದ ಪ್ರತಿನಿಧಿಯಾಗಿ ಮುಖ್ಯಮಂತ್ರಿಗಳು ಇದ್ದರು. ಇದೇನೂ ದೊಡ್ಡ ಇಶ್ಯೂ ಅಲ್ಲ. ಅವರ ಜೊತೆ ಮಾತನಾಡ್ತೀನಿ ಅಂತ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಹನಿಟ್ರ್ಯಾಪ್ ವಿಚಾರದಲ್ಲಿ ರಾಜಣ್ಣ ಅವರು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ. ಹನಿಟ್ರ್ಯಾಪ್ ವಿಚಾರವಾಗಿ ಪೊಲೀಸರು ತನಿಖೆ ಮಾಡಬೇಕಲ್ಲ. ಹನಿಟ್ರ್ಯಾಪ್ ವಿಚಾರದಲ್ಲಿ ತಾರ್ಕಿಕ ಅಂತ್ಯ ತಲುಪಬೇಕು. ಇದು ಗಂಭೀರವಾದ ವಿಚಾರ. ಹನಿಟ್ರ್ಯಾಪ್ ವಿಚಾರದಲ್ಲಿ ಯಾರು ಶತ್ರುಗಳು ಯಾರು ಮಿತ್ರರು ಅಂತ ಗೊತ್ತಾಗಲ್ಲ. ೩೦೦ ಕೀಮಿ ರೇಡಿಯಸ್ ನಲ್ಲಿ ಏನು ಬೇಕಾದರೂ ಆಗಬಹುದು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಅನುದಾನ:
ಬೆಳಗಾವಿ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಅನುದಾನ ದೊರೆಯದ ವಿಚಾರವಾಗಿ, ನಾವು ಅನುದಾನ ಕೇಳಿದ್ದೇವೆ. ನಮಗೂ ಸಿಗಬೇಕಾಗಿದೆ. ನಮ್ಮದು ವೇಟಿಂಗ್ ಲಿಸ್ಟ್ ನಲ್ಲಿದೆ. ನಾವೂ ಅನುದಾನ ಕೇಳ್ತಾನೇ ಇದ್ದೀವಿ. ಈ ವಿಚಾರವಾಗಿ ಒಂದು ಬಾರಿ ಸಭೆ ಮಾಡ್ತೀವಿ. ನಾವು ಲಿಸ್ಟ್ ಕೊಟ್ಟು ಬಹಳ ದಿನ ಆಯ್ತು ಎಂದು ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದರು.