ಬೆಂಗಳೂರು: ಜಪಾನ್ ಮೂಲದ ಪ್ರತಿಷ್ಠಿತ ಕಾರು ತಯಾರಿಕಾ ಕಂಪನಿ ಟೊಯೋಟಾ, ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಟೊಯೋಟಾ ಎಂದಾಕ್ಷಣ ಜನರ ಮನಸ್ಸಿಗೆ ಮೊದಲು ಬರುವುದೇ ಇನ್ನೋವಾ ಮತ್ತು ಫಾರ್ಚೂನರ್. ರಾಜಕೀಯ ನಾಯಕರಿಂದ ಹಿಡಿದು ಸಾಮಾನ್ಯ ಜನರವರೆಗೂ ಈ ಕಾರುಗಳ ಮೇಲೆ ವಿಶೇಷ ಪ್ರೀತಿ ಹಾಗೂ ವಿಶ್ವಾಸವಿದೆ. ಇದೀಗ ಆಟೋಮೊಬೈಲ್ ಜಗತ್ತಿನಲ್ಲಿ ಮತ್ತೆ ಇನ್ನೋವಾ ಅಬ್ಬರ ಶುರುವಾಗುವ ಕಾಲ ಸನ್ನಿಹಿತವಾಗಿದೆ.
ಎಥೆನಾಲ್ ಸಮಸ್ಯೆಗೆ ಟೊಯೋಟಾ ಶಾಶ್ವತ ಪರಿಹಾರ
ಇಷ್ಟು ದಿನ ವಾಹನ ಸವಾರರನ್ನು ಕಾಡುತ್ತಿದ್ದ ದೊಡ್ಡ ತಲೆನೋವೆಂದರೆ ಅದು ಎಥೆನಾಲ್ ಮಿಶ್ರಿತ ಪೆಟ್ರೋಲ್ ಸಮಸ್ಯೆ. ಎಥೆನಾಲ್ ಹಾಗೂ ಸಾಮಾನ್ಯ ಪೆಟ್ರೋಲ್ ಮಿಶ್ರಣದಿಂದ ಕಾರಿನ ಎಂಜಿನ್ ಹಾಳಾಗುತ್ತಿದೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿದ್ದವು. ಇದೀಗ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವಲ್ಲಿ ಟೊಯೋಟಾ ಯಶಸ್ವಿಯಾಗಿದೆ.
ಒಂದೇ ಕಾರಿನಲ್ಲಿ ಪೆಟ್ರೋಲ್, ಎಥೆನಾಲ್ ಹಾಗೂ ಬ್ಯಾಟರಿ (ಹೈಬ್ರಿಡ್) ಸೌಲಭ್ಯ
ಮಾರುಕಟ್ಟೆಯಲ್ಲಿ ಎದುರಾಗಿರುವ ಇಂಧನ ಸವಾಲುಗಳಿಗೆ ಟೊಯೋಟಾ ಒಂದೇ ವೇದಿಕೆಯಲ್ಲಿ ಪರಿಹಾರ ನೀಡಿದೆ. ಇಲ್ಲಿಯವರೆಗೆ ಬೇರೆ ಯಾವುದೇ ಕಾರು ಕಂಪನಿಗಳು ಮಾಡದ ವಿಶೇಷ ಪ್ರಯೋಗವನ್ನು ಭಾರತದ ಟೊಯೋಟಾ ಸಂಸ್ಥೆ ಮಾಡಿರುವುದು ಹೆಮ್ಮೆಯ ವಿಚಾರ. ನೂತನ ತಂತ್ರಜ್ಞಾನದ ಈ ಕಾರಿನಲ್ಲಿ ಪೆಟ್ರೋಲ್, ಎಥೆನಾಲ್ (Flex-Fuel) ಹಾಗೂ ಬ್ಯಾಟರಿ (Hybrid) ಮೂಲಕ ಚಲಿಸುವ ಸಾಮರ್ಥ್ಯವನ್ನು ನೀಡಲಾಗಿದೆ.
ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಸೀಟಿಂಗ್ ವ್ಯವಸ್ಥೆ
ಹೊಸ ಟೊಯೋಟಾ ಇನ್ನೋವಾ ಮಾದರಿಯು ಹಳೆಯ ಟೂರಿಸ್ಟ್ ಕಾರುಗಳಂತೆಯೇ 5 ಸೀಟರ್, 7 ಸೀಟರ್ ಹಾಗೂ 8 ಸೀಟರ್ ಆಯ್ಕೆಗಳಲ್ಲಿ ಲಭ್ಯವಿರಲಿದೆ. ಈ ಬಾರಿ ಇನ್ನಷ್ಟು ಬಲಿಷ್ಠ ಎಂಜಿನ್ ಮತ್ತು ಗಟ್ಟಿಮುಟ್ಟಾದ ಬಾಡಿಯೊಂದಿಗೆ ಗ್ರಾಹಕರ ಮನಗೆಲ್ಲಲು ಟೊಯೋಟಾ ಸಜ್ಜಾಗಿದೆ. ಇನ್ನು ಇದರ ಬೆಲೆ ಬಂದು 18 ಲಕ್ಷದಿಂದ ಶುರುವಾಗಿ 35 ರ ಲಕ್ಷದವರೆಗೆ ಜನರಿಗೆ ಲಭ್ಯವಿದೆ.





